ತಮಿಳು ನಟ ದಳಪತಿ ವಿಜಯ್ ಅಭಿನಯದ ‘ಗೋಟ್’ (ದ ಗ್ರೇಟೆಸ್ಟ್ ಆ್ ಆಲ್ ಟೈಮ್) ಭರ್ಜರಿ ಯಶಸ್ಸಿನ ಬಳಿಕ ಮತ್ತೊಂದು ಸಿನಿಮಾ ೋಷಣೆಯಾಗಿದೆ. ಇನ್ನು ಹೆಸರಡಿದ ಈ ಚಿತ್ರವನ್ನು ಕರ್ನಾಟಕ ಮೂಲದ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ನಿರ್ಮಿಸುತ್ತಿದೆ. ಇತ್ತೀಚೆಗೆ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ವಿಜಯ್ ವೃತ್ತಿ ಜೀವನದ 69ನೇ ಹಾಗೂ ಕೊನೆಯ ಸಿನಿಮಾ ಇದಾಗಿದೆ. ಇದರ ಬಳಿಕ ವಿಜಯ್, ಟಿವಿಕೆ (ತಮಿಳಗ ವೆಟ್ರಿ ಕಳಗಂ) ಪಕ್ಷದ ಮೂಲಕ ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆ. ಈ ಕಾರಣಕ್ಕಾಗಿ ಈ ಪ್ರೊಜೆಕ್ಟ್ ಸುತ್ತ ನಿರೀಕ್ಷೆ ಹೆಚ್ಚಿಸಿದೆ. ಪೊಲಿಟಿಕಲ್ ಜಾನರ್ ಸಿನಿಮಾ ಇದಾಗಿದ್ದು, ನಿರ್ದೇಶಕ ಎಚ್.ವಿನೋದ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ವಿಶೇಷ ಏನಂದರೆ, ದಳಪತಿ ಈ ಚಿತ್ರದಲ್ಲಿ ನಟಿಸಲು ಬರೋಬ್ಬರಿ 276 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಹೆಗ್ಗಳಿಕೆ ವಿಜಯ್ ಪಾತ್ರರಾಗಿದ್ದು, ನಟ ಶಾರುಖ್ ಖಾನ್ ದಾಖಲೆ ಮುರಿದಿದ್ದಾರೆ. ಶಾರುಖ್, ಈ ಹಿಂದಿನ ಸಿನಿಮಾಕ್ಕೆ 250 ಕೋಟಿ ರೂ. ಸಂಭಾವನೆ ಪಡೆದಿದ್ದರು.-ಏಜೆನ್ಸೀಸ್.
ಯಾವ ನಟರಿಗೆ ಎಷ್ಟು ಸಂಭಾವನೆ: ಈ ಹಿಂದೆ ಪ್ರಕಟವಾಗಿದ್ದ ವರದಿಯಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಟಾಪ್ 5 ನಟರಲ್ಲಿ ಶಾರುಖ್ ಖಾನ್ (250 ಕೋಟಿ) ಪ್ರಥಮ, ರಜಿನಿಕಾಂತ್ (210 ಕೋಟಿ ರೂ.) ದ್ವಿತೀಯ, ವಿಜಯ್ (200 ಕೋಟಿ ರೂ.) ತೃತೀಯ, ಪ್ರಭಾಸ್ (200 ಕೋಟಿ ರೂ.) ನಾಲ್ಕನೇ ಹಾಗೂ ಆಮಿರ್ ಖಾನ್ (175 ಕೋಟಿ ರೂ.) ಐದನೇ ಸ್ಥಾನದಲ್ಲಿದ್ದರು. ಇದೀಗ ದಳಪತಿ ವಿಜಯ್ ತಮ್ಮ ಮುಂದಿನ ಸಿನಿಮಾಕ್ಕೆ 275 ಕೋಟಿ ರೂ. ಸಂಭಾವನೆ ಪಡೆಯುವ ಮೂರನೇ ಸ್ಥಾನದಿಂದ ಮೂಲಕ ಅಗ್ರಸ್ಥಾನಕ್ಕೆ ಜಿಗಿದ್ದಿದ್ದಾರೆ.