VIDEO| ದ್ರೋಣ ಕುಸಿದು ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಮೊಬೈಲ್​ ಕ್ಯಾಮರಾದಲ್ಲಿ ಸೆರೆ!

ಮೈಸೂರು: ವಿಶ್ವವಿಖ್ಯಾತ ದಸರಾ ವೈಭವದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಜಂಬೂ ಸವಾರಿಯ ಗಜಪಡೆಯಲ್ಲಿ ಒಬ್ಬನಾಗಿದ್ದ ‘ ದ್ರೋಣ ‘(37) ನಿನ್ನೆ(ಶುಕ್ರವಾರ) ವಿಧಿವಶವಾದ ಸುದ್ದಿ ಕೇಳಿ ಜಂಬೂ ಸವಾರಿ ಪ್ರಿಯರಿಗೆ ಆಘಾತವಾಗಿತ್ತು.

ಸಾವಿಗೂ ಮುಂಚೆ ಅನಾರೋಗ್ಯದ ನೋವಿನ ಹಿಂಸೆಯಿಂದಲೋ ಏನೋ ತನ್ನ ಕಾಲಿಗೆ ಕಟ್ಟಿದ್ದ ಕಬ್ಬಿಣದ ಸರಪಳಿಯನ್ನು ಬಿಚ್ಚಲು ಪ್ರಯತ್ನಿಸುತ್ತ ನರಳಾಡುತ್ತಿದ್ದ ದ್ರೋಣ ಏಕಾಏಕಿ ಕುಸಿದು ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಮೊಬೈಲ್​ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೊಡಗು ಜಿಲ್ಲೆಯ ತಿತಿಮತಿ ವಲಯದ ಮತ್ತಿಗೋಡು ಆನೆ ಶಿಬಿರದಲ್ಲಿ ದ್ರೋಣನನ್ನು ಪೋಷಿಸಲಾಗುತ್ತಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದ್ರೋಣ ಶುಕ್ರವಾರ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದ.

2006ರಲ್ಲಿ ಹಾಸನ ಜಿಲ್ಲೆಯಲ್ಲಿ ದ್ರೋಣನನ್ನು ಸೆರೆ ಹಿಡಿಯಲಾಗಿತ್ತು. ಬಳಿಕ ಮತ್ತಿಗೋಡು ಶಿಬಿರದಲ್ಲಿ ದಷ್ಟಪುಷ್ಟವಾಗಿ ಬೆಳೆದಿದ್ದ ದ್ರೋಣ 2017 ಹಾಗೂ 2018ರಲ್ಲಿ ದಸರಾದಲ್ಲಿ ಪಾಲ್ಗೊಂಡಿದ್ದ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *