21 C
Bangalore
Saturday, December 14, 2019

VIDEO: ಪಶ್ಚಿಮ ಬಂಗಾಳದ ಹುಡುಗನೊಂದಿಗೆ ಓಡಿ ಹೋದಳೆಂದು ಮಲೆಯಾಳಿ ಹುಡುಗಿಗೆ ಥಳಿತ… ಆದರೆ ಸತ್ಯವೇ ಬೇರೆ…!

Latest News

ಟಿಡಿ ಇಂಜೆಕ್ಷನ್​ನಿಂದ ಮಾನಸಿಕ ಆಘಾತ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಟೆಟಾನಸ್ ಡಿಫ್ತೀರಿಯಾ (ಟಿಡಿ) ವ್ಯಾಕ್ಸಿನ್ ಪಡೆದ ತಾಲೂಕಿನ ಹೆಬಸೂರು ಸರ್ಕಾರಿ ಬಾಲಕಿಯರ ಶಾಲೆಯ 28...

ರೈಲ್ವೆ ಮೂಲ ಸೌಕರ್ಯಕ್ಕೆ ಆದ್ಯತೆ

ಹುಬ್ಬಳ್ಳಿ: ನೈಋತ್ಯ ರೈಲ್ವೆಯು ಪ್ರಯಾಣಿಕರ ಸುರಕ್ಷತೆ, ಮೂಲ ಸೌಕರ್ಯ, ಭದ್ರತೆಗೆ ಆದ್ಯತೆ ನೀಡಿದೆ ಎಂದು ಮಹಾಪ್ರಬಂಧಕ ಅಜಯಕುಮಾರ ಸಿಂಗ್ ಹೇಳಿದರು.

ಸಿಎಗಳ ಪಾತ್ರ ಪ್ರಮುಖ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ದೇಶದ ಆರ್ಥಿಕ ವ್ಯವಸ್ಥೆ 5 ಟ್ರಿಲಿಯನ್ ಡಾಲರ್​ಗೆ ತಲುಪುವ ಪ್ರಧಾನಿ ಮೋದಿಯವರ ಕನಸು...

ಚಾಕಲೇಟ್ ಕೊಡುವ ಮುನ್ನ ಯೋಚಿಸಿ

ಹುಬ್ಬಳ್ಳಿ: ಮಕ್ಕಳು ಅಳುತ್ತಿದ್ದರೆ ಸಮಾಧಾನಪಡಿಸಲು ಚಾಕಲೇಟ್ ಕೊಡಿಸಲು ಕರೆದುಕೊಂಡು ಹೋಗುವುದು ಇಲ್ಲವೆ ಮಕ್ಕಳು ತಿನ್ನುತ್ತಾರೆ ಎಂದು ಚಾಕಲೇಟ್​ ತೆಗೆದುಕೊಂಡು ಹೋಗುವುದು ಸಾಮಾನ್ಯ…

ಕೆಜಿಎಫ್ ನಗರ ಜನರಿಗೆ ಮೂಲಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ

ಕೆಜಿಎಫ್ : ಆಕಸ್ಮಿಕವಾಗಿ ನಾನು ರಾಜಕಾರಣಕ್ಕೆ ಬಂದಿದ್ದೇನೆ. ಆದರೆ, ಶಾಸಕಿಯಾಗಿ ಆಯ್ಕೆ ಮಾಡಿದ ಕೆಜಿಎಫ್ ಮತದಾರರ ಋಣ ತೀರಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕಿ...

ನವದೆಹಲಿ: ಪಶ್ಚಿಮ ಬಂಗಾಳದ ಹುಡುಗನೊಂದಿಗೆ ಓಡಿ ಹೋಗಿ ಮದುವೆಯಾದಳೆಂಬ ಕಾರಣಕ್ಕೆ ಕೇರಳದಿಂದ ಬಂದಿದ್ದ ಆಕೆಯ ತಂದೆ ಆಕೆಯನ್ನು ಪತ್ತೆ ಮಾಡಿ ಮನಬಂದಂತೆ ಥಳಿಸುತ್ತಿದ್ದಾರೆ ಎಂಬ ಅರ್ಥದಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ವಿಡಿಯೋ ತುಣಕೊಂದು ವೈರಲ್​ ಆಗಿದೆ. ಆದರೆ, ಈ ವಿಡಿಯೋದ ಹಿಂದಿರುವ ಸತ್ಯವೇ ಬೇರೆ ಎಂಬುದು ಗೂಗಲ್​ ರಿವರ್ಸ್​ ಚೆಕ್​ನಲ್ಲಿ ಪತ್ತೆಯಾಗಿದೆ. ಹಾಗಾದರೆ ಏನದು ಸತ್ಯ…?

ಟ್ವಿಟರ್​ನಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋ ತುಣುಕು ಅಸ್ಸಾಂನ ನಾಗಾಂವ್​ ಜಿಲ್ಲೆಯದ್ದಾಗಿದೆ. ತನ್ನ 15 ವರ್ಷದ ಪುತ್ರಿಯನ್ನು ಅಪ್ಪನೊಬ್ಬ ವೇಶ್ಯಾವಾಟಿಕೆಗೆ ತಳ್ಳಲು ಪ್ರಯತ್ನಿಸುತ್ತಿದ್ದ. ಅದೆಷ್ಟೇ ಮನವೊಲಿಸಿದರೂ ಬಾಲಕಿ ವೇಶ್ಯಾವಾಟಿಕೆಗೆ ಹೋಗಲು ಒಪ್ಪಿರಲಿಲ್ಲ. ಆಕೆಯನ್ನು ಆತ ಬಲವಂತವಾಗಿ ಎಳೆದೊಯ್ಯಲು ಪ್ರಯತ್ನಿಸಿದರೂ ಬಗ್ಗಿರಲಿಲ್ಲ. ಹಾಗಾಗಿ ಆತ ಆಕೆಯನ್ನು ಮನಬಂದಂತೆ ಥಳಿಸುತ್ತಿರುವ ದೃಶ್ಯ ಇದಾಗಿದೆ.

ಮೊದಲಿಗೆ ವಿಡಿಯೋ ತುಣಕನ್ನು ಪ್ರತ್ಯೇಕ ಫ್ರೇಮ್​ಗಳಾಗಿ ವಿಭಜಿಸಲಾಯಿತು. ಬಳಿಕ ಅದನ್ನು InVid ಮೂಲಕ ಸರ್ಚ್​ಗೆ ಹಾಕಲಾಯಿತು. ಆಗ ಅದು ಅಸ್ಸಾಮಿ ಭಾಷೆಯ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ಸುದ್ದಿಗೆ ನಮ್ಮನ್ನು ಕೊಂಡೊಯ್ಯಿತು. ಅದಾದ ನಂತರ ಆ ಸುದ್ದಿಯಲ್ಲಿದ್ದ ಮಾಹಿತಿಯಂತೆ chamguri area Assam father beating daughter ಎಂಬ ಕೀ ವರ್ಡ್​ ಕೊಟ್ಟು ಸರ್ಚ್​ ಮಾಡಿದಾಗ ಹಿಂದಿ ಸುದ್ದಿವಾಹಿನಿ ಆಜ್​ತಕ್​ನಲ್ಲಿ ಪ್ರಸಾರವಾಗಿದ್ದ ಈ ಸುದ್ದಿಯ ವಾಸ್ತವ ವರದಿ ಪತ್ತೆಯಾಯಿತು.

ಆ ವರದಿಯ ಪ್ರಕಾರ ಅಸ್ಸಾಂನ ನಾಗಾಂವ್​ ಜಿಲ್ಲೆಯ ಸಾಮಾಗುಡಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ ಇದು. ಮೋವಾಮಾರಿ ಎಂಬ ಗ್ರಾಮದ ನಿವಾಸಿ ಜಮಾಲುದ್ದೀನ್​ ತನ್ನ 15 ವರ್ಷದ ಪುತ್ರಿಯನ್ನು ವೇಶ್ಯಾವಾಟಿಕೆಗೆ ತಳ್ಳಲು ಪ್ರಯತ್ನಿಸುತ್ತಾನೆ. ಬಗೆ ಬಗೆಯಾಗಿ ಆಕೆಯ ಮನವೊಲಿಸುತ್ತಾನೆ. ಆಕೆ ಇದಕ್ಕೆ ಒಪ್ಪದಿದ್ದಾಗ ಬಲವಂತವಾಗಿ ಆಕೆಯನ್ನು ಎಳೆದೊಯ್ದು ವೇಶ್ಯಾವಾಟಿಕೆಗೆ ದಬ್ಬಲು ಯತ್ನಿಸುತ್ತಾನೆ. ಆಗ ಆತ ಆ ಬಾಲಕಿಯ ಮೇಲೆ ಮನಸೋಇಚ್ಛೆ ಹಲ್ಲೆ ಮಾಡುವ ವಿಡಿಯೋ ತುಣುಕು ಇದಾಗಿದೆ.

