Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಕಳವು ಆರೋಪಿಗಳ ಬಂಧನ

Sunday, 11.02.2018, 10:54 PM       No Comments
ಕಳಸ: ಹೊರನಾಡಿನಲ್ಲಿ ಲಾಡ್ಜ್ ಮತ್ತು ಹೋಟೆಲ್ ನಡೆಸುತ್ತಿರುವ ವಿಜಯಕುಮಾರ್ ಮನೆಯಲ್ಲಿ ಫೆ.7ರಂದು ನಗದು, ಚಿನ್ನಾಭರಣ ಕಳವು ಮಾಡಿದ 7 ಆರೋಪಿಗಳನ್ನು ಮಾಲು ಸಹಿತ ಕಳಸ ಪೊಲೀಸರು ಬಂಧಿಸಿದ್ದಾರೆ.

ಕಳಸದ ಬೈಕ್ ಶೋ ರೂಂ ಮಾಲೀಕ ಪ್ರಶಾಂತ್, ಹೊರನಾಡಿನ ಗುರುಪ್ರಸಾದ್, ಕಲ್ಮಕ್ಕಿ ಜಗದೀಶ, ಕೊಪ್ಪ ತಾಲೂಕಿನ ಸಂತೋಷ, ವಿಜಯಕುಮಾರ, ಇಮ್ತಿಯಾಜ್, ಉದಯ ಬಂಧಿತರು.

ಫೆ.7ರಂದು ವಿಜಯಕುಮಾರ್ ಮತ್ತು ಕುಟುಂಬದವರು ಬೆಳಗ್ಗೆ ಕೊಲ್ಲೂರು ದೇಗುಲಕ್ಕೆ ತೆರಳಿದ್ದರು. ಆ ದಿನ ರಾತ್ರಿಯೇ 10.15ಕ್ಕೆ ಮನೆಗೆ ವಾಪಸ್ ಬರುವಷ್ಟರಲ್ಲಿ ಕಳ್ಳತನ ನಡೆದು ಬೀರುವಿನಲ್ಲಿದ್ದ 90 ಸಾವಿರ ರೂ. ನಗದು, 4.10 ಲಕ್ಷ ರೂ. ಮೌಲ್ಯದ ಬಂಗಾರ, 1 ಲಕ್ಷ ರೂ. ಮೌಲ್ಯದ 6 ವಾಚುಗಳು, 8 ಸಾವಿರ ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು ಅಪಹರಿಸಿದ್ದರು. ಮನೆ ಮಾಲೀಕ ವಿಜಯಕುಮಾರ್ ಈ ಹಿಂದೆ ತನ್ನ ವಸತಿ ಗೃಹದಲ್ಲೇ ಕೆಲಸ ಮಾಡುತ್ತಿದ್ದ ಜಗದೀಶ ಎಂಬುವವರ ಮೇಲೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಮಾರ್ಗದರ್ಶನದಲ್ಲಿ ಕುದುರೆಮುಖ ಸಿಪಿಐ ರಾಮಚಂದ್ರ, ಕಳಸ ಎಎಸ್​ಐ ಶಾಂತಪ್ಪ, ಸಿಬ್ಬಂದಿ ಜಯಕುಮಾರ, ತಿಪ್ಪೇಶ್, ರಾಜಕುಮಾರ್, ಪ್ರಸನ್ನ, ತನ್ವೀರ್, ಬಸವರಾಜ್, ಶ್ರೀನಿವಾಸ ಅವರನ್ನು ಒಳಗೊಂಡ ತಂಡ ಕಾರ್ಯಚರಣೆ ನಡೆಸಿ ಮೊದಲು ಜಗದೀಶನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಈತ ಕಳಸದ ಪ್ರಶಾಂತ್ ಬಗ್ಗೆ ಮಾಹಿತಿ ನೀಡುತ್ತಾನೆ. ಆತನನ್ನು ವಿಚಾರಣೆ ನಡೆಸಿದಾಗ ಹೊರನಾಡಿನ ಗುರುಪ್ರಸಾದ್ ಹಾಗು ಕೊಪ್ಪದ ನಾಲ್ವರು ಸಹಕಾರ ನೀಡಿರುವ ಬಗ್ಗೆ ಮಾಹಿತಿ ನೀಡುತ್ತಾನೆ. ಈ ಬಗ್ಗೆ ಮಾಹಿತಿ ಪಡೆದು ಕೊಪ್ಪದಲ್ಲಿದ್ದ ನಾಲ್ವರನ್ನು ಬಂಧಿಸಿದಾಗ ಕಳ್ಳತನದ ಸಂಪೂರ್ಣ ಚಿತ್ರಣ ಹೊರಬಿದ್ದಿದೆ.

ಕಳಸದ ಪ್ರಶಾಂತ್ ಕೊಪ್ಪದ ಸಂತೋಷನಿಗೆ ಕಳ್ಳತನದ ಸುಪಾರಿ ನೀಡಿದ್ದಾನೆ. ವಿಜಯಕುಮಾರ, ಇಮ್ತಿಯಾಜ್, ಉದಯ ಈ ಮೂವರನ್ನು ಕಳ್ಳತನ ಮಾಡಲು ಸಂತೋಷ್ ಕಳುಹಿಸುತ್ತಾನೆ. ಮನೆಯ ಸಂಪೂರ್ಣ ಮಾಹಿತಿ ಇರುವ ಕಲ್ಮಕ್ಕಿ ಜಗದೀಶನನ್ನು ಕರೆದುಕೊಂಡು ಹೋದ ತಂಡ ಯುಪಿಎಸ್, ಸಿಸಿ ಕ್ಯಾಮರಾ ಆಫ್ ಮಾಡಿ ಕೃತ್ಯ ಎಸಗಿದ್ದಾರೆ.

ಬಂಧಿತರಿಂದ ಕಳ್ಳತನಕ್ಕೆ ಉಪಯೋಗಿಸಿದ ಒಂದು ಕಾರು, ಒಂದು ಬೈಕ್, 55 ಸಾವಿರ ರೂ. ನಗದು, 4.16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ಅಪ್ರಾಪ್ತ ಜಗದೀಶನನ್ನು ರಿಮ್ಯಾಂಡ್ ಹೋಂಗೆ ಕಳಹಿಸಿದ್ದು, ಉಳಿದವರನ್ನು ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave a Reply

Your email address will not be published. Required fields are marked *

Back To Top