ಆಧಾರ್ ಸಂಖ್ಯೆ ಜೋಡಣೆ ಅವಧಿ ವಿಸ್ತರಣೆಗೆ ಮನವಿ

ವಿಜಯಪುರ: ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿದಾರರ ಆಧಾರ್ ಸಂಖ್ಯೆ ಜೋಡಣೆ ಅವಧಿ ವಿಸ್ತರಿಸುವಂತೆ ಸಮಾಜಸೇವಕ ಅಬ್ದುಲ್‌ರಜಾಕ್ ಸಂಖ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ನಂತರ ಅವರು ಮಾತನಾಡಿ, ಸಾಮಾಜಿಕ ಭದ್ರತೆ ಅಡಿಯಲ್ಲಿ ಸಂಧ್ಯಾ ಸುರಕ್ಷಾ , ವೃದ್ಧಾಪ್ಯ, ಅಂಗವಿಕಲ, ಮನಸ್ವಿನಿ, ಮೈತ್ರಿ ವೇತನ ಸೇರಿದಂತೆ ಇನ್ನಿತರ ಪಿಂಚಣಿ ಸೌಲಭ್ಯ ಪಡೆಯುತ್ತಿರುವ ಲಾನುಭವಿಗಳಿಗೆ ಸರ್ಕಾರ ಆಧಾರ್ ಸಂಖ್ಯೆ ಜೋಡಣೆ ಮಾಡುವಂತೆ ತಿಳಿಸಿತ್ತು. ಆದರೆ, ಕೆಲವರು ಇನ್ನುವರೆಗೆ ಸಂಖ್ಯೆ ಜೋಡಣೆ ಮಾಡಿಲ್ಲ. ಅದಕ್ಕಾಗಿ ಸಂಖ್ಯೆ ಜೋಡಣೆ ಅವಧಿ ವಿಸ್ತರಿಸುವಂತೆ ಮನವಿ ಮಾಡಿದರು.
ಮನವಿ ಸಲ್ಲಿಸುವ ವೇಳೆ ಎಂ.ಎ. ಕಕ್ಕಳಮೇಲಿ, ಹನೀಫ್ ಕನ್ನೂರ, ಎ.ಸಿ. ಕನ್ನೊಳ್ಳಿ, ರಫೀಕ್ ಸಾಂಗಲೀಕರ್, ಉಸ್ಮಾನ್ ಇನಾಮದಾರ್, ಅಲ್ತಾಫ್ ಯಂಭತ್ನಾಳ, ಬಸವರಾಜ ಚಲವಾದಿ, ಮಹಾದೇವಪ್ಪ ಬಿರಾದಾರ, ಸುಭಾಸ ಕನ್ನೊಳ್ಳಿ, ಇಮಾಮಹುಸೇನ್ ರುದ್ರವಾಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *