ಗೆಲುವಿಗೆ ತಂದೆಯ ಕೆಲಸ, ಜನರ ಅನುಕಂಪವೇ ಕಾರಣ: ಆನಂದ ನ್ಯಾಮಗೌಡ

>

ಜಮಖಂಡಿ: ಹತ್ತನೇ ಸುತ್ತಿನ ಮತ ಎಣಿಕೆ ಕಾರ್ಯ ಮುಗಿಯುವಷ್ಟರಲ್ಲಿ ಸುಮಾರು 24 ಸಾವಿರಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದೇನೆ. ಇದೇ ಟ್ರೆಂಡ್​ ಮುಂದುವರಿದರೆ 35 ಸಾವಿರ ಮತಗಳ ಅಂತರದಿಂದ ಗೆಲ್ಲುವ ಸಾಧ್ಯತೆ ಇದೆ ಎಂದು ಜಮಖಂಡಿ ವಿಧಾನಸಭಾ ಚುನಾವಣೆಯ ಕಾಂಗ್ರೆಸ್​ ಅಭ್ಯರ್ಥಿ ಆನಂದ ನ್ಯಾಮಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಂದೆ ಕಂಡಿರುವ ಕನಸುಗಳನ್ನು ನಾನು ಸಾಕಾರ ಗೊಳಿಸುತ್ತೇನೆ ಎಂಬ ಭರವಸೆಯಿಂದ ಜನರು ನನಗೆ ಮತ ನೀಡಿದ್ದಾರೆ. ನನ್ನ ಗೆಲುವಿಗೆ ಪ್ರಮುಖ ಕಾರಣ ನನ್ನ ತಂದೆ ಮಾಡಿರುವ ಅಭಿವೃದ್ಧಿ ಕೆಲಸ. ಜತೆಗೆ ತಂದೆಯನ್ನು ಕಳೆದುಕೊಂಡಿರುವ ನನ್ನ ಮೇಲಿನ ಅನುಕಂಪದಿಂದಲೂ ಜನರು ಮತ ಚಲಾಯಿಸಿದ್ದಾರೆ ಎಂದರು.

ಚುನಾವಣೆಯಲ್ಲಿ ಗೆಲ್ಲುತ್ತಿರುವುದು ಒಂದು ಕಡೆ ಖುಷಿಯಾಗಿದ್ದರೆ, ಮತ್ತೊಂದೆಡೆ ತಂದೆಯನ್ನು ಕಳೆದುಕೊಂಡ ದುಃಖ ಇದೆ ಎಂದ ಅವರು, ಜಮಖಂಡಿಯನ್ನು ಜಿಲ್ಲೆಯನ್ನಾಗಿ ಮಾಡುವುದು, ಸಾವಳಗಿಯನ್ನು ತಾಲೂಕಾಗಿ ಮಾಡುವ ನಿಟ್ಟಿನಲ್ಲಿ ನಾನು ಕಾರ್ಯ ನಿರ್ವಹಿಸುತ್ತೇನೆ ಎಂದರು.

ಈ ಫಲಿತಾಂಶವನ್ನು ನಾನು ನನ್ನ ತಂದೆಯ ಪಾದಗಳಿಗೆ ಅರ್ಪಿಸುತ್ತೇನೆ. ತಂದೆಯವರಿಗಿಂತಲೂ ಹೆಚ್ಚು ಕೆಲಸ ಮಾಡಿ ಜನಸೇವೆ ಮಾಡುತ್ತೇನೆ ಎಂದರು. (ದಿಗ್ವಿಜಯ ನ್ಯೂಸ್)

ಜಮಖಂಡಿ ಅಭಿವೃದ್ಧಿಯ ಹರಿಕಾರ