ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ನಾಳಿನ ಸಂಪುಟ ಸಭೆಯಲ್ಲಿ ಚರ್ಚೆ: ಮುಖ್ಯಮಂತ್ರಿ

ರಾಣೆಬೆನ್ನೂರ: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ನ್ಯಾಯಮೂರ್ತಿ ನಾಗಮೋಹನ ದಾಸ್ ಸಮಿತಿ ಸರ್ಕಾರಕ್ಕೆ ವರದಿ ಕೊಟ್ಟಿದ್ದು, ಬುಧವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗೆಗೆ ರ್ಚಚಿಸಿ ತೀರ್ವನಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ತಾಲೂಕಿನ ಅಸುಂಡಿ ಕೆರೆ ಸೇರಿದಂತೆ 18 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಕಾಮಗಾರಿಯ ಶಂಕುಸ್ಥಾಪನೆಗೆ ಆಗಮಿಸಿದ್ದ ಅವರು ಮಾಧ್ಯಮದರೊಂದಿಗೆ ಮಾತನಾಡಿ, ಕಳೆದ ಸಭೆಯಲ್ಲಿ ಈ ಬಗೆಗಿನ ಚರ್ಚೆ ಅಪೂರ್ಣವಾಗಿದೆ. ಈಗಾಗಲೇ ಸಮಿತಿ ವರದಿ ಕೊಟ್ಟಿದೆ. ಬುಧವಾರದ ಸಚಿವ ಸಂಪುಟ ಸಭೆಯಲ್ಲಿ ಈ ಬಗೆಗೆ ರ್ಚಚಿಸಲಾಗುವುದು ಎಂದರು.

ಮೆಕ್ಕೆಜೋಳ ಖರೀದಿಗೆ ಸಂಸದರನ್ನು ಕೇಳಿ

ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿಗೆ ಕೇಂದ್ರ ತೆರೆಯುವ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಮೆಕ್ಕೆಜೋಳ ಖರೀದಿ ಮಾಡಲ್ಲ ಎಂದಿದೆ. ಹೀಗಾಗಿ ನಾವು ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದಿಲ್ಲ ಎಂದರು. ಹಾಗಾದರೆ ರೈತರು ಮೆಕ್ಕೆಜೋಳ ಏನು ಮಾಡಬೇಕು ಎಂದಾಗ, ರೈತರು ಮೆಕ್ಕೆಜೋಳ ಖರೀದಿಗೆ ಜಿಲ್ಲೆಯ ಸಂಸದರನ್ನು ಕೇಳಿ ಅವರ ಮೂಲಕ ಕೇಂದ್ರದವರನ್ನು ಒಪ್ಪಿಸಲಿ. ಪೊಲೀಸರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ 6ನೇ ವೇತನ ಆಯೋಗ ಪರಿಶೀಲಿಸುತ್ತದೆ ಎಂದರು.

ಆಧಾರ ರಹಿತ ಆರೋಪ

ವಿಧಾನಸಭಾ ಸಚಿವಾಲಯದ ನೇಮಕಾತಿಯಲ್ಲಿ ಸ್ವಜನ ಪಕ್ಷಪಾತ ಆಗಿದೆ ಎಂಬ ವರದಿ ಆಧಾರ ರಹಿತ. ನೇಮಕಾತಿಯನ್ನು ಶಾಸಕಾಂಗ ವ್ಯವಸ್ಥೆ ಮಾಡಿದೆ. ನನಗೇನು ಸಂಬಂಧ, ಅದರಲ್ಲಿ ನಾನೇನು ಮಾಡಲಾಗುತ್ತೇ. ಅದಕ್ಕಾಗಿ ಕಾರ್ಯದರ್ಶಿ, ಸ್ಪೀಕರ್ ಇದ್ದಾರೆ ಎಂದರು.

ರಾಜಕೀಯ ಪ್ರೇರಿತ

ಪ್ರತ್ಯೇಕ ಧರ್ಮದ ವಿಚಾರದಲ್ಲಿ ಮುಖ್ಯಮಂತ್ರಿ ನಾಟಕ ಮಾಡುತ್ತಿದ್ದಾರೆ ಎಂದು ವಿಆರ್​ಎಲ್ ಸಮೂಹ ಸಂಸ್ಥೆ ಚೇರ್ಮನ್​ರಾದ ಡಾ. ವಿಜಯ ಸಂಕೇಶ್ವರ ಅವರು ಆರೋಪಿಸಿರುವ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಂಕೇಶ್ವರ ಅವರ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ. ಆಧಾರರಹಿತ, ರಾಜಕೀಯ ಪ್ರೇರಿತ ಹೇಳಿಕೆ ಎಂದರು.

Leave a Reply

Your email address will not be published. Required fields are marked *