21.5 C
Bengaluru
Friday, January 24, 2020

ವಿಘ್ನ ನಿವಾರಕನಿಗೆ ಅದ್ದೂರಿ ಸ್ವಾಗತ

Latest News

ಬೆಂಗಳೂರು ಮಾರುಕಟ್ಟೆಗೆ ಹ್ಯುಂಡೈ ಔರಾ ಕಾರು ಬಿಡುಗಡೆ 

ಬೆಂಗಳೂರು:  ನಗರದ ಅದ್ವೈತ್ ಹ್ಯುಂಡೈ ಸಂಸ್ಥೆ, ‘ದಿ ಆಲ್ ನ್ಯೂ ಹ್ಯುಂಡೈ ಔರಾ’ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ರೆಸಿಡೆನ್ಸಿ ರಸ್ತೆಯಲ್ಲಿರುವ ಶೋರೂಂನಲ್ಲಿ ನಟ ಶ್ರೀಮುರಳಿ...

ಏರಿಕೆಯಾಗದ ಫಾಸ್ಟ್​ಟ್ಯಾಗ್​ ಪಾವತಿ ಕಡ್ಡಾಯಗೊಳಿಸಿದರೂ ಪ್ರಯೋಜನವಿಲ್ಲ; ನಗದು ಪಾವತಿಯೇ ಹೆಚ್ಚು! 

ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್​ಟ್ಯಾಗ್​ ಮೂಲಕ ಟೋಲ್ ಪಾವತಿ ಕಡ್ಡಾಯಗೊಳಿಸಿದರೂ ಶುಲ್ಕ ಸಂಗ್ರಹ ಪ್ರಮಾಣ ಏರಿಕೆಯಾಗಿಲ್ಲ. ಫಾಸ್ಟ್​ಟ್ಯಾಗ್​ಗಿಂಥ ಮೊದಲು ಸಂಗ್ರಹವಾಗುತ್ತಿದ್ದಷ್ಟೇ ನಗದು ರೂಪದಲ್ಲಿ ಶುಲ್ಕ...

ಗಣರಾಜ್ಯೋತ್ಸವ| ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಈ ಬಾರಿ ಗಣರಾಜ್ಯೋತ್ಸವ ಆಚರಣೆ ಇಲ್ಲ!

ಬೀಜಿಂಗ್: ಚೀನಾದಲ್ಲಿರುವ ಇಂಡಿಯನ್ ಎಂಬೆಸ್ಸಿಯಲ್ಲಿ ಈ ವರ್ಷ ಗಣರಾಜ್ಯೋತ್ಸವ ಆಚರಣೆ ಇಲ್ಲ. ಭಾರತೀಯ ರಾಯಭಾರ ಕಚೇರಿ ಶುಕ್ರವಾರ ಈ ಕುರಿತು ಪ್ರಕಟಣೆಯನ್ನೂ ಹೊರಡಿಸಿದೆ. ಚೀನಾದಾದ್ಯಂತ...

ಅರಿವಿನ ಕೊರತೆಯೇ ದೌರ್ಜನ್ಯಕ್ಕೆ ಕಾರಣ!

* ಸಿವಿಲ್ ಹಿರಿಯ ನ್ಯಾಯಾಧೀಶ ಅರ್ಜುನ ಮಲ್ಲೂರ್ ಬೇಸರ ವಿಜಯವಾಣಿ ಸುದ್ದಿಜಾಲ ಬಳ್ಳಾರಿ ವ್ಯವಸ್ಥೆ...

ಹನ್ನೊಂದು ಎಐಎಡಿಎಂಕೆ ಶಾಸಕರ ಅನರ್ಹತೆ ಕುರಿತ ಅರ್ಜಿ ತುರ್ತು ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋದ ಡಿಎಂಕೆ

ನವದೆಹಲಿ: ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿಗೆ ವಿರುದ್ಧವಾಗಿ ಮತ ಚಲಾಯಿಸಿದ 11 ಎಐಎಡಿಎಂಕೆ ಶಾಕಸರ ಅನರ್ಹತೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ತುರ್ತಾಗಿ...

ಬೆಳಗಾವಿ: ಪ್ರವಾಹದಿಂದ ಅನುಭವಿಸಿದ ಹಾನಿ, ನೋವಿನ ಮಧ್ಯೆಯೇ ಕುಂದಾನಗರಿಯಲ್ಲಿ ಸೋಮವಾರ ಬೆನಕನ ಆಗಮನವಾಯಿತು.

ತುಂತುರು ಮಳೆಯ ನಡುವೆ ಹೊತ್ತು ತಂದ ಗಣಪನ ಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ ಬೆಳಗಾವಿಗರು ಖುಷಿಪಟ್ಟರು.

ಕನ್ನಡ ಮತ್ತು ಮರಾಠಿ ಸಂಸ್ಕೃತಿ ಮೇಳೈಸಿರುವ ಗಡಿನಾಡಿನಲ್ಲಿ ಈ ಬಾರಿ ಪ್ರವಾಹದ ಕಾರ್ಮೋಡ ಕವಿದಿತ್ತು. ಹಬ್ಬದ ಸಂಭ್ರಮ ಮಂಕಾಗುವ ಆತಂಕ ಎದುರಾಗಿತ್ತು. ಆದರೂ, ಜನ ಉತ್ಸಾಹದಿಂದ ಗಣೇಶನನ್ನು ಸ್ವಾಗತಿಸಿ ಸಂಭ್ರಮಿಸಿದರು. ತಮ್ಮ ಶಕ್ತ್ಯಾನುಸಾರ ಶ್ರದ್ಧಾ-ಭಕ್ತಿಯಿಂದ ಚೌತಿ ಆಚರಿಸಿದರು. ವಕ್ರದಂತನಿಗೆ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು.

ಬೆಳಗಾವಿ ನಗರ ವ್ಯಾಪ್ತಿಯಲ್ಲಿ 370ಕ್ಕೂ ಅಕ ಸಾರ್ವಜನಿಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಂಡವು. ಮಧ್ಯಾಹ್ನದಿಂದ ತಡರಾತ್ರಿ ವರೆಗೂ ಮೂರ್ತಿಗಳ ನಡೆದ ಪ್ರತಿಷ್ಠಾಪನೆ ಮೆರವಣಿಗೆಯಲ್ಲಿ ಗಣೇಶೋತ್ಸವ ಮಂಡಳಗಳ ಕಾರ್ಯಕರ್ತರು, ಯುವಕರು ಹಾಗೂ ಮಕ್ಕಳು ಕುಣಿದು ಕುಪ್ಪಳಿಸಿದರು. ಪಟಾಕಿ ಸಿಡಿಸಿ, ಗುಲಾಲು ಎರಚಿ ಖುಷಿಪಟ್ಟರು. ಜಾನಪದ ಕಲಾತಂಡಗಳ ಪ್ರದರ್ಶನ ಕಣ್ಮನ ಸೆಳೆಯಿತು.

ಈ ಹಬ್ಬದಲ್ಲಿ ಸಂಗ್ರಹವಾಗುವ ಹಣವನ್ನು ನೆರೆ ಸಂತ್ರಸ್ತರಿಗೆ ನೀಡಲು ತೀರ್ಮಾನಿಸಿರುವ ಸಾರ್ವಜನಿಕ ಗಣೇಶೋತ್ಸವ ಮಂಡಳಗಳ ಪ್ರಮುಖರು, ಹೆಚ್ಚಿನ ನೆರವು ನೀಡುವಂತೆ ಭಕ್ತರಲ್ಲಿ ಕೋರಿದರು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿತ್ತು.

ಗಣಪನ ವಿಸರ್ಜನೆ: ನಗರ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸಿದ ಒಂದು ದಿನದ ಗಣಪ ಮೂರ್ತಿಗಳನ್ನು ಸೋಮವಾರ ಸಂಜೆ ಕೋಟೆ ಕೆರೆ, ಕಣಬರ್ಗಿ ಕೆರೆ, ಮಜಗಾವಿ ಕೆರೆ, ನಾಜರ್‌ಕ್ಯಾಂಪ್ ಹೊಂಡ ಹಾಗೂ ಕಪಿಲೇಶ್ವರ ಹೊಂಡಗಳಲ್ಲಿ ಜನರು ವಿಸರ್ಜಿಸಿ ಗಣಪನಿಗೆ ಅಂತಿಮ ನಮನ ಸಲ್ಲಿಸಿದರು. ಕೆಲವರು ಮಂಗಳವಾರ ಮಧ್ಯಾಹ್ನ ಒಂದುವರೆ ದಿನದ ಗಣಪನನ್ನು ವಿಸರ್ಜಿಸಿದರು.

ಮನೆಗಳಲ್ಲೂ ಮೋದಕಹಸ್ತನ ಸಂಭ್ರಮ

ಯುವಕ ಮಂಡಳಗಳ ಕಾರ್ಯಕರ್ತರು ವಾಹನಗಳಲ್ಲಿ ಬೃಹತ್ ಗಾತ್ರದ ಮೂರ್ತಿಗಳನ್ನು ತಂದು ಪ್ರತಿಷ್ಠಾಪಿಸಿದರೆ ಮನೆಗಳಲ್ಲಿ ಕೂಡ್ರಿಸಲು ಸಣ್ಣ ಸಣ್ಣ ಗಣಪ ಮೂರ್ತಿಗಳನ್ನು ಅಷ್ಟೇ ಸಂಭ್ರಮದಿಂದ ತರುವ ದೃಶ್ಯಗಳು ಗಮನ ಸೆಳೆದವು. ಮನೆಗಳ ಸದಸ್ಯರು ಮಕ್ಕಳೊಂದಿಗೆ ಪಟಾಕಿ ಸಿಡಿಸುತ್ತ, ಬಣ್ಣ ಎರಚುತ್ತ ಗಣಪನನ್ನು ಬರಮಾಡಿಕೊಂಡರು. ನಗರದ ಪ್ರತಿ ಗಲ್ಲಿ ಹಾಗೂ ಓಣಿಗಳಲ್ಲಿ ಮಕ್ಕಳು ಪಟಾಕಿ ಹೊಡೆದು ಸಂಭ್ರಮಿಸಿದರು.

ವಿಡಿಯೋ ನ್ಯೂಸ್

VIDEO| ಇಂದಿರಾ ಜೈಸಿಂಗ್​ ಅಂತಹವರನ್ನು ನಿರ್ಭಯಾ ಅಪರಾಧಿಗಳ ಜತೆ ಜೈಲಿನ...

ನವದೆಹಲಿ: ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ಅವರನ್ನು ನಿರ್ಭಯಾ ಪ್ರಕರಣದ ಅಪರಾಧಿಗಳ ಜತೆ ಜೈಲಿನಲ್ಲಿಡಬೇಕು ಎಂದು ನಟಿ ಕಂಗನಾ ರಣಾವತ್​ ಆಕ್ರೋಷ ವ್ಯಕ್ತಪಡಿಸಿದ್ದಾರೆ. ನಿರ್ಭಯಾ ಪ್ರಕರಣವನ್ನು ಸಂತ್ರಸ್ಥೆ ತಾಯಿ ಆಶಾದೇವಿ ಅವರು ಕ್ಷಮಿಸಬೇಕು ಎಂಬ...

VIDEO| ಪ.ಬಂಗಾಳದಲ್ಲಿ ಮೂರೇ ವರ್ಷ ಹಿಂದೆ 165 ಕೋಟಿ ರೂ....

ಬಂಕುರಾ: ಪಶ್ಚಿಮ ಬಂಗಾಳದ ಬಂಕುರಾದ ಸಾರೆಂಗಾದಲ್ಲಿ ಕೇವಲ ಮೂರೇ ವರ್ಷ ಹಿಂದ 165 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್ ಒಂದು ಬುಧವಾರ ಅಪರಾಹ್ನ ಕುಸಿದು ಬಿದ್ದಿದೆ....

VIDEO| ಗಗನಯಾನಕ್ಕೆ ವ್ಯೋಮಮಿತ್ರಾ; ಇಸ್ರೋದಿಂದ ರೋಬಾಟ್ ಅನಾವರಣ, ವರ್ಷಾಂತ್ಯಕ್ಕೆ ಪ್ರಯಾಣ

ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಕಾರ್ಯಕ್ರಮ ಗಳಲ್ಲೊಂದಾದ ಮಾನವಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ಪ್ರಯಾಣ ಬೆಳೆಸಲಿರುವ ರೋಬಾಟ್ ‘ವ್ಯೋಮಮಿತ್ರಾ’ವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಬುಧವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ. ಖಾಸಗಿ ಹೋಟೆಲ್​ನಲ್ಲಿ ‘ಮಾನವಸಹಿತ ಗಗನಯಾನ ಮತ್ತು ಅನ್ವೇಷಣೆ ಕಾರ್ಯಕ್ರಮ’...

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...