VIDEO| ಬ್ರೇಕ್ ಬದಲು ಆಕ್ಸಿಲೇಟರ್​ ತುಳಿದ ಮಹಿಳೆ: ಕ್ಷಣಾರ್ಧಲ್ಲೇ ನದಿಗೆ ಹಾರಿದ ಕಾರು!

ನ್ಯೂಜರ್ಸಿ​: ಅಮೆರಿಕದ ಮಹಿಳೆಯೊಬ್ಬಳು ತನ್ನ ಕಾರಿನಲ್ಲಿನ ಬ್ರೇಕ್​ ಬದಲು ಆಕ್ಸಿಲೇಟರ್​ ಒತ್ತಿದ ಪರಿಣಾಮ ಕಾರು ವೇಗವಾಗಿ ಚಲಿಸಿ ನ್ಯೂಜರ್ಸಿಯ ಹ್ಯಾಕೆನ್​ಸ್ಯಾಕ್​ ನದಿಗೆ ಹಾರಿ ಮುಳುಗಡೆಯಾದ ಘಟನೆ ಮಂಗಳವಾರ ನಡೆದಿದೆ.

ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಹ್ಯಾಕೆನ್​ಸ್ಯಾಕ್​ ನಗರದ ಅಗ್ನಿಶಾಮಕ ಇಲಾಖೆ ಶೇರ್​ ಮಾಡಿಕೊಂಡಿದೆ. ತನ್ನ ಕಾರನ್ನು ಸ್ವಚ್ಛಗೊಳಿಸಿಕೊಂಡು ಹೋಗುತ್ತಿದ್ದಾಗ ಬ್ರೇಕ್​ ಹಾಕುವ ಬದಲು ಆಕಸ್ಮಿಕವಾಗಿ ಆಕ್ಸಿಲೇಟರ್​ ಒತ್ತಿದ್ದರಿಂದ ತಕ್ಷಣ ನಿಯಂತ್ರಣಕ್ಕೆ ತರಲಾಗದೇ ಪಕ್ಕದಲ್ಲೇ ಇದ್ದ ನದಿಗೆ ಕಾರು ಬಿದ್ದಿದೆ ಎಂದು ಅಗ್ನಿಶಾಮಕ ಇಲಾಖೆ ತನ್ನ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದೆ.

ಕಾರನ್ನು 64 ವರ್ಷದ ಹಿರಿಯ ಮಹಿಳೆ ಚಲಾಯಿಸುತ್ತಿದ್ದರು. ಈ ವೇಳೆ ಆಕೆಯ ಜತೆ ಮಗಳು ಇದ್ದಳು. ಅದೃಷ್ಟವಶಾತ್​ ಇಬ್ಬರು ಗಂಭೀರ ಗಾಯಗಳಿಂದ ತಪ್ಪಿಸಿಕೊಂಡಿದ್ದು, ಮುಂಜಾಗ್ರತ ಕ್ರಮವಾಗಿ ಕಾರು ಚಾಲಕಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆಕೆಯ ಮಗಳು ಚಿಕಿತ್ಸೆಯನ್ನು ನಿರಾಕರಿಸಿದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಂತ್ರದ ಸಹಾಯದಿಂದ ತದನಂತರದಲ್ಲಿ ನದಿಯಿಂದ ಕಾರನ್ನು ಹೊರಗೆಳೆಯಲಾಯಿತು.

ಇದೇ ರೀತಿಯಾದ ಘಟನೆ ಈ ಹಿಂದೆ ಚೀನಾದಲ್ಲಿ ಬೆಳಕಿಗೆ ಬಂದಿತ್ತು. ಹಿರಿಯ ಮಹಿಳೆಯೊಬ್ಬಳು ತನ್ನ ಸೆನ್​ ಕಾರಿನ ಬ್ರೇಕ್​ ಬದಲಾಗಿ ಆಕ್ಸಿಲೇಟರ್ ತುಳಿದ ಪರಿಣಾಮ ಬಹುಹಂತದ ಪಾರ್ಕಿಂಗ್‌ನ ನಾಲ್ಕನೇ ಮಹಡಿಯಿಂದ ಅವಳ ಕಾರು ತೂಗಾಡಿತ್ತು. (ಏಜೆನ್ಸೀಸ್​)

Surveillance video of incident earlier today. Car accident car wash driver mistakenly hit gas instead of brake.The occupants of the car self extricated to the shoreline One occupant of car transported to hospital for minor injuries. Hackensack police on scene with Hackensack fire and towing company to remove [email protected] @pfanj.iaff #chiefmiller

City of Hackensack Fire Department ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಮಂಗಳವಾರ, ಜುಲೈ 16, 2019

Leave a Reply

Your email address will not be published. Required fields are marked *