ಬುರಣಾಪುರದಲ್ಲಿ ವಿಶ್ವ ಶಾಂತಿ ಪೂಜೆ

ವಿಜಯಪುರ: ನಗರದ ಹೊರವಲಯದಲ್ಲಿರುವ ಬುರಣಾಪುರದ ಪುಣ್ಯಕೋಟಿ ಗೋರಕ್ಷಾ ಕೇಂದ್ರದಲ್ಲಿ ದೇಶದ ಗಡಿಯಲ್ಲಿ ಶಾಂತಿ ನೆಲೆಸುವಂತೆ ಕೋರಿ ವಿಶ್ವ ಶಾಂತಿ ಪೂಜೆ ನಡೆಸಲಾಯಿತು.

ಪುಣ್ಯಕೋಟಿ ಗೋರಕ್ಷಾ ಕೇಂದ್ರದ ಸಂಚಾಲಕ ಬಸನಗೌಡ ಬಿರಾದಾರ ಮಾತನಾಡಿ, ಭಾರತದ ಗಡಿಯಲ್ಲಿ ಈಗ ಉದ್ರಿಕ್ತ ವಾತಾವರಣ ಉಂಟಾಗಿದ್ದು, ಸದ್ಯ ಅಲ್ಲಿ ಶಾಂತಿ ನೆಲೆಸುವ ಅವಶ್ಯಕತೆ ಇದೆ. ಉಗ್ರವಾದವನ್ನು ಬೆಂಬಲಿಸುವವರ ದಮನವಾಗಬೇಕಿದೆ ಎಂದರು.

ಲಕ್ಷ್ಮಣ ಶಿವಶರಣ ಮಾತನಾಡಿ, ದಾಳಿಯಲ್ಲಿ ಹುತಾತ್ಮ ಯೋಧರ ಕುಟುಂಬಗಳಿಗೆ ನಾವೆಲ್ಲ ನೆರವಾಗಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ ಎಂದರು.

ಗೋರಕ್ಷಾ ಕೇಂದ್ರದ ಪದಾಧಿಕಾರಿಗಳಾದ ಅಂಬರೀಷ್ ಹಳ್ಳೂರ, ಹನುಮಂತ ಪುಟ್ಟಿ, ಗುರು ನುಚ್ಚಿ, ಪವನ ಕೋಳೂರ ಮತ್ತಿತರರಿದ್ದರು.