ಇಂದಿನಿಂದ ಭಾರತೀಯ ಸಂಸ್ಕೃತಿ ಉತ್ಸವ

ವಿಜಯಪುರ: ಐತಿಹಾಸಿಕ ನಗರಿ ವಿಜಯಪುರದ ಕಗ್ಗೋಡದಲ್ಲಿ ಡಿ.24ರಿಂದ 31ರ ವರೆಗೆ ನಡೆಯಲಿರುವ 8 ದಿನಗಳ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ 20 ಲಕ್ಷ ಜನ ಸೇರುವ ನಿರೀಕ್ಷೆ ಇದೆ.

ಸೋಮವಾರ ಜ್ಞಾನಯೋಗಾಶ್ರಮದ ಶ್ರೀಸಿದ್ಧೇಶ್ವರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಉತ್ಸವ ಪ್ರಾರಂಭವಾಗಲಿದ್ದು, ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. 150ಕ್ಕೂ ಹೆಚ್ಚು ತಂಡಗಳಿಂದ ಕಲಾ ಪ್ರದರ್ಶನ, 101 ಕರಡಿ ಮಜಲು, 101 ಡೊಳ್ಳು ಕುಣಿತ, ಹಲಗೆ ಮಜಲು, ಚೌಡಕಿ ಮೇಳ, ಲಂಬಾಣಿ ನೃತ್ಯ, ಸುಡುಗಾಡು ಸಿದ್ಧರ ನೋಟ, ನವೀನ ಮಾದರಿ ಹೆಜ್ಜೆ ಮೇಳ, ಸಂಬಾಳ ವಾದನ, ಕುದುರೆ ಕುಣಿತ, ತಾಸೆ ವಾದನ, ಗಾರುಡಿ ಗೊಂಬೆ, ದೊಡ್ಡಾಟ, ಕುಂಭ ಮೇಳ, ಸ್ತಬ್ಧ ಚಿತ್ರಗಳ ಅನಾವರಣಗೊಳ್ಳಲಿದೆ.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಡಿ.25ರಂದು 1 ಲಕ್ಷ ಮಾತೆಯರಿಂದ ಮಕ್ಕಳಿಗೆ ಕೈತುತ್ತು ತಿನ್ನಿಸುವ ಮಾತೃಸಂಗಮ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.

ಡಾ. ವಿಜಯ ಸಂಕೇಶ್ವರ ಮತ್ತಿತರರು ಭಾಗಿ: ಡಿ.27ರ ಕೃಷಿ ಸಂಗಮದಲ್ಲಿ ಧರ್ಮಸ್ಥಳದ ಡಾ.ಡಿ. ವೀರೇಂದ್ರ ಹೆಗ್ಗಡೆ, ಹುಬ್ಬಳ್ಳಿಯ ಮೂರುಸಾವಿರ ಮಠದ ಶ್ರೀಗುರುಸಿದ್ಧ ರಾಜಯೋಗೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಮಾಜಿ ಡಿಸಿಎಂ

ಕೆ.ಎಸ್. ಈಶ್ವರಪ್ಪ, ಸಂಸದ ಜಿ.ಎಂ. ಸಿದ್ಧೇಶ್ವರ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಡಿ.31ರಂದು ನಡೆಯುವ ಧರ್ಮ ಮತ್ತು ಸಂಸ್ಕೃತಿ ಸಂಗಮಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಾಗಿದೆ.