ಪಾಂಡ್ಯ, ರಾಹುಲ್​ ಬದಲು ವಿಜಯ್​ ಶಂಕರ್​ ಮತ್ತು ಶುಭಮಾನ್​ ಗಿಲ್​ಗೆ ಸ್ಥಾನ

ಮುಂಬೈ: ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿ ಅಮಾನತಾಗಿರುವ ಹಾರ್ದಿಕ್​ ಪಾಂಡ್ಯ ಹಾಗೂ ಕೆ.ಎಲ್​. ರಾಹುಲ್​ ಬದಲು ತಮಿಳುನಾಡಿನ ಆಲ್​ರೌಂಡರ್​ ವಿಜಯ್​ ಶಂಕರ್​ ಮತ್ತು ಶುಭಮಾನ್​ ಗಿಲ್​ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ.

ಪ್ರಾರಂಭದಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಪಾಂಡ್ಯ ಬದಲು ವಿಜಯ್​ ಶಂಕರ್​ನನ್ನು ಮತ್ತು ನ್ಯೂಜಿಲೆಂಡ್​ ಪ್ರವಾಸಕ್ಕೆ ಕೆ.ಎಲ್​. ರಾಹುಲ್​ ಬದಲು ಮಯಾಂಕ್​ ಅಗರ್ವಾಲ್​ರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಲಾಗಿತ್ತು. ಆದರೆ ಮಯಾಂಕ್​ ಅಗರ್ವಾಲ್​ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಅವರ ಬದಲು ಯುವ ಆಟಗಾರ ಶುಭಮಾನ್​ ಗಿಲ್​ಗೆ ಸ್ಥಾನ ನೀಡಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿಯ ಮೂಲಗಳು ತಿಳಿಸಿವೆ.

ಶುಭಮಾನ್​ ಗಿಲ್​ ರಣಜಿಯಲ್ಲಿ ಮತ್ತು ಭಾರತ ಎ ತಂಡ ಪರ ಉತ್ತಮ ಆಟವಾಡಿದ್ದರು. 27 ವರ್ಷದ ವಿಜಯ್​ ಶಂಕರ್​ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಆಗಿದ್ದು, ಮಧ್ಯಮ ವೇಗಿ ಆಗಿದ್ದಾರೆ. ಶಂಕರ್​ ಭಾರತದ ಪರ 5 ಟಿ20 ಪಂದ್ಯಗಳನ್ನಾಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *