More

  VIDEO | ಪ್ರತಿಭಟನಾಕಾರರ ಮೇಲೆ ವಾಟರ್​ ಕ್ಯಾನನ್ಸ್​ ಪ್ರಯೋಗ

  ಚಂಡೀಗಡ : ಮಿತಿಮೀರಿದ ಧಗೆಯ ಕಾಲದಲ್ಲಿ ಪಂಜಾಬ್​​ ರಾಜ್ಯದಲ್ಲಿ ವಿದ್ಯುತ್ ಬಿಕ್ಕಟ್ಟು ಉಂಟಾಗಿರುವ ವಿರುದ್ಧ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಮೊಹಾಲಿ ಮನೆಯ ಹೊರಗೆ ನೂರಾರು ಆಮ್ ಆದ್ಮಿ ಪಕ್ಷ(ಎಎಪಿ)ದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ವಾಟರ್​ ಕಾನನ್​ಗಳನ್ನು ಚಲಾಯಿಸಿ ಪ್ರಯತ್ನಿಸಿದರು. ನಂತರ ಈರ್ವರು ನಾಯಕರನ್ನು ವಶಕ್ಕೆ ಪಡೆದರು.

  ಅಮರಿಂದರ್​ ಸಿಂಗ್​ ಅವರ ನಿವಾಸ, ಸಿಸ್ವಾನ್​ ಫಾರ್ಮ್​ ಹೌಸ್​ನ ಹೊರಗಡೆ ಇಂದು ಮಧ್ಯಾಹ್ನ ಗುಂಪು ಸೇರಿದ ಪಂಜಾಬ್​ ಎಎಪಿ ಮುಖ್ಯಸ್ಥ ಭಗವಂತ್​ ಮನ್ ಮತ್ತು ಇತರ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ನಂತರ ಸಿಎಂ ಮನೆಯ ಕಡೆಗೆ ನುಗ್ಗಲು ಆರಂಭಿಸಿದರು. ಇದನ್ನು ತಡೆಯಲು ಪೊಲೀಸರು ನೀರಿನ ಫಿರಂಗಿಗಳನ್ನು ಬಳಸಿದರು.

  ರಾಜ್ಯದಲ್ಲಿ ತೀವ್ರ ವಿದ್ಯುತ್​ ಅಭಾವ ಉಂಟಾಗಿದ್ದು, ರೈತರಿಗೆ, ಕೈಗಾರಿಕೆಗಳಿಗೆ ಮತ್ತು ನಗರವಾಸಿಗಳಿಗೆ ತೀವ್ರ ಸಮಸ್ಯೆಯಾಗಿದೆ ಎಂದು ಎಎಪಿ ಹೇಳಿದೆ. ಎಎಪಿ ಸಂಸದರಾಗಿರುವ ಭಗವಂತ್​ ಮನ್​ ಮತ್ತು ಶಾಸಕ ಹರಪಾಲ್​ ಸಿಂಗ್​ ಚೀಮ ಅವರನ್ನು ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)

  ಉತ್ತರಾಖಂಡದ ಹೊಸ ಸಿಎಂ: ಶಾಸಕ ಪುಷ್ಕರ್​ ಸಿಂಗ್​ ಧಾಮಿ

  ಮಂಗಳ ಗ್ರಹದ ಮೇಲಿನ ರೋವರ್​ ಚಾಲಕಿ, ಭಾರತ ಮೂಲದ ಮಹಿಳೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts