ಮಲ್ಯಗೆ ಮತ್ತೊಂದು ಸಂಕಷ್ಟ

ಲಂಡನ್: ಬ್ರಿಟನ್ ಕೋರ್ಟ್​ನಲ್ಲಿ ಉದ್ಯಮಿ ವಿಜಯ್ ಮಲ್ಯ ಮತ್ತೊಂದು ಹಿನ್ನಡೆ ಅನುಭವಿಸಿದ್ದಾರೆ. ಕಿಂಗ್​ಫಿಷರ್ ಏರ್​ಲೈನ್ಸ್​ಗೆ ನೀಡಲಾಗಿದ್ದ ಸಾಲ ವಸೂಲಿಗೆ ಎಸ್​ಬಿಐ ಸೇರಿ 13 ಭಾರತೀಯ ಬ್ಯಾಂಕ್​ಗಳು ಹೂಡಿದ್ದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಸಾಲಕ್ಕೆ ಮಲ್ಯ ಗ್ಯಾರಂಟಿ ನೀಡಿದ್ದರಿಂದ ಅವರ ಮತ್ತೆ ವಿಚಾರಣೆ ಎದುರಿಸಬೇಕಿದೆ. ತಾವು ದಿವಾಳಿಯಾಗಿದ್ದು, ತಮ್ಮ ವಿರುದ್ಧ ಭಾರತದ ಸಾಲ ವಸೂಲಾತಿ ನ್ಯಾಯಮಂಡಳಿ ನೀಡಿರುವ ಆದೇಶಕ್ಕೆ ತಡೆ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮೇ 8ರಂದು ತಿರಸ್ಕರಿಸಿತ್ತು. ಲಂಡನ್​ನ ಹರ್​ಫೋರ್ಟ್​ಶೈರ್​ನ ಟೆವಿನ್​ನಲ್ಲಿರುವ ಮಲ್ಯ ಅವರ ಎರಡು ಮನೆಗಳನ್ನು ಶೋಧಿಸಿ, ಅಲ್ಲಿ ಲಭಿಸುವ ದಾಖಲೆಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳುವಂತೆ ಹೈಕೋರ್ಟ್​ನ ವಾಣಿಜ್ಯ ಮತ್ತು ಆಸ್ತಿ ನ್ಯಾಯಪೀಠ ಜೂನ್​ನಲ್ಲಿ ಭಾರತೀಯ ಬ್ಯಾಂಕ್ ನಿಯೋಗಕ್ಕೆ ಅನುಮತಿ ನೀಡಿತ್ತು. ಈ ಆದೇಶದನ್ವಯ ಮನೆ ಶೋಧನೆ ಕೈಗೊಳ್ಳಲು ಬ್ಯಾಂಕ್ ಅಧಿಕಾರಿಗಳಿಗೆ ಅವಕಾಶ ಮಾಡಿಕೊಡಲು ಮಲ್ಯ ನಿರಾಕರಿಸಿದ್ದಾರೆ.