ಇಂದು ವಿಜಯಪ್ರಕಾಶ್ ರಸಸಂಜೆ

ಬೆಂಗಳೂರು: ಕೊಡಗು ಮರುನಿರ್ಮಾಣಕ್ಕಾಗಿ ನಿಧಿ ಸಂಗ್ರಹಣೆಗಾಗಿ ಜ್ಯೋತಿ ಚಾರಿಟಬಲ್ ಟ್ರಸ್ಟ್ ಶನಿವಾರ (ಮಾ.16) ಸಂಜೆ 6ಕ್ಕೆ ಕನಕಪುರ ರಸ್ತೆಯಲ್ಲಿರುವ ತಾತಗುಣಿ ಜ್ಯೋತಿ ತಾಂತ್ರಿಕ ಕಾಲೇಜು ಕ್ಯಾಂಪಸ್​ನಲ್ಲಿ ಖ್ಯಾತ ಗಾಯಕ ವಿಜಯಪ್ರಕಾಶ್ ಮತ್ತು ತಂಡದಿಂದ ಸಂಗೀತ ರಸಸಂಜೆ ಆಯೋಜಿಸಿದೆ.

‘ಕೊಡಗಿಗಾಗಿ ಓಟ’ ಶೀರ್ಷಿಕೆಯ ಕಾರ್ಯಕ್ರಮಕ್ಕೆ ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ಮಾಧ್ಯಮ ಸಹಯೋಗವಿದೆ. ಕೊಡಗಿನ ಮೊಣ್ಣಂಗೇರಿ ಗ್ರಾಮಸ್ಥರಿಗೆ ಮನೆ, ವೈದ್ಯಕೀಯ ಸವಲತ್ತು ಒದಗಿಸಲು ರಸಸಂಜೆ ಆಯೋಜಿಸಲಾಗಿದೆ ಎಂದು ಟ್ರಸ್ಟ್​ನ ಟ್ರಸ್ಟಿ ಎಂ. ನರಸಿಂಹನ್ ತಿಳಿಸಿದ್ದಾರೆ. ಶಾಸಕರಾದ ಎಸ್.ಟಿ. ಸೋಮಶೇಖರ್, ರವಿ ಸುಬ್ರಹ್ಮಣ್ಯ, ಡಾ. ಉದಯ್ ಗರುಡಾಚಾರ್, ಅದಮ್ಯ ಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಎಡಿಜಿಪಿ ಭಾಸ್ಕರ್ ರಾವ್, ಬೆಂಗಳೂರು ದಕ್ಷಿಣ ಡಿಸಿಪಿ ಕೆ. ಅಣ್ಣಾಮಲೈ, ಶೃಂಗೇರಿ ಪೀಠದ ಆಡಳಿತಾಧಿಕಾರಿ ಡಾ. ವಿ.ಆರ್. ಗೌರಿಶಂಕರ್ ಉಪಸ್ಥಿತರಿರುವರು ಎಂದು ವಿವರಿಸಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ನಟ ಉಪೇಂದ್ರ, ನಿರ್ದೇಶಕರಾದ ರಾಜ್ ಬಿ. ಶೆಟ್ಟಿ, ಯೋಗರಾಜ್ ಭಟ್, ಚೇತನ್​ಕುಮಾರ್, ರಘುರಾಮ್ ಮಹೇಶ್ ಗೌಡ, ನಿರ್ದೇಶಕ- ಗೀತ ರಚನೆಕಾರ ಡಾ. ವಿ. ನಾಗೇಂದ್ರ ಪ್ರಸಾದ್, ನಟರಾದ ಶ್ರೀಮುರಳಿ, ಗಾಯಕ ಶ್ರೀಹರ್ಷ, ನಟಿ ಚೈತ್ರಾ ಆಚಾರ್, ನಟರಾದ ಗುರುನಂದನ್, ರವಿಶಂಕರ್ ಗೌಡ, ರಂಗಾಯಣ ರಘು, ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಬುಕ್ ಮೈ ಶೋನಲ್ಲಿ ಟಿಕೆಟ್ ಸಂಗೀತ ರಸಸಂಜೆಗೆ ‘ಬುಕ್ ಮೈ ಶೋ’ ಮೂಲಕ ಟಿಕೆಟ್ ಕಾಯ್ದಿರಿಸಿ ಕೊಳ್ಳಬಹುದು. ವಿವರಕ್ಕೆ www.forcoorg.com ವೆಬ್​ಸೈಟ್ ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗೆ ದೂ: 85500 15370 ಸಂಪರ್ಕಿಸಿ.

ಉಚಿತ ಪಾಸ್

ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲು www.vijayavani.net ವೆಬ್​ಸೈಟ್​ಗೆ ಭೇಟಿ ನೀಡಿ ಅಲ್ಲಿ ಕೇಳಿರುವ ಸರಳ ಪ್ರಶ್ನೆಗೆ ಉತ್ತರಿಸಿದರೆ ಉಚಿತ ಪಾಸ್ ನಿಮ್ಮದಾಗುತ್ತದೆ.

2 Replies to “ಇಂದು ವಿಜಯಪ್ರಕಾಶ್ ರಸಸಂಜೆ”

  1. Vijayprakash sir was most beautiful singer in this musical world… One of my favorite singer in my world 👏👏🙏

Leave a Reply

Your email address will not be published. Required fields are marked *