ಪುರಿ ಜಗನ್ನಾಥ್ ಚಿತ್ರದಲ್ಲಿ ವಿಜಯ್ ದೇವರಕೊಂಡ

ತೆಲುಗಿನ ಡೈನಾಮಿಕ್ ಡೈರೆಕ್ಟರ್ ಪುರಿ ಜಗನ್ನಾಥ್ ಅವರ ‘ಇಸ್ಮಾರ್ಟ್ ಶಂಕರ್’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 75 ಕೋಟಿ ರೂ. ಸಂಗ್ರಹಿಸಿ ಸದ್ದು ಮಾಡುತ್ತಿದೆ. ಇದೀಗ ಸಿನಿ ಕ್ಷೇತ್ರದಲ್ಲಿ ಹೊಸ ಟರ್ನಿಂಗ್ ಪಾಯಿಂಟ್ ಕಾಣುವ ನಿರೀಕ್ಷೆಯಲ್ಲಿರುವ ಪುರಿ ಜಗನ್ನಾಥ್ ಮುಂದಿನ ಚಿತ್ರಕ್ಕೆ ಸಜ್ಜಾಗಿದ್ದಾರೆ. ಇನ್ನೂ ಹೆಸರಿಡದ ಆ ಸಿನಿಮಾದಲ್ಲಿ ದಕ್ಷಿಣ ಭಾರತದ ಬಹುಬೇಡಿಕೆಯ ನಟ ವಿಜಯ್ ದೇವರಕೊಂಡ ನಾಯಕನಾಗಿ ನಟಿಸಲಿದ್ದಾರೆ ಎನ್ನುವುದು ವಿಶೇಷ.

ನಟಿ ಚಾರ್ವಿು ಕೌರ್ ಈ ವಿಚಾರವನ್ನು ಟ್ವಿಟರ್​ನಲ್ಲಿ ಮೂವರು ಜತೆಗಿರುವ ಸೆಲ್ಪಿ ಪೋಸ್ಟ್ ಮಾಡುವ ಮೂಲಕ ಅಧಿಕೃತಪಡಿಸಿದ್ದಾರೆ. ಈ ಚಿತ್ರಕ್ಕೆ ಮೊದಲು ಸ್ಯಾಂಡಲ್​ವುಡ್ ರಾಕಿಂಗ್ ಸ್ಟಾರ್ ಯಶ್ ಫಿಕ್ಸ್ ಆಗಲಿದ್ದಾರೆಂದು ಹೇಳಲಾಗಿತ್ತು. ಇದೀಗ ‘ಅರ್ಜುನ್ ರೆಡ್ಡಿ’ಯ ವಿಜಯ್ ದೇವರಕೊಂಡ ನಟಿಸಲಿರುವುದು ಖಚಿತವಾಗಿದ್ದು, ಪುರಿ ಜಗನ್ನಾಥ್ ಮತ್ತು ಚಾರ್ವಿು ಜಂಟಿಯಾಗಿ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ‘ಇದು ಅಧಿಕೃತವಾಗಿದೆ.

ಪುರಿ ಜಗನ್ನಾಥ್ ನಿರ್ದೇಶಿಸಲಿರುವ ನಮ್ಮ ಮುಂದಿನ ಸಿನಿಮಾ ನಟ ವಿಜಯ್ ದೇವರಕೊಂಡ ಜತೆ. ಚಿತ್ರದ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ತಿಳಿಸುತ್ತೇವೆ’ ಎಂದಿದ್ದಾರೆ ಚಾರ್ವಿು ಕೌರ್. ಇನ್ನು, ಪುರಿ ಜಗನ್ನಾಥ್ ಅವರ ಮುಂದಿನ ಮತ್ತೊಂದು ನಿರೀಕ್ಷಿತ ಸಿನಿಮಾ ‘ಜನ ಗಣ ಮನ’ದಲ್ಲಿ ಯಶ್ ನಟಿಸುವ ಬಗ್ಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಮಾತುಕತೆ ನಡೆದಿದೆಯಂತೆ. ಚಿತ್ರದ ಸ್ಕ್ರಿಪ್ಟ್ ಬಗ್ಗೆ ಯಶ್ 2 ಸಲ ಪುರಿ ಜಗನ್ನಾಥ್ ಜತೆ ರ್ಚಚಿಸಿದ್ದು, ಅಂತಿಮ ತೀರ್ಮಾನ ಕೈಗೊಳ್ಳಲು ಮತ್ತೊಮ್ಮೆ ಭೇಟಿಯಾಗಲಿದ್ದಾರೆ ಎಂಬ ಮಾತು ಕೇಳಿಬಂದಿದೆ. –ಏಜೆನ್ಸೀಸ್

Leave a Reply

Your email address will not be published. Required fields are marked *