ಜಮಾಲುದ್ದೀನ್​ ಮೂಲತಃ ಬೀದಿಬದಿ ವ್ಯಾಪಾರಿಯಾಗಿರುತ್ತಾನೆ. ಈತನಿಗೆ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿರುವವರ ಸಂಪರ್ಕ ಇರುತ್ತದೆ. ಅಲ್ಲಿ ಭಾರಿ ಹಣ ಸಂಪಾದಿಸಬಹುದು ಎಂಬ ಕನಸಿನಲ್ಲಿ ಈತ ಮೂವರು ಪತ್ನಿಯರನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸುತ್ತಾನೆ. ಇದಕ್ಕೆ ಆಕ್ಷೇಪಿಸುವ ಅವರು ಈತನಿಂದ ದೂರಾಗುತ್ತಾರೆ. ಆದರೆ, ಈ ಬಾಲಕಿ ಅದು ಹೇಗೆ ಈತನ ಬಳಿ ಸಿಲುಕಿಕೊಂಡಳೋ ಗೊತ್ತಿಲ್ಲ. ಈಕೆಯನ್ನಾದರೂ ವೇಶ್ಯವಾಟಿಕೆಗೆ ದಬ್ಬಬೇಕು ಎಂದು ಆತ ಪ್ರಯತ್ನಿಸುತ್ತಾನೆ. ಕೊನೆಗೆ ಪೊಲೀಸ್​ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಾಗಿ, ಈತ ಜೈಲು ಸೇರಿದ್ದಾನೆ. (ಏಜೆನ್ಸೀಸ್​)

 

 

 

 

 

 

 

 

 

 

Stay connected

278,751FansLike
588FollowersFollow
627,000SubscribersSubscribe

ವಿಡಿಯೋ ನ್ಯೂಸ್

VIDEO| ಬರೋಬ್ಬರಿ 20 ಕೆ.ಜಿ. ತೂಕದ ಹೆಬ್ಬಾವು ಸೆರೆಹಿಡಿದ ಮಹಿಳೆ:...

ತಿರುವನಂತಪುರ: ಮಹಿಳೆಯೊಬ್ಬರು ಸುಮಾರು 20 ಕೆ.ಜಿ. ತೂಗುವ ಬೃಹದಾಕಾರದ ಹೆಬ್ಬಾವನ್ನು ಸೆರೆಹಿಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮೆಚ್ಚುಗೆ ಮಹಾಪೂರ ಹರಿದುಬಂದಿದೆ. ವಿಡಿಯೋದಲ್ಲಿರುವ ಮಹಿಳೆಯನ್ನು ಕೊಚ್ಚಿ ಮೂಲದ ವನ್ಯಜೀವಿ ಸಂರಕ್ಷಕಿ...

ಅತ್ಯಾಚಾರ ಪ್ರಕರಣ ಕುರಿತು ರಾಹುಲ್​ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ಗದ್ದಲ:...

ನವದೆಹಲಿ: ಅತ್ಯಾಚಾರ ಪ್ರಕರಣ ಕುರಿತು ಗುರುವಾರ ಜಾರ್ಖಂಡ್​ ಸಮಾವೇಶದಲ್ಲಿ ಕಾಂಗ್ರೆಸ್​ ಮಾಜಿ ಅಧ್ಯಕ್ಷ ಹಾಗೂ ವಯನಾಡಿನ ಹಾಲಿ ಸಂಸದ ರಾಹುಲ್​ ಗಾಂಧಿ ನೀಡಿದ್ದ ಹೇಳಿಕೆಗೆ ಸಂಸತ್ತಿನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ....

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....