ಸಾಧಕ ಸ್ತ್ರೀಯರ ಯಶೋಗಾಥೆ ಅನುರಣನ

Latest News

ಆಸಿಡ್ ದಾಳಿಯ ಹೀನಾಯ ಕೃತ್ಯ

ದೆಹಲಿ ಹೊರವಲಯದ ಸಹಕಾರಿ ಗೃಹನಿರ್ವಣ ಕಾಲನಿಯೊಂದರಲ್ಲಿ 23 ವರ್ಷದ ಪ್ರೀತಿ ರಾಠಿ ತನ್ನ ತಂದೆ ಅಮರ್ ಸಿಂಗ್, ತಾಯಿ ರೋಶನಿ ಮತ್ತು ಸೋದರ...

ಪ್ರಜಾಪ್ರೀತಿಯಿಂದಲೇ ಅರಸನಿಗೆ ಯಶಸ್ಸು

ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರು ಧರ್ಮಜನಿಗೆ ಹೇಳುತ್ತಿದ್ದ ರಾಜಧರ್ಮದ ಮಾತುಗಳು ಹೀಗೆ ಮುಂದುವರಿದವು: ‘ಯುಧಿಷ್ಠಿರ! ರಾಜನೀತಿ ಎಂಬುದು ಆರು ಬಗೆಯ ಗುಣಾವಲಂಬನೆಯಿಂದ ಕೂಡಿರುತ್ತದೆ. 1)....

ಅಮೃತ ಬಿಂದು

ಶ್ರೀ ಶೈವಾಗಮ ದೃಢವ್ರತಮಹಿಂಸಾ ಚ ತಸ್ಮೆ ೖ ಪಂಚೇದ್ರಿಯಾರ್ಪಣಂ | ಏಕಾಗ್ರಚಿತ್ತಸಂಪತ್ತಿಃ ಪರತತ್ತೆ್ವೕ ಸದಾ ರತಿಃ || ಲಿಂಗೇ ನಿಜಮನೋಲೀನಂ ಸದ್ಯೋಮುಕ್ತಿಶ್ಚ ಶಾಶ್ವತೀ |...

ಆಡದೇ ಮಾಡುವವನು ರೂಢಿಯೊಳಗೆ ಉತ್ತಮನು

ಯೇಸುಕ್ರಿಸ್ತರ ಬೋಧನೆಗಳನ್ನು ಕೇಳುತ್ತಿದ್ದ ಶಿಷ್ಯರಾದಿಯಾಗಿ ಸಾಮಾನ್ಯ ಜನರಿಗೂ ಅವರ ಮಾರ್ವಿುಕವಾದ ಮಾತುಗಳು ಹಾಗೂ ದೂರದೃಷ್ಟಿಯ ಬೋಧನೆಗಳನ್ನು ಅರ್ಥಮಾಡಿಕೊಳ್ಳಲು ಅನೇಕ ವೇಳೆ ಕಷ್ಟವಾಗುತಿತ್ತು. ಅಂತಹ...

ವೆಬ್ ಸರಣಿಯಲ್ಲಿ ಸಾಯಿ ಪಲ್ಲವಿ?

ಸಿನಿಮಾಗಳ ರೀತಿ-ನೀತಿಗೂ ವೆಬ್ ಸೀರಿಸ್​ಗಳ ವ್ಯಾಕರಣಕ್ಕೂ ಸಿಕ್ಕಾಪಟ್ಟೆ ವ್ಯತ್ಯಾಸ ಇದೆ. ವೆಬ್ ಸರಣಿಗಳಿಗೆ ಯಾವುದೇ ರೀತಿಯಲ್ಲಿ ಸೆನ್ಸಾರ್​ನ ಅಡೆತಡೆಗಳಿಲ್ಲ. ಸ್ವಲ್ಪ ಬೋಲ್ಡ್ ಎನಿಸುವ...

ವಿಜಯಪುರ: ‘ಬದುಕು ನಮ್ಮೆದುರು ಇಡುವ ಆಯ್ಕೆಗಳು ಕಷ್ಟದ್ದಿರಬಹುದು ಆದರೆ, ಆಯ್ದ ಹಾದಿಯಲ್ಲಿ ದೃಢ ಹೆಜ್ಜೆಗಳನ್ನು ಇಟ್ಟಂತೆ ಇಡೀ ವಿಶ್ವವೇ ನಮ್ಮ ಸಹಾಯಕ್ಕೆ ಬರುತ್ತದೆ. ಮಹಿಳೆ ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ವಾಣಿಜ್ಯ ಸೇರಿದಂತೆ ಯಾವುದೇ ರಂಗಕ್ಕೂ ಹೊಸಬಳಲ್ಲ’ ಎಂದು ಬೆಂಗಳೂರಿನ ಎಚ್‌ಎಎಲ್ ಮ್ಯಾನೇಜ್‌ಮೆಂಟ್ ಅಕಾಡೆಮಿ ಡೀನ್ ಮತ್ತು ಜನರಲ್ ಮ್ಯಾನೇಜರ್ ನೇಮಿಚಂದ್ರ ಹೇಳಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಜ್ಞಾನ ಶಕ್ತಿ ಆವರಣದಲ್ಲಿ ಬುಧವಾರ ನಡೆದ 10ನೇ ವಾರ್ಷಿಕ ಘಟಿಕೋತ್ಸವದ ಭಾಷಣದಲ್ಲಿ ಅವರು ಅನೇಕ ಉದಾಹರಣೆಗಳ ಮೂಲಕ ಈ ಮಾತನ್ನು ಸಾದರಪಡಿಸಿದರು.

ಎರಡು ಬಾರಿ ನೋಬೆಲ್ ಪಾರಿತೋಷಕ ಪಡೆದ ವಿಜ್ಞಾನಿ ಮೆರಿಕ್ಯೂರಿ, ಸುಪ್ರಸಿದ್ಧ ಮನೋವಿಜ್ಞಾನಿ ಡಾ. ಎಡಿತ್ ಈಗರ್, 85 ವಾರಗಳ ಪ್ರಯತ್ನದಲ್ಲಿ 2.7 ಕಿಮೀ ವರ್ಸೋವಾ ರಾಕ್ ಬೀಚ್‌ನಲ್ಲಿರುವ 50 ಲಕ್ಷ ಕೆಜಿ ಅಪಾಯಕಾರಿ ತ್ಯಾಜ್ಯ ತೆಗೆದು ಸಮುದ್ರ ದಂಡೆಯನ್ನು ಬೆಳ್ಳಿ ಮರಳಿನಿಂದ ಹೊಳೆಯುವಂತೆ ಮಾಡಿದ ಆಪ್ರೋಸ್ ಶಾ, ತಾಯಿ ಮನೆ ತೆರೆದು 120 ಮಕ್ಕಳಿಗೆ ತಾಯಿಯಾದ ಸುಮಂಗಲಿ ಸೇವಾಶ್ರಮದ ಸೇವಕಿ ಜ್ಯೋತಿ, ಕ್ರಿಪೂ 2700ರಲ್ಲಿಯೇ ಪ್ರಧಾನ ವೈದ್ಯಳಾಗಿ ದಾಖಲಾದ ಈಜಿಪ್ತಿನ ಮೆರಿಟ್ ತಾ, ಗ್ರಹೋನ್ನತಿ ಮಾಪಕ ಕಂಡು ಹಿಡಿದ ಗ್ರೀಕ್ ಗಣಿತಜ್ಞೆ ಹಿಪಾಟಿಯಾ, ಹದಿನೆಂಟನೇ ಶತಮಾನದಲ್ಲಿಯೇ ನಕ್ಷತ್ರ ನಿಹಾರಿಕೆಗಳನ್ನು ಗುರುತಿಸಿದ ಕ್ಯಾರೋಲಿನ್ ಹರ್ಷಲ್, ರೈಟ್ ಸಹೋದರರು ವಿಮಾನ ಹಾರಿಸಿದ ಮತ್ತೈದನೇ ವರ್ಷಕ್ಕೆ ವಿಮಾನ ಹಾರಿಸಿದ ಮಹಿಳೆಯರ ಯಶೋಗಾಥೆಯನ್ನು ನೇಮಿಚಂದ್ರ ಅರ್ಥಪೂರ್ಣವಾಗಿ ವಿವರಿಸುತ್ತಾ ತಮ್ಮ ಹೇಳಿಕೆ ಸಮರ್ಥಿಸಿಕೊಂಡರು.

ಬಲಗಾಲು, ಬೆನ್ನು ಜಜ್ಜಿ ಹೋಗಿ ಏಮ್ಸ್ ಆಸ್ಪತ್ರೆಯಲ್ಲಿ ಅತೀ ನೋವಿನಿಂದ ನರಳುತ್ತಿದ್ದ ಅರುಣಿಮಾ ಸಿನ್ಹಾ ಎಂಬ ಮಹಿಳೆ ಮೇ 22, 2013ರಂದು ಎವರೆಸ್ಟ್‌ನ ತುತ್ತತುದಿಗೆ ಭಾರತದ ಬಾವುಟ ಹಾರಿಸುವ ಮೂಲಕ ಸಾಧನೆ ಮೆರೆದರು. ಹೆಳೆ ಹುಡುಗಿ ಶಿವ್ಯಾ ನಾಥ 23ನೇ ವಸಯ್ಯಿನಲ್ಲಿ ಪ್ರಪಂಚ ಪರ್ಯಟನೆ ನಡೆಸಿದಳು. ಇವರೆಲ್ಲಾ ನಮಗೆ ಸ್ಪೂರ್ತಿಯಾಗಬೇಕೆಂದರು.

ಅವಕಾಶಗಳ ಬಾಗಿಲು ತೆರೆದಿವೆ
ಇಂದು ಹೆಣ್ಣು ಮಕ್ಕಳ ಎದುರು ಅನೇಕ ಅವಕಾಶಗಳ ಬಾಗಿಲುಗಳು ತೆರೆದಿವೆ. 19ನೇ ಶತಮಾನಗಳ ಉತ್ತರಾರ್ಧದ ವರೆಗೆ ಹೆಣ್ಣು ಮಕ್ಕಳಿಗೆೆ ವೈದ್ಯರಂಗಕ್ಕೆ ಪ್ರವೇಶವಿರಲಿಲ್ಲ. 1940ರವರೆಗೆ ಹೆಣ್ಣು ಮಕ್ಕಳಿಗೆ ಇಂಜಿನಿಯರಿಂಗ್ ರಂಗಕ್ಕೆ ಪ್ರವೇಶವಿರಲಿಲ್ಲ. 1992ರವರೆಗೆ ಹೆಣ್ಣು ಮಕ್ಕಳಿಗೆ ಸೇನೆಯ ಬಾಗಿಲು ಮುಚ್ಚಿತ್ತು. ದಶಕಗಳ ಹಿಂದೆ ಹೆಣ್ಣು ಮಕ್ಕಳಿಗೆ ವಾಣಿಜ್ಯ ಕ್ಷೇತ್ರಗಳಲ್ಲಿ ಅದ್ಭುತದ ಸ್ವಾಗತವೇನೂ ಇರಲಿಲ್ಲ. ವೈಮಾನಿಕ ರಂಗ, ಅಂತರಿಕ್ಷಯಾನ ಹೆಣ್ಣು ಮಕ್ಕಳಿಗೆ ದೂರದ ಕನಸಾಗಿತ್ತು. ಇಂದು ನಮ್ಮ ಹೆಣ್ಣು ಮಕ್ಕಳ ಎದುರು ಬಹಳಷ್ಟು ಬಾಗಿಲುಗಳು ತೆರೆದಿವೆ. ಸಾಧನೆಯ ರಂಗ ಕೈ ಬೀಸಿ ಕರೆದಿವೆ. ಈ ಎಲ್ಲ ಅವಕಾಶಗಳನ್ನು ನಮ್ಮ ಹೆಣ್ಣು ಮಕ್ಕಳು ಬಳಸಿಕೊಳ್ಳಲಿ. ಇಂದು ನಮ್ಮೆದುರು ಸವಾಲುಗಳು ಇಲ್ಲ ಎಂದಲ್ಲ. ಕಾನೂನು ಅವಕಾಶ ಕೊಟ್ಟರೂ, ಇಂದಿಗೂ ಮಹಿಳೆ ತಾನು ಬಯಸಿದ ಉದ್ಯೋಗವನ್ನು ಮಾಡಲು ಹೋರಾಡಬೇಕಿದೆ ಎಂದರು.

ಯಶಸ್ಸಿನ ಮಾನದಂಡ
ನಾವು ಎಷ್ಟು ಹಣ ಮಾಡಿದೆವು, ವೃತ್ತಿಯ ಏಣಿಯಲ್ಲಿ, ಸಾಮಾಜಿಕ ಪ್ರತಿಷ್ಠೆಯಲ್ಲಿ ಎಷ್ಟು ಮೇಲೆ ಏರಿದೆವು ಎಂಬುದು ನಮ್ಮ ಯಶಸ್ಸನ್ನು ನಿರ್ಧರಿಸುವುದಿಲ್ಲ. ನಾವು ಸಮಾಜಕ್ಕೆ ಏನನ್ನು ಕೊಟ್ಟೆವು, ಎಷ್ಟು ಕೊಟ್ಟೆವು ಎಂಬುದು ನಾವು ಎಷ್ಟು ಯಶಸ್ವಿಯಾದ್ದೇವೆಂಬುದನ್ನು ನಿರ್ಧರಿಸುತ್ತದೆ. ಹಾಗೆಯೇ ಭೂ ತಾಯಿಯ ಎದೆಯ ಮೇಲೆ ನಮ್ಮ ಕಾರ್ಬನ್ ಹೆಜ್ಜೆಗಳು ಎಷ್ಟು ಹಗುರವಿದ್ದವು ಎಂಬುದು ಕೂಡಾ, ನಮ್ಮ ಯಶಸ್ಸಿನ ಮಾನದಂಡವಾಗಬೇಕು.

ಭಾರತದ ಪುನರುತ್ಥಾನವನ್ನು ನಾನು ಜ್ಯೋತಿಯಂಥ ಎಳೆಯರ ಪ್ರಯತ್ನದಲ್ಲಿ, ಬದುಕಿನತ್ತ ಅವರು ತೋರುವ ಅನಂತ ಪ್ರೀತಿ ಮತ್ತು ಕೃತಜ್ಞತೆಯಲ್ಲಿ, ತಾವು ತೆಗೆದುಕೊಂಡದ್ದಕ್ಕಿಂತ ಹೆಚ್ಚು ಸಮಾಜಕ್ಕೆ ನೀಡುವ ಧ್ಯೇಯದಲ್ಲಿ ಕಾಣುತ್ತೇನೆ ಎಂದು ‘ತಾಯಿಮನೆ’ ಮೂಲಕ 120 ಮಕ್ಕಳಿಗೆ ಆಶ್ರಯ ನೀಡಿದ ಸಾಧಕಿಯನ್ನು ಪರಿಚಯಿಸಿದರು.
ಹೊಸ ಜಗತ್ತಿನ ಹರಿಕಾರರಾಗುವ ಆಫ್ರೋಸ್ ಶಾ ಅಂಥ ಎಳೆಯರಲ್ಲಿ ಕಾಣುತ್ತೇನೆ. ಇವರು ತಾವು ಹೊರ ಜಗತ್ತಿನಲ್ಲಿ ಬಯಸುತ್ತಿದ್ದ ಪರಿವರ್ತನೆಯನ್ನು ತಮ್ಮಿಂದ ಆರಂಭಿಸಿದರು. ಕತ್ತಲೆಯಿಂದ ಬೆಳಕಿನೆಡೆಗೆ ಹೆಜ್ಜೆ ಇಟ್ಟು ದಾರಿ ತೋರಿಸಿದರು. ಗಾಂಧಿ ಇಂದಿಗೂ ಪ್ರಸ್ತುತವಾಗುವುದು ಇದೇ ಕಾರಣಕ್ಕೆ ಎಂದು ಉದಾಹರಿಸಿದರು.

ಪರಿವರ್ತನೆ ನಮ್ಮಿಂದಲೇ ಶುರುವಾಗಲಿ
ಬದುಕಿನಲ್ಲಿ ಕೇವಲ ಐಕ್ಯು (ಇಂಟೆಲಿಜೆಂಟ್ ಕೋಷೆಂಟ್) ಹಾಗೂ ಇಕ್ಯು (ಎಮೋಷನಲ್ ಕೋಷೆಂಟ್) ಇದ್ದರೆ ಸಾಲದು. ಮಾರಲ್ ಕೋಶಂಟ್, ಎಥಿಕಲ್ ಕೋಶಂಟ್‌ಗಳೂ ಮುಖ್ಯ. ಇಂದು ವಿದ್ಯಾವಂತ ಬುದ್ಧಿವಂತ ಎಳೆಯರಿಂದ ಎಷ್ಟೆಲ್ಲ ಅಪರಾಧಗಳು ಜರುಗುತ್ತಿವೆ ಎಂದು ನೋಡಿದಾಗ ಆಘಾತವಾಗುತ್ತದೆ. ಕಳೆದ ತಿಂಗಳು ಒಂದು ಶೈಕ್ಷಣಿಕ ಸಂಸ್ಥೆಯಿಂದ ಯುವ ಮ್ಯಾನೇಜರ್ ಒಬ್ಬಾತ 62 ಕೋಟಿ ರೂ.ಗಳನ್ನು ಲಪಟಾಯಿಸಿದ್ದು ಓದಿದೆವು. ಬೆಂಗಳೂರಿನ ವಿದ್ಯಾವಂತ, ಗೌರವಾನ್ವಿತ ಬಡಾವಣೆಯಲ್ಲಿ, ಓರ್ವ ಮೊಮ್ಮಗಳು ಅಜ್ಜಿಯನ್ನು ಕೊಂದ ಸುದ್ದಿ ಎದೆ ನಡುಗಿಸಿತ್ತು. ಮತ್ತೊಂದು ಬಡಾವಣೆಯಲ್ಲಿ, ಮೊಮ್ಮಗ ತನ್ನ ಗೆಳೆಯರೊಡನೆ, ತನ್ನ ಅಜ್ಜ ಅಜ್ಜಿ ಇಬ್ಬರನ್ನೂ ಮುಗಿಸಿದ್ದ. ಮೊನ್ನೆ ತಾನೆ ಓದಿದ್ದೀರಿ, ಹುಡುಗ ಹುಡುಗಿಯನ್ನು ೇಸ್‌ಬುಕ್‌ನಲ್ಲಿ ಭೇಟಿಯಾದ, ಮದುವೆಯಾದರು, ಮುದ್ದಾದ ಮಗು. ಆತ ಹೆಂಡತಿ ಮಗು ಇಬ್ಬರನ್ನೂ ಸುಟ್ಟು ಭಸ್ಮ ಮಾಡಿದ. ಮಡದಿ ತನ್ನೆಲ್ಲ ಸಮಯವನ್ನು ಸೋಷಿಯಲ್ ಮೀಡಿಯಾದಲ್ಲಿ ಚಾಟ್ ಮಾಡುತ್ತಾ ಕಳೆಯುತ್ತಿದ್ದಳೆಂಬ ಕಾರಣ ಕೊಟ್ಟ.
ಇದಲ್ಲ ನಾವು ಬಯಸಿದ ಸಮಾಜ. ಇದು ನಾವು ಇಚ್ಛಿಸಿದ ವಿಶ್ವವಲ್ಲ. ಇದು ನಾವು ಹೆಮ್ಮೆ ಪಡುತ್ತಿದ್ದ ಭಾರತೀಯ ಸಂಸ್ಕೃತಿಯಲ್ಲ. ಆದರೂ ಈ ವಿಶ್ವವನ್ನು ನಾವು ಸೃಷ್ಟಿಸಿದ್ದೇವೆ. ಇದನ್ನು ಬದಲಿಸುವುದು ಹೇಗೆ? ಹೊಸ ಪ್ರಪಂಚವನ್ನು ಸೃಷ್ಟಿಸುವುದು ಹೇಗೆ? ಅದು ನಮ್ಮಿಂದ ಆರಂಭವಾಗಬೇಕು. ಇಲ್ಲಿರುವ ನಾವು ಒಬ್ಬೊಬ್ಬರಿಂದಲೂ ಅದು ಸಾಧ್ಯವಿದೆ. ಜಗತ್ತಿನಲ್ಲಿ ನೀವು ಇಚ್ಛಿಸುವ ಬದಲಾವಣೆ ಮೊದಲು ನಿಮ್ಮಿಂದ ಆರಂಭವಾಗಲಿ ಎಂದು ವಿದ್ಯಾರ್ಥಿನಿಯರಿಗೆ ತಿಳಿಸಿದರು.

ನಾನು ಶಾಲೆ ಓದಿದ ಕಾಲದಲ್ಲಿ ನನ್ನೆದುರು ಸ್ಪೂರ್ತಿ ನೀಡುವಂಥ ಮಹಿಳಾ ಮಾದರಿಗಳಿರಲಿಲ್ಲ. ನಾನು ಓದಿದ ಯಾವ ಪುಸ್ತಕದಲ್ಲೂ ಮಹಿಳಾ ಸಾಧಕಿಯರ ಉಲ್ಲೇಖವಿರಲಿಲ್ಲ. ನಾಲ್ಕು ದಶಕಗಳಿಗೂ ಹಿಂದೆ, ಪಿಯುಸಿ ಮುಗಿಸಿ ಇಂಜಿನಿಯರಿಂಗ್ ರಂಗ ಪ್ರವೇಶಿಸುವಾಗ ನನ್ನಲ್ಲಿ ಸಾಕಷ್ಟು ಅಳುಕು ಆತಂಕವಿತ್ತು. ನನ್ನೆದುರು ಉದಾರಣೆಗಳಿರಲಿಲ್ಲ. ಇವೆಲ್ಲ ಹೆಂಗಸರ ರಂಗವಲ್ಲ. ಕಾರ್ಪೆಂಟ್ರಿ ಇರುತ್ತೆ, ಮಷೀನ್ ಶಾಪ್ ಇರುತ್ತೆ ಎಂದೆಲ್ಲ ಹೆದರಿಸಿದವರಿದ್ದರು. ಅಳುಕುತ್ತಾ ಒಳಹೊಕ್ಕ ನಾನು ಮತ್ತು ನನ್ನ ಗೆಳತಿ ವಿಶ್ವವಿದ್ಯಾಲಯಕ್ಕೆ ರ‌್ಯಾಂಕ್ ಪಡೆದು ಹೊರಬಂದಾಗಲೆ, ಅಲ್ಲಿ ಹೆಣ್ಣು ಮಕ್ಕಳಿಗೆ ಅಸಾಧ್ಯವಾದದ್ದು ಏನೂ ಇರಲಿಲ್ಲ್ಲವೆಂದು ಅರಿವಾದದ್ದು.
ನೇಮಿಚಂದ್ರ, ಎಚ್‌ಎಎಲ್ ಮ್ಯಾನೇಜ್‌ಮೆಂಟ್ ಅಕಾಡೆಮಿ ಡೀನ್ ಮತ್ತು ಜನರಲ್ ಮ್ಯಾನೇಜರ್ ಬೆಂಗಳೂರು

ಡಾ. ನಂದಾಗೆ ಗೌರವ ಡಾಕ್ಟರೇಟ್
ಸಂಗೀತ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿರುವ ಧಾರವಾಡದ ಕರ್ನಾಟಕ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ನಂದಾ ಪಾಟೀಲ ಅವರಿಗೆ ರಾಜ್ಯ ಮಹಿಳಾ ವಿವಿಯಿಂದ ಪ್ರಸಕ್ತ ಸಾಲಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ಬುಧವಾರ ತೊರವಿ ಬಳಿಯ ರಾಜ್ಯ ಮಹಿಳಾ ವಿವಿಯ ಜ್ಞಾನಶಕ್ತಿ ಆವರಣದಲ್ಲಿ ನಡೆದ 10ನೇ ಘಟಿಕೋತ್ಸವದಲ್ಲಿ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಪದವಿ ಪ್ರದಾನ ಮಾಡಿದರು.

ಇದೇ ಸಂದರ್ಭ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 56 ವಿದ್ಯಾರ್ಥಿನಿಯರಿಗೆ 67 ಚಿನ್ನದ ಪದಕಗಳನ್ನು ವಿತರಿಸಲಾಯಿತು. ಮತ್ತು 46 ವಿದ್ಯಾರ್ಥಿನಿಯರಿಗೆ ಪಿಎಚ್‌ಡಿ ಹಾಗೂ 10 ವಿದ್ಯಾರ್ಥಿನಿಯರಿಗೆ ಎಂಫಿಲ್ ಪದವಿ ಪ್ರದಾನ ಮಾಡಲಾಯಿತು.
ಮಹಿಳಾ ವಿವಿ ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರಿಂದ ಮಹಿಳಾ ಗೀತೆ ಹಾಗೂ ನಾಡಗೀತೆ ಮೊಳಗಿದವು. ಕುಲಪತಿ ಪ್ರೊ. ಸಬಿಹಾ ಸ್ವಾಗತಿಸಿದರು. ಪಿಎಚ್‌ಡಿ, ಎಂಫಿಲ್ ಹಾಗೂ ರ‌್ಯಾಂಕ್ ವಿಜೇತರ ಪಟ್ಟಿಯನ್ನು ಕುಲಸಚಿವೆ ಪ್ರೊ. ಆರ್. ಸುನಂದಮ್ಮ ಮಂಡಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ. ಪಿ.ಜಿ. ತಡಸದ ಅವರು ಮೆರವಣಿಗೆಯ ನೇತೃತ್ವ ವಹಿಸಿದ್ದರು. ಘಟಿಕೋತ್ಸವದಲ್ಲಿ ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಮಾಧ್ಯಮ ವೃಂದದವರು, ಬಂಗಾರ ಪದಕ ವಿಜೇತರು, ಪಿಎಚ್‌ಡಿ ಮತ್ತು ಎಂಫಿಲ್ ಪದವಿ ಪುರಸ್ಕೃತರು, ಪಾಲಕರು ಉಪಸ್ಥಿತರಿದ್ದರು.

ರಾಜ್ಯಪಾಲರ ಗೈರು
ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ವಜುಭಾಯಿ ವಾಲಾ, ಸಮಕುಲಾಧಿಪತಿಗಳಾಗಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡರು ಹಾಗೂ ಜಿಲ್ಲೆ ಉಸ್ತುವಾರಿ ಮಂತ್ರಿಗಳ ಅನುಪಸ್ಥಿತಿ ಘಟಿಕೋತ್ಸವ ಕಳೆಗುಂದುವಂತೆ ಮಾಡಿತು. ರಾಜ್ಯಪಾಲರು ಮೊದಲೇ ಬರಲಾಗುವುದಿಲ್ಲವೆಂದು ಹೇಳಿದ ಕಾರಣ ಆಮಂತ್ರಣ ಪ್ರತಿಯಲ್ಲೂ ಹೆಸರು ನಮೂದಿಸಿರಲಿಲ್ಲ. ಇನ್ನು ಹೆಸರಿದ್ದರೂ ಉನ್ನತ ಶಿಕ್ಷಣ ಸಚಿವರು ಆಗಮಿಸಿರಲಿಲ್ಲ. ವೇದಿಕೆ ಮುಂಭಾಗದಲ್ಲಿ ವಿದ್ಯಾರ್ಥಿನಿಯರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಅವರ ಸ್ವಾಗತ ಭಾಷಣ ಹಾಗೂ ನೇಮಿಚಂದ್ರ ಅವರ ಘಟಿಕೋತ್ಸವ ಭಾಷಣ ಬಳಿಕ ಸಾಂಪ್ರದಾಯಿಕವಾಗಿ ಫೋಟೊ ಸೆಶೆನ್ ನಡೆಯಿತು. ಮೆರವಣಿಗೆ ಕೂಡ ಮಂಕಾಗಿತ್ತು.

- Advertisement -

Stay connected

278,507FansLike
569FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....