More

    ಕೆವಿಎಸ್ ಕುಟುಂಬವನ್ನು ತಬ್ಬಲಿ ಮಾಡಬೇಡಿ: ತಾಪಂ ಮಾಜಿ ಸದಸ್ಯ ಎಂ.ಜಿ.ತಿಮ್ಮೇಗೌಡ ಮನವಿ

    ಮಂಡ್ಯ: ಮಂಡ್ಯದ ಶಿಲ್ಪಿ ನಿತ್ಯಸಚಿವ ಕೆ.ವಿ.ಶಂಕರಗೌಡರ ಕುಟುಂಬದ ಮೂರನೇ ಕುಡಿ ಕೆ.ಎಸ್.ವಿಜಯಾನಂದ ಅವರನ್ನು ರಾಜಕೀಯವಾಗಿ ಬೆಳೆಸೋಣ. ಅವರನ್ನು ತಬ್ಬಲಿ ಮಾಡುವುದು ಬೇಡ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಜಿ.ತಿಮ್ಮೇಗೌಡ ಮನವಿ ಮಾಡಿದರು.
    ತಾಲೂಕಿನ ಬಸರಾಳು ಹೋಬಳಿಯ ದೊಡ್ಡಗರುಡನಹಳ್ಳಿ ಗ್ರಾಮದಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್.ವಿಜಯಾನಂದ ಪರ ಚುನಾವಣಾ ಪ್ರಚಾರ ನಡೆಸಿದ ಅವರು, ಕ್ಷೇತ್ರದ ಅಭಿವೃದ್ಧಿ ಮಾಡುವವರಿಗೆ ಹಾಗೂ ಯೋಗ್ಯರಿಗೆ ನೀವು ಮತ ನೀಡಿ. ವಿಜಯಾನಂದ ಮೈಸೂರು ಅಥವಾ ಬೆಂಗಳೂರಿನಲ್ಲಿ ವಾಸ ಮಾಡುತ್ತಿಲ್ಲ. ಸ್ಥಳೀಯವಾಗಿ ಇಲ್ಲಿಯೇ ಎಲ್ಲರಿಗೂ ಸಿಗುವ ಅಭ್ಯರ್ಥಿ ಎಂದರು.
    ಸ್ವಾಭಿಮಾನಿ ಪಡೆ ಸದಸ್ಯ ಪಟೇಲ್ ಆನಂದ್ ಮಾತನಾಡಿ, ಕೆ.ವಿ.ಶಂಕರಗೌಡರು ಕಾಗೆ ಮಂಡ್ಯವನ್ನು ಮಧುರ ಮಂಡ್ಯವನ್ನಾಗಿ ರೂಪಿಸಿ ಶಿಕ್ಷಣ ಕ್ರಾಂತಿ ಮಾಡಿದರು. ಮಂಡ್ಯದ ಸ್ವಾಭಿಮಾನವನ್ನು ಬೇರೆಯವರಿಗೆ ಮಾರಾಟ ಮಾಡುವುದು ಬೇಡ. ಜಿಲ್ಲೆಯನ್ನು ಬೆಳಗಿದ ಪುಣ್ಯಾತ್ಮ ಕೆ.ವಿ.ಶಂಕರಗೌಡ ಅವರ ಋಣ ತೀರಿಸುವ ಕೆಲಸ ಮಾಡಬೇಕಾದರೆ ವಿಜಯಾನಂದ ಅವರನ್ನು ಗೆಲ್ಲಿಸುವ ಮೂಲಕ ಆಶೀರ್ವಾದ ಮಾಡಿ ಎಂದು ಹೇಳಿದರು.
    ಪಕ್ಷೇತರ ಅಭ್ಯರ್ಥಿ ಕೆ.ಎಸ್.ವಿಜಯಾನಂದ ಮಾತನಾಡಿ, ಜಿಲ್ಲೆಯ ಜನರು ಮನಸ್ಸು ಮಾಡಿದರಷ್ಟೇ ನಮ್ಮ ಕುಟುಂಬ ಉಳಿಯಲು ಸಾಧ್ಯ. ನೀವು ಹಾಕುವ ಮತವನ್ನು ಅಭಿವೃದ್ಧಿ ಮಾಡುವ ಮೂಲಕ ಋಣ ತೀರಿಸುವ ಕೆಲಸ ಮಾಡುತ್ತೇನೆ. ಭಗವಂತನ ಆಶೀರ್ವಾದ, ಜನರ ಪ್ರೀತಿಯಿಂದ ಬದುಕಿದ್ದೇವೆ. ನಮ್ಮ ಕುಟುಂಬ ಉಳಿಯಬೇಕಾದರೆ ನನಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
    ಜಿಲ್ಲಾ ಪಂಚಾಯಿಸಿ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಮುಖಂಡ ಮಹಾಲಿಂಗೇಗೌಡ, ಮೋಹನ್, ಕರೀಗೌಡ ಇತರರಿದ್ದರು. ದೊಡ್ಡ ಗರುಡನಹಳ್ಳಿ ಗ್ರಾಮಕ್ಕೆ ಆಗಮಿಸಿದ ವಿಜಯಾನಂದ ಅವರನ್ನು ಬೃಹತ್ ಹಾರ ಹಾಕುವ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಗ್ರಾಮದ ಕಾಲಭೈರವೇಶ್ವರ ದೇವಾಲಯದಲ್ಲಿ ಪೂಜಿ ಸಲ್ಲಿಸಿ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಬೆಸ್ತರಕೊಪ್ಪಲು, ನಂಜೇಗೌಡನ ಕೊಪ್ಪಲು, ಭವಾನಿಕೊಪ್ಪಲು, ಹುನುಗನಹಳ್ಳಿ, ಮುತ್ತೇಗೆರೆ, ಕೆಂಚನಹಳ್ಳಿ ಸೇರಿದಂತೆ ಬಸರಾಳು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts