21.5 C
Bangalore
Wednesday, December 11, 2019

ಬಂಗಾಳಿಗರ ಹೃದಯ ಕಲಕಿದ ವಿದ್ಯಾಸಾಗರರ ಭಗ್ನ ಪ್ರತಿಮೆ: ಹೇಸಿಗೆ ಹುಟ್ಟಿಸುತ್ತಿರುವ ಬಿಜೆಪಿ-ಟಿಎಂಸಿ ರಾಜಕೀಯ ಕದನ

Latest News

ಒಡವೆ ಹರಾಜಿಗೆ ರೈತರ ಆಕ್ಷೇಪ

ಚಳ್ಳಕೆರೆ: ನಲವತ್ತು ರೈತರ ಒಡವೆಗಳ ಹರಾಜಿಗೆ ಮುಂದಾಗಿದ್ದ ತಾಲೂಕಿನ ಮೀರಸಾಬಿಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎದುರು ಬುಧವಾರ ರಾಜ್ಯ ರೈತ ಸಂಘದ ಕಾರ್ಯಕರ್ತರು...

16 ಗ್ರಾಮಗಳಲ್ಲಿ ಸ್ಮಶಾನ ಅಭಿವೃದ್ಧಿ ಅಭಿಯಾನ

ಮೈಸೂರು: ಮೈಸೂರು ತಾಲೂಕಿನಲ್ಲಿ ಒತ್ತುವರಿಯಾಗಿರುವ ಹಾಗೂ ಮೂಲ ಸೌಕರ್ಯವಿಲ್ಲದೆ ಪಾಳುಬಿದ್ದಿರುವ ಸ್ಮಶಾನಗಳನ್ನು ಅಭಿವೃದ್ಧಿಗೊಳಿಸಿ ಹದ್ದುಬಸ್ತಿನಲ್ಲಿಡುವ ಆಂದೋಲನಕ್ಕೆ ಜಯಪುರದಲ್ಲಿ ಬುಧವಾರ ಚಾಲನೆ ನೀಡಲಾಯಿತು. ತಾಲೂಕಿನ 16...

ಆಲೋಚನೆ ದಾರಿ ತಪ್ಪಿದರೆ ಅನಾರೋಗ್ಯ

ಹೊಸದುರ್ಗ: ಜನರ ಆಲೋಚನೆ ಹಾಗೂ ನಡವಳಿಕೆಗಳು ದಾರಿ ತಪ್ಪಿರುವ ಕಾರಣ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹದಗೆಡುತ್ತಿದೆ ಎಂದು ಕುಂಚಿಟಿಗ ಮಠದ ಶ್ರೀ...

ಮಕ್ಕಳಿಗೆ ಮೌಲ್ಯ ತಿಳಿಸಿಕೊಡುವಲ್ಲಿ ವಿಫಲ

ಮೈಸೂರು: ಶಿಕ್ಷಣ ಕೊಡಿಸುವ ಭರದಲ್ಲಿ ಮಕ್ಕಳಿಗೆ ಮೌಲ್ಯ ತಿಳಿಸಿಕೊಡುವಲ್ಲಿ ನಾವು ಸೋಲುತ್ತಿದ್ದೇವೆಯೇ ಎಂಬ ಭಾವನೆ ಮೂಡುತ್ತಿದೆ ಎಂದು ಶಾಸಕ ಎಸ್.ಎ.ರಾಮದಾಸ್ ವಿಷಾದಿಸಿದರು. ಧರ್ಮಪ್ರಕಾಶ ಡಿ.ಬನುಮಯ್ಯ...

ಸಂವಿಧಾನದ ಇತಿಹಾಸದಲ್ಲಿಂದು ಕರಾಳ ದಿನ: ಪೌರತ್ವ ಮಸೂದೆಗೆ ಸೋನಿಯಾ ಗಾಂಧಿ ವಿರೋಧ

ನವದೆಹಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿ ಕಾರಿದ್ದಾರೆ. ಇಂದು(ಬುಧವಾರ) ಭಾರತ...

| ರಾಘವ ಶರ್ಮನಿಡ್ಲೆ ಕೋಲ್ಕತ

ಬಂಗಾಳಕ್ಕೆ ರಾಜಕೀಯ ಹಿಂಸಾಚಾರ ಹೊಸತಲ್ಲ. ಆದರೆ ಕೋಲ್ಕತ ಘಟನೆ ಬಂಗಾಳಿಗರ ಹೃದಯ ಕಲಕಿದೆ. ಟಿಎಂಸಿ-ಬಿಜೆಪಿ ನಡುವಿನ ಕದನದಲ್ಲಿ ಸುಧಾರಣಾವಾದಿ ಚಿಂತಕ, ಲೇಖಕ ಈಶ್ವರಚಂದ್ರ ಬಂಡೋಪಾಧ್ಯಾಯ ವಿದ್ಯಾಸಾಗರ ಅವರ ಪ್ರತಿಮೆಯೂ ಬಲಿಯಾಗಿರುವುದು ಸ್ಥಳೀಯರಲ್ಲಿ ಆಕ್ರೋಶ, ಬೇಸರ ತರಿಸಿದೆ. ರಾಜಕೀಯ ಕಿತ್ತಾಟದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಒಮ್ಮೆ ಚುನಾವಣೆ ಮುಗಿದರೆ ಸಾಕು ಎಂಬ ಹತಾಶ ಭಾವ ಎದ್ದುಕಾಣುತ್ತಿದೆ.

ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಂಗಾಳ ಹೊರತುಪಡಿಸಿದರೆ ಉಳಿದೆಡೆ ದೊಡ್ಡ ಮಟ್ಟದ ಹಿಂಸಾಚಾರ ಸಂಭವಿಸಲಿಲ್ಲ. ಆದರೆ ಟಿಎಂಸಿಗೆ ಪರ್ಯಾಯ ರಾಜಕೀಯ ಶಕ್ತಿಯಾಗಿ ಬಿಜೆಪಿ ಬೆಳೆದಿರುವ ಪರಿಣಾಮ ಪ್ರತಿ ಮತದಾನದ ಹಂತದಲ್ಲೂ ಗಲಾಟೆಗಳು ನಡೆದಿವೆ. ಮತಗಟ್ಟೆಗಳಲ್ಲಿ ಕಾರ್ಯಕರ್ತರ ಮಧ್ಯೆ ನಡೆಯುತ್ತಿದ್ದ ಹೊಡೆದಾಟ ಪ್ರತಿಮೆ ನಾಶಕ್ಕೆ ತಲುಪಿದೆ.

ಇಲ್ಲಿ ಹಿಂಸಾಚಾರ ಮಾಮೂಲಿ ವಿಷಯ ಎಂದು ಅನೇಕರು ಒಪ್ಪಿಕೊಳ್ಳುತ್ತಾರೆ. ಆದರೆ ರಾಜಧಾನಿ ಕೋಲ್ಕತ ಗಲಭೆಗಳಿಂದ ಹೊರತಾಗಿತ್ತು. ರಾಜ್ಯದ ಉಳಿದೆಡೆ ಏನೇ ದುರ್ಘಟನೆ ಸಂಭವಿಸಿದರೂ ಕೋಲ್ಕತ ಮಂದಿ ಬೀದಿಗಿಳಿದು ಗಲಭೆ ಎಬ್ಬಿಸಿದವರಲ್ಲ. ಆದರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೈಗೊಂಡ ರಾಲಿ ಕೂಡ ಹಿಂಸಾಚಾರಕ್ಕೆ ತಿರುಗಿದ್ದರಿಂದ ಮೇ 19ರಂದು ಕೊನೆ ಹಂತದ ಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ಹಿಂಸಾಚಾರವೇ ಪ್ರಮುಖ ವಿಷಯವಾಗಿ ಬದಲಾಗಿದೆ. ಟಿಎಂಸಿ. ಬಿಜೆಪಿ ಎರಡೂ ಪಕ್ಷಗಳು ಇದೇ ವಿಷಯದಲ್ಲಿ ಮತ ಕೇಳಲು ಮುಂದಾಗಿವೆ.

ಕೋಲ್ಕತ ಘಟನೆಗೆ ಎರಡೂ ಪಕ್ಷಗಳು ಕಾರಣ ಎಂಬ ಸಾಮಾನ್ಯ ನಿಲುವು ಜನರ ಮಧ್ಯೆ ಕೇಳುತ್ತಿದೆ. ಅಮಿತ್ ಷಾ ರ‍್ಯಾಲಿ ಕೈಗೊಂಡಾಗ ಟಿಎಂಸಿ ಯುವ ಕಾರ್ಯಕರ್ತರು ವಿರೋಧಿಸುವ ಸುಳಿವು ಪೊಲೀಸರಿಗಿತ್ತು. ಆದರೆ ಅವರು ಸುಮ್ಮನಿದಿದ್ದೇಕೆ? ಕಾಲೇಜು ವಿದ್ಯಾರ್ಥಿಗಳು ಕಲ್ಲು ತೂರಾಟ ಮಾಡಿ ಪ್ರಚೋದಿಸಿದ್ದರಿಂದಲೇ ಬಿಜೆಪಿಯ ಬಜರಂಗದಳ ಕಾರ್ಯಕರ್ತರು ಕಾಲೇಜಿನ ಮೇಲೆ ದಾಳಿ ನಡೆಸಿದರು ಎಂದು ಕಲ್ಕತ್ತಾ ವಿಶ್ವವಿದ್ಯಾಲಯ ಬಳಿ ಪುಸ್ತಕ ಮಾರಾಟ ಮಾಡುವ ಚಂದರ್ ದಾಸ್ ಅಭಿಪ್ರಾಯಪಡುತ್ತಾರೆ.

ಕಲ್ಕತ್ತಾ ವಿವಿ ಕಲಾ ವಿಭಾಗದ ವಿದ್ಯಾರ್ಥಿ ಅನಂದಿತೋ ಬ್ಯಾನರ್ಜಿ ಇದನ್ನು ಒಪ್ಪುವುದಿಲ್ಲ. ಪ್ರತಿಭಟಿಸುವುದು ನಮ್ಮ ಹಕ್ಕು. ಇದನ್ನೇಕೆ ನಿಯಂತ್ರಿಸಬೇಕು? ಬಿಜೆಪಿ ಗೂಂಡಾಗಳನ್ನು ಕರೆಸಿ ಹಿಂಸಾಚಾರ ನಡೆಸಿದೆ ಮತ್ತು ವ್ಯವಸ್ಥಿತವಾಗಿ ಇಂಥದ್ದೊಂದು ಘಟನೆ ನಡೆಸಲಾಗಿದೆ. ಟಿಎಂಸಿ ಮೇಲೆ ಆರೋಪಿಸಿ ವಾಸ್ತವ ಮರೆಮಾಚುವ ಯತ್ನ ನಡೆಯುವುದಿಲ್ಲ. ಬಿಜೆಪಿ ಬೆತ್ತಲಾಗಿದೆ ಎಂದು ಕಿಡಿಕಾರುತ್ತಾರೆ.

ಅದೇನೇ ಇದ್ದರೂ, ವಿದ್ಯಾಸಾಗರ ಪ್ರತಿಮೆ ನಾಶ ಪ್ರಕರಣದ ರಾಜಕೀಯ ಲಾಭ ತನಗೆ ಒಲಿಯಲಿದೆ ಎಂದು ಸಿಎಂ ಮಮತಾ ಭಾವಿಸಿದಂತಿದೆ. ಬುಧವಾರದ ಪ್ರತಿ ಚುನಾವಣಾ ಸಭೆಯಲ್ಲೂ ವಿದ್ಯಾಸಾಗರರ ಬಗ್ಗೆ ಬಿಜೆಪಿ ಗೂಂಡಾಗಳಿಗೆ ಏನು ಗೊತ್ತಿದೆ ಎಂದು ದೀದಿ ಪ್ರಶ್ನಿಸಿದ್ದಾರೆ. ಅಂದಹಾಗೆ ವಿದ್ಯಾಸಾಗರರ ಜನನವಾಗಿದ್ದು ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಘಟಾಲ್ ಲೋಕಸಭೆ ವ್ಯಾಪ್ತಿಯ ಬಿರ್ಸಿಂಘಾ ಎಂಬ ಗ್ರಾಮದಲ್ಲಿ. ಮೇ 12ರಂದು ಮತದಾನ ನಡೆದ ಘಟಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾರತಿ ಘೊಷ್ ವಿರುದ್ಧ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿ, ಕಾರಿನ ಗಾಜು ಪುಡಿ ಮಾಡಿದ್ದರು. ಹಾಗಾದರೆ ಎಲ್ಲಿಯ ಟಿಎಂಸಿ ಎಲ್ಲಿಯ ಈಶ್ವರಚಂದ್ರ ವಿದ್ಯಾಸಾಗರ?

ವಿವಿಧ ಕಾರಣಗಳಿಗಾಗಿ ಆಡಳಿತಾರೂಢ ಟಿಎಂಸಿ ಸರ್ಕಾರದ ಬಗ್ಗೆ ರಾಜ್ಯದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಪ್ರಬಲ ಎದುರಾಳಿಯಾಗಿ ಬಿಜೆಪಿ ಬೆಳೆಯುತ್ತಿದೆ. ಸಾಮಾನ್ಯ ಜನರಲ್ಲೂ ಸರ್ಕಾರದ ಬಗ್ಗೆ ಪ್ರತಿರೋಧದ ಮನಸ್ಥಿತಿ ಕಾಣುತ್ತಿದೆ. ಈ ಆಕ್ರೋಶದ ಬಗ್ಗೆ ಟಿಎಂಸಿ ಹತಾಶೆಗೊಂಡಿದೆ ಮತ್ತು ಇದು ಹಿಂಸಾಚಾರದಲ್ಲಿ ಕೊನೆಯಾಗುತ್ತಿದೆ. ಟಿಎಂಸಿ-ಬಿಜೆಪಿ ಎರಡೂ ಪಕ್ಷಗಳ ಕೋಮು ಧ್ರುವೀಕರಣದ ರಾಜಕಾರಣವೂ ಹಿಂಸಾಚಾರಕ್ಕೆ ಕಾರಣ.

| ಕಾವೇರಿ ಚಕ್ರವರ್ತಿ ಕಲ್ಕತ್ತಾ ವಿವಿ ಪ್ರಾಧ್ಯಾಪಕಿ

ಹಿಂದೆ ಕಾಂಗ್ರೆಸ್-ಎಡರಂಗದ ನಡುವಿನ ಹಿಂಸಾಚಾರಕ್ಕೆ ಕೋಮು ಧ್ರುವೀಕರಣ ಕಾರಣವಾಗಿರಲಿಲ್ಲ. ಆ ಸಂದರ್ಭದಲ್ಲಿ ವರ್ಗ ಸಂಘರ್ಷವಿತ್ತು. ಆದರೆ ಮೊದಲ ಬಾರಿಗೆ ಧರ್ವಧಾರಿತ ರಾಜಕಾರಣಕ್ಕೆ ಬಂಗಾಳ ಸಾಕ್ಷಿಯಾಗುತ್ತಿದೆ. ರಾಜಕೀಯವಾಗಿ ಯಾರಿಗೆ ಲಾಭವಾಗುತ್ತದೆ ಎಂಬುದು ಮುಖ್ಯವಲ್ಲ. ಆದರೆ, ಸಂಘರ್ಷಗಳು ಹೆಚ್ಚುವ ಅಪಾಯವಿದೆ.

| ಅರಿಂದಮ್ ಚಟರ್ಜಿ ಪತ್ರಕರ್ತ

ನವ ಬಂಗಾಳದ ಹರಿಕಾರ

ಬಂಗಾಳದ ಪುನರುತ್ಥಾನಕ್ಕೆ ವಿದ್ಯಾಸಾಗರರ ಕೊಡುಗೆ ಅಪಾರ. ಸೆ.26, 1820ರಲ್ಲಿ ಜನಿಸಿದ್ದ ಅವರು, 1856ರಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ಹಿಂದು ವಿಧವಾ ಮರು ವಿವಾಹ ಕಾಯ್ದೆ ಜಾರಿಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಬಂಗಾಳದಲ್ಲಿ ರವೀಂದ್ರನಾಥ ಠಾಗೋರ್, ಸುಭಾಷ್ ಚಂದ್ರ ಬೋಸ್, ಸ್ವಾಮಿ ವಿವೇಕಾನಂದರ ಬಗ್ಗೆ ಹೇಗೆ ಗೌರವಾದರಗಳಿವೆಯೋ ಹಾಗೇ ಈಶ್ವರಚಂದ್ರ ವಿದ್ಯಾಸಾಗರ ಅವರಿಗೂ ಸಮಾಜದಲ್ಲಿ ಅತ್ಯುನ್ನತ ಸ್ಥಾನವಿದೆ. ರಾಜಕೀಯ ಸೆಣಸಾಟದ ನೆಪದಲ್ಲಿ ಈ ಮಹಾನ್ ವ್ಯಕ್ತಿಯ ಪ್ರತಿಮೆ ನಾಶಗೊಂಡಿರುವುದು ಸ್ಥಳೀಯ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಮಂಗಳವಾರ ರಾತ್ರಿಯ ಘಟನೆ ಖಂಡಿಸಿ ಬುಧವಾರ ಬೆಳಗ್ಗಿನಿಂದ ಸಂಜೆವರೆಗೆ ಕಲ್ಕತ್ತಾ ವಿಶ್ವವಿದ್ಯಾಲಯದ ಸುತ್ತಮುತ್ತ ಪ್ರತಿಭಟನೆಗಳು ನಡೆದಿವೆ. ವಿವಿಯ ಉಪನ್ಯಾಸಕರು, ವಿದ್ಯಾರ್ಥಿಗಳು ಬೀದಿಗಿಳಿದು ಟಿಎಂಸಿ-ಬಿಜೆಪಿ ಇಬ್ಬರ ವಿರುದ್ಧವೂ ಧ್ವನಿಯೆತ್ತಿದ್ದಾರೆ. ಏತನ್ಮಧ್ಯೆ ಈ ವಿಚಾರದಲ್ಲಿ ಬಿಜೆಪಿ-ಟಿಎಂಸಿ ಮಧ್ಯೆ ತೂ-ತೂ ಮೈ-ಮೈ ಮುಂದುವರಿದಿದೆ.

Stay connected

278,748FansLike
587FollowersFollow
624,000SubscribersSubscribe

ವಿಡಿಯೋ ನ್ಯೂಸ್

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...