ಸಿಂಹಗಳನ್ನು ವಿಶ್ವದ ಅತ್ಯಂತ ವೇಗವಾಗಿ ಬೇಟೆಯಾಡುವ ಪ್ರಾಣಿಗಳೆಂದು ಪರಿಗಣಿಸಲಾಗಿದೆ. ಕಾಡಿನಲ್ಲಿ ಸಿಂಹದ ಜೀವನ ವಿಧಾನ ಇತರ ಪ್ರಾಣಿಗಳಿಗಿಂತ ಭಿನ್ನವಾಗಿದೆ. ಸಿಂಹಗಳು ಹಿಂಡುಗಳಲ್ಲಿ ವಾಸಿಸುವುದಿಲ್ಲ ಅಥವಾ ಯಾರಿಗೂ ಹೆದರುವುದಿಲ್ಲ ಆದ್ದರಿಂದ ಸಿಂಹಗಳನ್ನು ಕಾಡಿನ ರಾಜರು ಎಂದೂ ಕರೆಯುತ್ತಾರೆ. ಸಿಂಹವಿದೆ ಎಂದರೆ ಸಾಕು ಆ ಸ್ಥಳದಲ್ಲಿ ಒಂದು ಸಂಚಲನ ಉಂಟಾಗುತ್ತದೆ. ಆದರೆ ಸದ್ಯ ಸಿಂಹದ ಮತ್ತೊಂದು ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್(Video Viral ) ಆಗುತ್ತಿದೆ.
ಇದನ್ನು ಓದಿ: ಪ್ರಿಯತಮೆಗೆ ಕ್ಷಮೆಕೇಳಲು ರಸ್ತೆಯಲ್ಲಿ ಹೋರ್ಡಿಂಗ್ ಹಾಕಿದ ಯುವಕ; Viral Video ನೋಡಿದ್ರೆ ನಗುವುದು ಗ್ಯಾರಂಟಿ
ವೈರಲ್ ವಿಡಿಯೋದಲ್ಲಿ ನೀವು ಸಿಂಹ ಮುದ್ದಾದ ವರ್ತನೆಯನ್ನು ಕಾಣಬಹುದು. ಯಾವಾಗಲೂ ಉಗ್ರವಾಗಿ ಮತ್ತು ಆಕ್ರಮಣ ಮಾಡುವ ಮನೋಭಾವವನ್ನು ಹೊಂದಿರುವ ಸಿಂಹವು ಮಹಿಳೆಯೊಬ್ಬರ ಮಡಿಲಲ್ಲಿ ಮಲಗಿದೆ. ಆ ಮಹಿಳೆ ಸಿಂಹವನ್ನು ಎರಡೂ ಕೈಗಳಿಂದ ಹಿಡಿದು ಪ್ರೀತಿಯಿಂದ ಮುದ್ದಿಸುತ್ತಿರುವುದನ್ನು ನೋಡಬಹುದು. ಕೆಲವೊಮ್ಮೆ ಸಿಂಹಕ್ಕೆ ಮಹಿಳೆಯು ಮುತ್ತು ನೀಡುವುದನ್ನು ಮತ್ತೆ ಮುದ್ದಿಸುವುದನ್ನು ಕಾಣಬಹುದು. ಸಿಂಹವು ಮಹಿಳೆಯೊಂದಿಗೆ ಆರಾಮವಾಗಿ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
I am amazed that a Lion can be so affectionate like this. Lucky her. pic.twitter.com/tOKTNS7GKn
— Nature is Amazing ☘️ (@AMAZlNGNATURE) December 25, 2024
ಇದುವೆರಗೂ ಈ ವಿಡಿಯೋವನ್ನು 1.1 ಮಿಲಿಯನ್ ಮಂದಿ ವೀಕ್ಷಿಸಿದ್ದು ಹಲವರು ಪ್ರತಿಕ್ರಿಯಿಸಿದ್ದಾರೆ. ಸಿಂಹವು ಬಹಳ ಪ್ರೀತಿ ತೋರಿಸುತ್ತಿರುವುದು ನನಗೆ ಆಶ್ಚರ್ಯವಾಗಿದೆ, ಆ ಸಿಂಹವು ಅದೃಷ್ಟಶಾಲಿ, ನನಗೆ ಇದನ್ನು ಮಾಡಲು ಸಾಧ್ಯವಾಗುವುದಿಲ್ಲ ಅಷ್ಟು ಧೈರ್ಯವಿಲ್ಲ, ಸಿಂಹವು ತನ್ನನ್ನು ಮಾತ್ರ ಪ್ರೀತಿಸುತ್ತದೆ ಎಂಬುದನ್ನು ಮರೆಯಬೇಡಿ, ಇದು AI ರಚಿತವಾಗಿಲ್ಲ, ಹುಟ್ಟಿನಿಂದಲೂ ಈ ಕಾಡು ಪ್ರಾಣಿಯನ್ನು ನಿಮ್ಮೊಂದಿಗೆ ಇಟ್ಟುಕೊಂಡರೆ ಅದು ಪ್ರೀತಿಸುತ್ತದೆ ಹಾಗೂ ನಿಷ್ಟತೆಯಿಂದಿರುತ್ತದೆ, ಇಷ್ಟು ಶಾಂತವಾಗಿದ್ದರೂ ಯಾವಾಗ ಬೇಕಾದರೂ ನಿಮ್ಮ ಮೇಲೆ ಆಕ್ರಮಣ ಮಾಡಬಹುದು ಎಂದು ಕಾಮೆಂಟ್ ಮಾಡಿದ್ದಾರೆ.
ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ಕಡಲೆಕಾಯಿ ಮಾರುವ ಹುಡುಗಿ; Viral Video ನೋಡಿದ್ರೆ ಹೊಗಳುವುದಂತೂ ಗ್ಯಾರಂಟಿ