ಕಾಂಗ್ರೆಸ್ ಮಹಿಳಾ ಕಾರ್ಯಕರ್ತರ ಪ್ರತಿಭಟನೆ

ವಿಜಯಪುರ: ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದಿಂದ ನಗರದ ಗಾಂಧಿಚೌಕ್‌ನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಮಹಾದೇವಿ ಗೋಕಾಕ ಮಾತನಾಡಿ, ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ನೀಡಿ ಗೌರವಿಸದೆ ಅಪಮಾನ ಮಾಡಿದೆ. ನಿಸ್ವಾರ್ಥ ಸೇವೆ ಮೂಲಕ ನಾಡಿಗೆ ಚಿರಪರಿಚಿತರಾಗಿದ್ದ ಸಿದ್ಧಗಂಗಾ ಶ್ರೀಗಳಂತಹ ಸಾಧಕರಿಗೆ ಭಾರತ ರತ್ನ ನೀಡದೇ ಇರುವುದು ವಿಷಾದದ ಸಂಗತಿ. ಈ ಬಗ್ಗೆ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ನಾಡಿನ ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಆ ಮೂಲಕ ಶ್ರೀಗಳಿಗೆ ಭಾರತ ರತ್ನ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಮಹಿಳಾ ಸಂಘಟಕಿಯರಾದ ಲಕ್ಷ್ಮಿ ದೇಸಾಯಿ, ಕಾಶೀಬಾಯಿ ಹಡಪದ, ಕುಸುಮಾ ಪವಾರ, ಗಂಗೂಬಾಯಿ ದುಮಾಳೆ, ಅಶ್ವಿನಿ ಬಿಜ್ಜರಗಿ, ಅಶ್ವಿನಿ ಬಿಜ್ಜರಗಿ, ಸಂಗೀತಾ ಹೂಗಾರ, ದೌಲತ್ ಇಂಗಳೆಸುರ, ಲಕ್ಷ್ಮೀ ಕ್ಷೀರಸಾಗರ, ಲಕ್ಷ್ಮೀ ಶಿವಣಗಿ, ಮಂಜುಳಾ ಗಾಯಕವಾಡ, ರಾಜೇಶ್ವರಿ ಚೋಳಕೆ, ಭಾರತಿ ನಾವಿ, ದಾವಲಬಿ ಬಾಗವಾನ ಸೇರಿದಂತೆ ಮುಂತಾದ ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *