ಡಿಸಿಗೆ ಕಣಕಾಲ ಗ್ರಾಮಸ್ಥರ ಮನವಿ

ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದ ಸಾರ್ವಜನಿಕ ಆಸ್ತಿಯನ್ನು ವಕ್ಫ್ ಆಸ್ತಿಯೆಂದು ಪರಿಗಣಿಸಲು ಮುಂದಾಗಿರುವ ಕ್ರಮ ಖಂಡಿಸಿ ಗ್ರಾಮಸ್ಥರು ಶನಿವಾರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು.

ಸಾರ್ವಜನಿಕರ ಉಪಯೋಗಕ್ಕಾಗಿ ಇರುವ ಸರ್ವೇ ನಂ 155 ಹಾಗೂ 12ರ ಜಾಗ ಸರ್ಕಾರಿ ಗಾಂವಠಾಣ ಜಾಗವಾಗಿದೆ. ಅವುಗಳನ್ನು ದರ್ಗಾದ ಆಸ್ತಿ ಎಂದು ಕೆಲವರು ನೋಂದಣಿ ಮಾಡಿಸಲು ಹೊರಟಿದ್ದಾರೆ. ಕೂಡಲೇ ಈ ಬಗ್ಗೆ ಜಾಗ್ರತೆ ವಹಿಸಿ ಸರ್ಕಾರಿ ಜಾಗವನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಸರ್ವೇ ನಂ.155 ಹಾಗೂ ಸರ್ವೇ ನಂ. 12ರಲ್ಲಿ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ಜಾಗದಲ್ಲಿ ಹೆಸ್ಕಾಂ ಕಚೇರಿ ಸ್ಥಾಪನೆಗೆ ಗ್ರಾಮ ಪಂಚಾಯಿತಿ ಅನುಮತಿ ನೀಡಿದೆ. ಇದೇ ಜಾಗದಲ್ಲಿ ಕಾಲುವೆ ಹಾಯ್ದು ಹೋಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಮನವಿ ಮಾಡಿದರು.

ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಸುನೀಲ ಭೈರವಾಡಗಿ, ರಾಜಶೇಖರ ಹುಲ್ಲೂರ, ಶಿವಾನಂದ ಹುಲ್ಲೂರ, ಸೋಮಪ್ಪ ಸಜ್ಜನ, ಪ್ರಸನ್ನ ಕುಲಕರ್ಣಿ ಇತರರಿದ್ದರು.