ತಮಿಳುನಾಡು: ತಮಿಳು ನಟ, ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ (GOAT) ಸಿನಿಮಾ ಇದೇ ಸೆ.05ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಈ ಹಿಂದಿನಿಂದಲೂ ವಿಜಯ್ ಸಿನಿಮಾ ಅಂದರೆ ಅಲ್ಲಿ ಆ್ಯಕ್ಷನ್, ಮನರಂಜನೆಗೆ ಹೇಳಿ ಮಾಡಿಸಿದ ಅಂಶಗಳಿರುತ್ತವೆ ಎಂಬುದು ಸಿನಿಪ್ರಿಯರ ನಿರೀಕ್ಷೆ. ಆ ನಿರೀಕ್ಷೆ ಇದೀಗ ಮತ್ತೊಮ್ಮೆ ಸಾಬೀತಾಗಿದೆ. ರಿಲೀಸ್ಗೂ ಮುನ್ನವೇ ಭಾರೀ ಕುತೂಹಲ ಕೆರಳಿಸಿದ್ದ ಗೋಟ್ ಚಿತ್ರ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ್ದು, ಇಂದಿಗೂ ಸಹ ಬಾಕ್ಸ್ ಆಫೀಸ್ನಲ್ಲಿ ತನ್ನ ಅಬ್ಬರ ಮುಂದುವರಿಸಿದೆ.
ಇದನ್ನೂ ಓದಿ: ಪ್ರವೇಶ ಪತ್ರಗಳ ಡೌನ್ಲೋಡ್ ಸ್ಥಗಿತ: ಸರ್ಕಾರದ ಹುಳುಕು ಬಯಲಾಗಿದೆ ಎಂದ ಬಿ.ವೈ ವಿಜಯೇಂದ್ರ!
ವೆಂಕಟೇಶ್ ಪ್ರಭು ನಿರ್ದೇಶನದಲ್ಲಿ ಮೂಡಿಬಂದಿರುವ ‘ಗೋಟ್’ ಚಿತ್ರದಲ್ಲಿ ಹಲವು ನಿರೀಕ್ಷೆಗೂ ಮೀರಿದ ಅಂಶಗಳಿವೆ ಎಂದು ಹೇಳಲಾಗಿತ್ತು. ಆ ಪೈಕಿ ಮೊದಲ ಸರ್ಪ್ರೈಸ್ ಚಿತ್ರ ಬಿಡುಗಡೆಗೆ ಒಂದು ದಿನಕ್ಕೂ ಮುಂಚಿತವಾಗಿಯೇ ರಿವೀಲ್ ಆಗಿತ್ತು. ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದ ಮಾಜಿ ಆಟಗಾರ ಸುಬ್ರಮಣಿಯಂ ಬದ್ರಿನಾಥ್ ವಿಶೇಷ ಪಾತ್ರವೊಂದನ್ನು ನಿರ್ವಹಿಸಿದರೆ, ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅವರ ಎಂಟ್ರಿ ಫ್ಯಾನ್ಸ್ಗಳನ್ನು ಭಾರೀ ಸಂತಸಕ್ಕೆ ದೂಡಿತು.
ಸದ್ಯ ಟ್ವಿಟರ್ನಲ್ಲಿ ಟ್ರೆಂಡ್ ಆಗ್ತಿರುವ ವಿಜಯ್ ಅಭಿನಯದ ‘ಗೋಟ್’ ಚಿತ್ರದಲ್ಲಿ ಚಿತ್ರರಸಿಕರಿಗೆ ಹಾಗೂ ದಳಪತಿ ಅಭಿಮಾನಿಗಳಿಗೆ ಬಹಳ ಇಷ್ಟವಾದ ವಿಷಯ ಎಂದರೆ ಅದು ತಮಿಳು ಚಿತ್ರರಂಗದ ಸ್ಟಾರ್ ನಟರ ಸಮಾಗಮ. ಒಬ್ಬರಲ್ಲ, ಇಬ್ಬರಲ್ಲ ಹಲವು ಕಾಲಿವುಡ್ ಹೀರೋಗಳು ಚಿತ್ರದ ಭಾಗವಾಗಿದ್ದಾರೆ. ನಟ ಶಿವಕಾರ್ತಿಕೆಯನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡರೆ, ಪ್ರಭುದೇವ, ತಲೈವಾ ರಜನಿಕಾಂತ್, ಕಮಲ್ ಹಾಸನ್, ಅಜಿತ್ ಮತ್ತು ಸೂರ್ಯ ಸೇರಿದಂತೆ ಸೂಪರ್ ಸ್ಟಾರ್ಗಳ ದರ್ಶನ ಪಡೆದ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ಚಿತ್ರ ರಿಲೀಸ್ ಆಗಿ ಇಂದಿಗೆ ನಾಲ್ಕು ದಿನಗಳು ಕಳೆದಿದ್ದು, ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಗೋಟ್ 285 ಕೋಟಿ ರೂ. ಗಳಿಕೆ ಕಂಡಿದೆ,(ಏಜೆನ್ಸೀಸ್).
ಸರ್ಕಾರಕ್ಕೆ ಧೋನಿ, ವಿರಾಟ್ ಕಟ್ಟಿದ ತೆರಿಗೆ ಮೊತ್ತ ಎಷ್ಟು ಗೊತ್ತಾ? ಕೇಳಿದ್ರೆ ಹುಬ್ಬೇರೋದು ಖಚಿತ!