ಶಾಂತಿ-ಸುವ್ಯವಸ್ಥೆ ಕಾಪಾಡುವವನೇ ಪೊಲೀಸ್

Latest News

ಪ್ರಾಚೀನ ದೇವಾಲಯಗಳು ಸಮಾಜದ ಆಸ್ತಿ

ತ್ಯಾಗರ್ತಿ: ಪ್ರಾಚೀನ ದೇವಾಲಯಗಳು ಸಮಾಜದ ಆಸ್ತಿ ಆಗಿದ್ದು ಇವುಗಳ ಸಂರಕ್ಷಣೆ ಮಾಡಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಹೇಳಿದರು. ಸಮೀಪದ...

ಗ್ರಾಮಸ್ಥರ ಒಕ್ಕಲೆಬ್ಬಿಸಲು ಬಿಡಲ್ಲ

ಹೊಳೆಹೊನ್ನೂರು: ಸರ್ಕಾರಿ ಜಮೀನುಗಳಲ್ಲಿ ವಾಸ ಮಾಡುತ್ತಿರುವ ಗ್ರಾಮಸ್ಥರನ್ನು ಯಾವುದೆ ಕಾರಣಕ್ಕೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಗ್ರಾಮಾಂತರ ಶಾಸಕ ಅಶೋಕ್​ನಾಯ್್ಕ ಅಭಯ ನೀಡಿದರು. ಭದ್ರಾವತಿ ತಾಲೂಕಿನ...

ಐನ್​ಸ್ಟೀನ್​ ಸಿದ್ಧಾಂತಕ್ಕೇ ಸವಾಲು ಹಾಕಿದ್ದ ಭಾರತದ ಗಣಿತಜ್ಞ ವಶಿಷ್ಠ ನಾರಾಯಣ ಸಿಂಗ್​ ನಿಧನ

ಪಟನಾ: ಜರ್ಮನಿ ಮೂಲದ ಪ್ರಖ್ಯಾತ ವಿಜ್ಞಾನಿ ಆಲ್ಬರ್ಟ್​ ಐನ್​ಸ್ಟೀನ್​ ಅವರ ಸಾಪೇಕ್ಷೆ ಸಿದ್ಧಾಂತಕ್ಕೆ ಸವಾಲು ಹಾಕಿದ್ದ ಭಾರತದ ಪ್ರಖ್ಯಾತ ಗಣಿತಜ್ಞ ವಶಿಷ್ಠ ನಾಯಾರಣ...

ಚಮಚಾಗಿರಿ ಮಾಡ್ಕೊಂಡು ಟಿಕೆಟ್ ಪಡೆದವನಿಗೆ ಮನುಷ್ಯತ್ವ ಇದೆಯಾ?: ನಾರಾಣಗೌಡ ವಿರುದ್ಧ ಮಾಜಿ ಸಿಎಂ ಎಚ್​ಡಿಕೆ ವಾಗ್ದಾಳಿ

ಮಂಡ್ಯ: ಚಮಚಾಗಿರಿ ಮಾಡಿಕೊಂಡು ನಾರಾಯಣಗೌಡ ನನ್ನ ಬಳಿ ಎರಡನೇ ಬಾರಿಗೆ ಟಿಕೆಟ್ ಪಡೆದು ಹೋದ. ಅವನಿಗೆ ಮನುಷ್ಯತ್ವ ಇದೆಯಾ ಎಂದು ಪ್ರಶ್ನಿಸುವ ಮೂಲಕ...

ಬಾಲಿವುಡ್​ನ ದಿಗ್ಗಜ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್​ ಆರೋಗ್ಯ ಸ್ಥಿರ: ಬ್ರೀಚ್​ ಕ್ಯಾಂಡಿ ಆಸ್ಪತ್ರೆ ಪ್ರಕಟಣೆ

ಮುಂಬೈ: ಬಾಲಿವುಡ್​ನ ದಿಗ್ಗಜ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್​ ಅವರ ಆರೋಗ್ಯ ಸ್ಥಿತರವಾಗಿದೆ. ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ವೈದ್ಯರು...

ವಿಜಯಪುರ: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವವನೇ ನಿಜವಾದ ಪೊಲೀಸ್ ಎಂಬ ಜರ್ಮನ್ ಲೇಖಕರ ವ್ಯಾಖ್ಯಾನದ ಮೂಲಕ ನಿವೃತ್ತ ಪೊಲೀಸ್ ಉಪಾಧೀಕ್ಷಕ ಎಂ.ಐ. ಉಪ್ಪಿನಮಠ ಪೊಲೀಸರ ಜವಾಬ್ದಾರಿಗಳ ಕುರಿತು ಬೆಳಕು ಚೆಲ್ಲಿದರು.

ಇಲ್ಲಿನ ಪೊಲೀಸ್ ಪರೇಡ್ ಮೈದಾನಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾರು ಸಮಾಜದ ಕೆಡಕುಗಳನ್ನು ತೊಡೆದು ಹಾಕಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತಾರೋ ಅವರೇ ನಿಜವಾದ ಪೊಲೀಸ್ ಎಂದು ಜರ್ಮನ್ ಲೇಖಕರು ತಿಳಿಸಿದ್ದಾರೆ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಕೇವಲ ಪೊಲೀಸರ ಪಾತ್ರವಲ್ಲ, ಸಾರ್ವಜನಿಕರ ಸಹಕಾರವೂ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮಾಧ್ಯಮಗಳ ಪಾತ್ರ ಅನನ್ಯ. ಸಾರ್ವಜನಿಕರು ಹಾಗೂ ಆಡಳಿತ ವ್ಯವಸ್ಥೆಯ ಕೊಂಡಿಯಾಗಿ ಮಾಧ್ಯಮಗಳು ಕೆಲಸ ಮಾಡಬೇಕು ಎಂದರು.

ಇಂದು ಸಾರ್ವಜನಿಕರು ಪೊಲೀಸರ ಸಹವಾಸವೇ ಬೇಡವೆಂದು ದೂರ ಇರುತ್ತಿದ್ದಾರೆ. ಇದು ಸರಿಯಲ್ಲ, ಸಾರ್ವಜನಿಕರು ಪೊಲೀಸರ ಜತೆ ಮುಕ್ತವಾಗಿ ಸಮಸ್ಯೆ ಹಂಚಿಕೊಳ್ಳಬೇಕು. ಪೊಲೀಸರು ಸಹ ದರ್ಪ ಬದಿಗಿಟ್ಟು ಜನಸ್ನೇಹಿ ಆಡಳಿತ ನೀಡಬೇಕು. ಯಾವುದೇ ಆಸೆ, ಆಮಿಶಗಳಿಗೆ ಒಳಗಾಗದೇ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.

ಮಹಿಳೆಯರು, ಮಕ್ಕಳು, ನೊಂದವರಿಗೆ ಪೊಲೀಸರು ನೆರವಾಗಬೇಕು. ಕೆಲ ದಿನಗಳ ಹಿಂದೆ ಪೊಲೀಸ್ ಇಲಾಖೆಯನ್ನು ಕನಿಷ್ಠ ದೃಷ್ಟಿಯಿಂದ ನೋಡುತ್ತಿದ್ದರು. ಈಗ ಕಾಲ ಬದಲಾಗಿದ್ದು ಇಲಾಖೆ ಮಹತ್ವ ಹೆಚ್ಚಾಗಿದೆ. ಆ ಮಹತ್ವ ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.

ಇಂದು ಲಾಠಿ ಹಿಡಿಯುವ ಕೈ ಲೇಖನಿ ಕೂಡ ಹಿಡಿಯಬಹುದೆಂದು ಕೆಲ ಪೊಲೀಸರು ತೋರಿಸಿಕೊಟ್ಟಿದ್ದಾರೆ. ನಾಟಕಕಾರರಾಗಿ, ಕವಿಗಳಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ. ಪೊಲೀಸರಿಗೆ ಯಾವುದೇ ಜಾತಿ ಧರ್ಮ ಇಲ್ಲ. ಎಲ್ಲರೂ ಭಾರತೀಯರು ಎಂಬ ಭಾವ ಇರಬೇಕೆಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ ನಿಕ್ಕಂ ಮಾತನಾಡಿ, ಪೊಲೀಸರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ನಿವೃತ್ತ ನೌಕರರು ಹಾಗೂ ಪೊಲೀಸ್ ಸಿಬ್ಬಂದಿ ಮಕ್ಕಳ ಶಿಕ್ಷಣ, ಆರೋಗ್ಯ ಸೌಲಭ್ಯಕ್ಕೆ ಸಮರ್ಪಕವಾಗಿ ನಿಧಿ ಬಳಕೆಯಾಗುತ್ತಿದೆ ಎಂದರು.

ಸುವಿಧಾ ಗ್ಯಾಸ್ ಏಜೆನ್ಸಿ, ವ್ಯಾಯಾಮ ಶಾಲೆ, ಶೆಟೆಲ್ ಬ್ಯಾಡ್ಮಿಂಟನ್ ಮೈದಾನ, ವಾಚನಾಲಯ, ಪೊಲೀಸ್ ಆರೋಗ್ಯ ಕೇಂದ್ರ, ಶುಭಮಂಗಲ ಸಮುದಾಯ ಭವನ, ಪೊಲೀಸ್ ಕ್ಯಾಂಟೀನ್, ಹಿಟ್ಟಿನ ಗಿರಣಿ ಮುಂತಾದ ಸೌಲಭ್ಯಗಳು ಸಕಾಲಕ್ಕೆ ಸಿಗುತ್ತಿವೆ. ಕೆಲ ತಾಂತ್ರಿಕ ತೊಂದರೆಗಳಿದ್ದು ಅವುಗಳನ್ನೂ ಬಗೆಹರಿಸಲಾಗುವುದು. ನಿವೃತ್ತ ನೌಕರರಿಗಾಗಿ ಸೈಟ್ ಸೌಲಭ್ಯ ಸಹ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದರು.

ಪೊಲೀಸ್ ಕಲ್ಯಾಣ ನಿಧಿಯಿಂದ 1.48 ಲಕ್ಷ ಒಟ್ಟು ಹಣ ಈವರೆಗೆ ವಿನಿಯೋಗಿಸಲಾಗಿದೆ. ಅಂದಾಜು 32 ಲಕ್ಷ ರೂ. ಕಲ್ಯಾಣ ನಿಧಿಯಲ್ಲಿ ಇನ್ನೂ ಸಂಗ್ರಹವಿದೆ ಎಂದರು.

ಸೈನಿಕ ಶಾಲೆ ಪ್ರಾಂಶುಪಾಲ ವಿನಯ ತಿವಾರಿ, ಜಿಪಂ ಸಿಇಒ ವಿಕಾಸ್ ಕಿಶೋರ ಸುರಳಕರ ಇತರರಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮಗೌಡ ಸ್ಚಾಗತಿಸಿದರು. ಡಿಎಸ್‌ಪಿ ಡಿ. ಅಶೋಕ ವಂದಿಸಿದರು. ಶಿಕ್ಷಕ ಮಮದಾಪುರ ನಿರೂಪಿಸಿದರು.

- Advertisement -

Stay connected

278,465FansLike
562FollowersFollow
607,000SubscribersSubscribe

ವಿಡಿಯೋ ನ್ಯೂಸ್

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...

VIDEO: ರೋಹಿತ್​ ಶರ್ಮಾ...

ಟೀಂ ಇಂಡಿಯಾ ಓಪನರ್​ ರೋಹಿತ್​ ಶರ್ಮಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶಿಖರ್​ ಧವನ್​ ಅವರ ಕ್ಯೂಟ್​ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಸಿಕ್ಕಾಪಟೆ, ಲೈಕ್ಸ್​, ಕಾಮೆಂಟ್ಸ್​ಗಳು ಬರುತ್ತಿವೆ. ರೋಹಿತ್​ ಶರ್ಮಾ ಹಾಗೂ...

VIDEO: ಹೊಸ ಟ್ರಾಫಿಕ್​...

ಸದ್ಯಕ್ಕಂತೂ ಹೊಸ ಮೋಟಾರು ವಾಹನ ಕಾಯ್ದೆಯಡಿ ಟ್ರಾಫಿಕ್​ ರೂಲ್ಸ್​ ಬ್ರೇಕ್​ ಮಾಡಿದವರಿಗೆ ವಿಧಿಸುತ್ತಿರುವ ದಂಡದ ಬಗ್ಗೆಯೇ ಚರ್ಚೆ. ಇದೇ ವಿಚಾರವಾಗಿ ಹಲವು ರೀತಿಯ ವಿಡಿಯೋಗಳು, ಮೆಸೇಜ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಮೊದಲಿದ್ದ...

VIDEO| ಈ​ ವಿಡಿಯೋ...

ಬೀಜಿಂಗ್​: ಕಣ್ಣಿಗೆ ಕಾಣುವುದೆಲ್ಲಾ ಸತ್ಯವಲ್ಲ ಎಂಬುದಕ್ಕೆ ಈ ಘಟನೆ ಒಳ್ಳೆಯ ಉದಾಹರಣೆ. ಚೀನಾದ ಯಾಂಗ್ಜೆ ನದಿಯಲ್ಲಿ ನಿಗೂಢವಾಗಿ ಹಾಗೂ ವಿಚಿತ್ರವಾಗಿ ಗೋಚರವಾದ ಕಪ್ಪುಬಣ್ಣದ ಜೀವಿಯನ್ನು ಹೋಲುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲ...