ಮಹಿಳೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲಿ

ವಿಜಯಪುರ: ವಿದ್ಯಾವಂತ ಯುವತಿಯರು ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಉದ್ಯೋಗ ಮಾಡುವ, ತಮ್ಮ ಕೌಶಲ ಬಳಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ.ಸಬಿಹಾ ಹೇಳಿದರು.

ಸ್ಥಳೀಯ ಸಿಕ್ಯಾಬ್ ಎ.ಆರ್.ಎಸ್. ಇನಾಮದಾರ್ ಮಹಿಳಾ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ, ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಗಂಡು ಮಕ್ಕಳಿಂದ ಮಾತ್ರ ಮನೆ ಬೆಳಗಬೇಕೆಂಬ ಮನೋಭಾವ ಇಂದಿನ ಪಾಲಕರಲ್ಲಿ ಬದಲಾಗುತ್ತಿದ್ದು, ಇಂದು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದ ಅವಕಾಶಗಳನ್ನು ಒದಗಿಸಿಕೊಡುತ್ತಿ ದ್ದಾರೆ. ಪ್ರತಿಯೊಬ್ಬರೂ ತಮಗೆ ಶಿಕ್ಷಣ ನೀಡಿದ ವಿದ್ಯಾಸಂಸ್ಥೆಗಳಿಗೆ ಋಣಿಯಾಗಿರಬೇಕು ಹಾಗೂ ಅವರ ಕಾಯಕ ಪ್ರವೃತ್ತಿಯನ್ನು ಸ್ಮರಿಸಿ ಋಣಸಂದಾಯ ಮಾಡಬೇಕೆಂದು ಹೇಳಿದರು.

ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಸ್.ಎ. ಪುಣೇಕರ ಅಧ್ಯಕ್ಷತೆ ವಹಿಸಿ, ಭ್ರೂಣಹತ್ಯೆಯಂತಹ ಸಾಮಾಜಿಕ ಪಿಡುಗು ಅನೇಕ ಅನಿಷ್ಟಗಳಿಗೆ ಕಾರಣವಾಗಿದೆ. ಶಿಕ್ಷಣ ಪಡೆದ ವಿದ್ಯಾರ್ಥಿನಿಯರು ಈ ಕುರಿತು ಜಾಗೃತಿ ಮೂಡಿಸಬೇಕೆಂದು ಹೇಳಿದರು.

ಹಳೇ ವಿದ್ಯಾರ್ಥಿನಿಯರ ಸಂಘದ ಅಧ್ಯಕ್ಷೆ ಸೆಂಟ್ ಜೋಸ್ೆ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅನ್ನಾಲಿಸಾ ಬಾಸ್ಕೊ ಮಾತನಾಡಿದರು. ಸಂಸ್ಥೆ ಕಾರ್ಯದರ್ಶಿ ಎ.ಎಸ್. ಪಾಟೀಲ, ಕಾಲೇಜು ಆಡಳಿತ ಮಂಡಳಿ ಚೇರ್ಮನ್ ರಿಯಾಜ್ ಾರೂಖಿ, ನಿವೃತ್ತ ಪ್ರಾಚಾರ್ಯ ಎ.ಎಂ. ಬಗಲಿ, ಸಂಸ್ಥೆ ಪದಾಧಿಕಾರಿ ನಜೀಬ್ ಬಕ್ಷಿ, ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಹಿಮಾ ರಾಠೋಡ ಉಪಸ್ಥಿತರಿದ್ದರು.

ವಿಶ್ವವಿದ್ಯಾಲಯ ರ‌್ಯಾಂಕ್ ವಿಜೇತ ವಿದ್ಯಾರ್ಥಿನಿಯರಾದ ಆಸ್ಮಾ ಮಣಿಯಾರ್, ಪ್ರಿಯಾಂಕಾ ಬಿರಾದಾರ, ಸುಜ್ಞಾನಿ ಸಿಂಗೆ ಹಾಗೂ ಸ್ನಾತಕೋತ್ತರ ರ‌್ಯಾಂಕ್ ವಿಜೇತೆ ಐಶ್ವರ್ಯ ಕರ್ಪೂರಮಠ ಅವರನ್ನು ಸನ್ಮಾನಿಸಲಾಯಿತು. ಪ್ರೊ.ಸಿ.ಎಲ್. ಪಾಟೀಲ ಸರ್ವರನ್ನು ಸ್ವಾಗತಿಸಿದರು. ಡಾ.ಮಲ್ಲಿಕಾರ್ಜುನ ಮೇತ್ರಿ ಅತಿಥಿಗಳನ್ನು ಪರಿಚಯಿಸಿದರು. ಪ್ರಾಚಾರ್ಯ ಡಾ.ಮಹಮ್ಮದ್ ಅ್ಜಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲಿಶಾ ದೇಸಾಯಿ, ವಸುಧಾ ಸರಾಫ್ ಹಾಗೂ ಸುಷ್ಮಾ ಕೊಕಟನೂರ ನಿರೂಪಿಸಿದರು. ಡಾ.ಮಹಮ್ಮದ್ ಸಮಿಯುದ್ದೀನ್ ವಂದಿಸಿದರು.

ಜ್ಞಾನ ಸ್ವತ್ತಾಗಬೇಕೆ ಹೊರತು, ಲೌಕಿಕ ವಸ್ತುಗಳಲ್ಲ. ವಿದ್ಯಾರ್ಥಿಗಳು ಅಂಕಗಳ ಹಿಂದೆ ಓಡದೇ ಪ್ರಜ್ಞಾವಂತ ನಾಗರಿಕರಾಗಬೇಕು. ಶಿಕ್ಷಣ ಪಡೆಯುವ ಪ್ರತಿಯೊಬ್ಬ ಮಹಿಳೆ ಸ್ವಾವಲಂಬಿ ಬದುಕು ಕಟ್ಟಿಕೊಂಡಾಗ ಎಲ್ಲ ರಂಗಗಳ ಅಭಿವೃದ್ಧಿ ಸಾಧ್ಯ.
ಪ್ರೊ.ಸಬಿಹಾ, ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