ಸಾಧಕರನ್ನು ಗುರುತಿಸುವುದು ಕಷ್ಟದ ಕೆಲಸ

ವಿಜಯಪುರ: ಸಾಧಕರನ್ನು ಸನ್ಮಾನಿಸುವುದೆಂದರೆ ಮತ್ತೊಬ್ಬರು ಅಂಥ ಸಾಧನೆಯಲ್ಲಿ ತೊಡಗುವಂತೆ ಪ್ರೇರಣೆ ನೀಡುವುದಾಗಿದೆ ಎಂದು ನೇತ್ರತಜ್ಞ ಡಾ.ಪ್ರಭುಗೌಡ ಪಾಟೀಲ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರ ಆವರಣದಲ್ಲಿ ತನು ಫೌಂಡೇಷನ್ ಆಯೋಜಿಸಿದ್ದ ‘ತನು ಕನ್ನಡ ಮನ ಕನ್ನಡ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದು ಪ್ರಶಸ್ತಿಗಳು ಮಾರಾಟದ ಸರಕಾಗಿವೆ ಅಥವಾ ದೂರ ದೃಷ್ಟಿಕೋನದ ಫಲವಾಗಿವೆ. ಹೀಗಾಗಿ ನಿಜವಾದ ಸಾಧಕರನ್ನು ಗುರುತಿಸುವುದೇ ಕಷ್ಟದ ಕೆಲಸವಾಗಿದೆ. ಆ ನಿಟ್ಟಿನಲ್ಲಿ ನಿಷ್ಕಾಮಕರ್ಮ ಮಾಡುತ್ತಿರುವ ಸಾಧಕರನ್ನು ಗುರುತಿಸಿ, ಪ್ರಶಸ್ತಿ ನೀಡುತ್ತಿರುವುದು ಶ್ಲಾಘನಾರ್ಹ ಎಂದರು.

ಸಿಂದಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಲಿಂಗ ಚೌಧರಿ ಅಧ್ಯಕ್ಷತೆ ವಹಿಸಿ, ‘ತನು ಕನ್ನಡ ಮನ ಕನ್ನಡ’ ಎಂಬುದು ಇಲ್ಲಿವರೆಗೂ ಬರಿ ಘೋಷವಾಕ್ಯವಾಗಿ ಬಳಸುತ್ತಿದ್ದೇವು. ಆದರೆ, ಇಂದು ಆ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ತನು ೌಂಡೇಷನ್ ಅದಕ್ಕೆ ಹೊಸ ಅರ್ಥ ತಂದುಕೊಟ್ಟಿದೆ ಎಂದು ಹೇಳಿದರು.

ಸಮಾಜಸೇವಕಿ ವಿಜಯಾ ಬಾಳಿ ಮಾತನಾಡಿದರು. ಶ್ರೀಪಾದ ಜೋಷಿ, ಡಾ.ಗುರುರಾಜ ಕುಲಕರ್ಣಿ, ಡಾ.ಸಮೀರ ಹಾದಿಮನಿ, ಮನೋಹರ ದೊಡ್ಡಮನಿ, ಭಾಗೇಶ ಮುರಡಿ, ಮಲ್ಲಿಕ್‌ರಿಯಾನ್ ಅತ್ತಾರ್, ರಾಜೇಶ ಪವಾರ, ರವಿ ಬಾರಾಡಿ, ಈರಣ್ಣ ಹಂದಿಗನೂರ, ಗುರುಲಿಂಗಪ್ಪ ಲಾಯಗುಂದಿ, ಶ್ರೀಮಂತ ಬೂದಿಹಾಳ, ಅನೂಷಾ ಹಿರೇಮಠ, ಸ್ನೇಹ ಬಾಲಗಾಂವ, ಸಾನ್ವಿ ಗುಜಾರ, ಸೋಮನಗೌಡ ಕಲ್ಲೂರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತನು ಫೌಂಡೇಷನ್ ಅಧ್ಯಕ್ಷ ವಿಜುಗೌಡ ಕಾಳಶೆಟ್ಟಿ, ಗಣಪತಿ ರಜಪೂತ, ಶ್ರೀಧರ ಸುರಗಿಹಳ್ಳಿ, ಸಂಗನಬಸವರಾಜ, ಸದು ರೂಡಗಿ, ಸಂಪತ್‌ಕುಮಾರ ಉಪಸ್ಥಿತಿರಿದ್ದರು. ಪ್ರೊ.ಮಂಜುನಾಥ ಜುನಗೊಂಡ ಸ್ವಾಗತಿಸಿ, ನೀರೂಪಿಸಿದರು.