Vidadala Rajini: ಎಕ್ಸ್ (ಈ ಹಿಂದಿನ ಟ್ವಿಟರ್) ಖಾತೆಯಲ್ಲಿ ತಮ್ಮ ಎದುರಾಳಿಗಳ ವಿರುದ್ಧ ಗುಡುಗಿರುವ ವೈಎಸ್‌ಆರ್‌ಸಿಪಿ ಮಾಜಿ ಸಚಿವೆ ವಿದಾದಲ ರಜಿನಿ, ನೂರು ಪ್ರಕರಣಗಳು ಮತ್ತು ಸಾವಿರ ಪ್ರಚಾರಗಳನ್ನು ಒಂಟಿಯಾಗಿ ನಾನು ಎದುರಿಸಲು ಸಿದ್ಧ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಸಂಸ್ಕಾರಯುತ ಶಿಕ್ಷಣ ಅಭಿನಂದನೀಯ : ಚಂದ್ರಶೇಖರ ನಾನಿಲ್ ಬಣ್ಣನೆ
“ನೈತಿಕತೆಯನ್ನು ಹಾಳುಮಾಡುವ ಪಿತೂರಿಗಳು. ವ್ಯಕ್ತಿತ್ವವನ್ನು ನಾಶಮಾಡುವ ತಂತ್ರಗಳು. ಒಬ್ಬ ಮಹಿಳೆಯಾದ ನನ್ನ ವಿರುದ್ಧ ಅಕ್ರಮ ಪ್ರಕರಣಗಳು ಮತ್ತು ದುರುದ್ದೇಶಪೂರಿತ ಪ್ರಚಾರವನ್ನು ದಾಖಲಿಸುವುದು ನಿಮ್ಮ ಗುರಿಯಾಗಿದ್ದರೆ, ಖಂಡಿತವಾಗಿ ಅಂತಹ ಪ್ರಕರಣಗಳು, ಕುತಂತ್ರಗಳ ವಿರುದ್ಧ ನಾನು ಹೋರಾಡಲು ಸಿದ್ಧ” ಎಂದಿದ್ದಾರೆ.
“ಈ ವಿಚಾರದಲ್ಲಿ ನಾನು ಏಕಾಂಗಿಯಾಗಿ ಹೋರಾಡಲು ಸನ್ನದ್ಧ. ನನ್ನ ಧೈರ್ಯ, ಪ್ರಾಮಾಣಿಕತೆ, ನಾನು ನಂಬುವ ಸತ್ಯ ಮತ್ತು ನೈತಿಕತೆ ನನ್ನನ್ನು ಕಾಪಾಡುತ್ತದೆ. ಸತ್ಯ ಹೊರಬಂದಾಗ ನಿಮ್ಮ ಮುಖಗಳು ಹೇಗಿರುತ್ತವೆ ಎಂಬುದನ್ನು ನೋಡಲು ಬಹಳ ಕಾತರದಿಂದ ಕಾಯುತ್ತಿರುವೆ” ಎಂದು ಟ್ವೀಟ್ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ: ಗಂಗೊಳ್ಳಿಯಲ್ಲಿ ರಾಮತಾರಕ ಮಂತ್ರ ಜಪಯಜ್ಞ
ಸುಲಿಗೆ ಪ್ರಕರಣ
ಇಂದು ವೈಎಸ್‌ಆರ್‌ಸಿಪಿ ನಾಯಕಿ, ಮಾಜಿ ಸಚಿವೆ ವಿದಾದಲ ರಜಿನಿ ಮತ್ತು ಐಪಿಎಸ್ ಅಧಿಕಾರಿ ಜೋಶುವಾ ವಿರುದ್ಧ ಸುಲಿಗೆ ಪ್ರಕರಣ ದಾಖಲಾಯಿತು. ಮಾಜಿ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವಧಿಯಲ್ಲಿ ವಿಜಿಲೆನ್ಸ್ ತಪಾಸಣೆಯ ನೆಪದಲ್ಲಿ ಈ ಸುಲಿಗೆ ನಡೆದಿತ್ತು ಎಂಬ ಆರೋಪ ವ್ಯಕ್ತವಾಗಿದೆ. ಹಿಂದಿನ ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ಕಲ್ಲು ಪುಡಿ ಮಾಡುವ ವ್ಯವಹಾರದ ಮಾಲೀಕರಿಂದ 2.2 ಕೋಟಿ ರೂ.ಗೂ ಹೆಚ್ಚು ಸುಲಿಗೆ ಮಾಡಿದ ಆರೋಪದಡಿ ಆಂಧ್ರಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವಿದಾದಲ ರಜಿನಿ, ಪಿ ಜೋಶುವಾ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆಗೆ ಮುಂದಾಗಿದೆ.
మనోధైర్యాన్ని దెబ్బతీయాలనే కుట్రలు
వ్యక్తిత్వాన్ని హరించాలనే కుయుక్తులుఒక మహిళ నైన నా పై అక్రమ కేసులు, విష ప్రచారాలే మీ లక్ష్యమైతే అలాంటి వంద కేసులను, వేయి ప్రచారాలను ఒంటి చేత్తో ఎదుర్కొడానికి నేను సిద్ధం
నా ధైర్యం నా నిజాయితీ
నా ధైర్యం నేను నమ్మే సత్యం, ధర్మంనేను ఎదురు…
— Rajini Vidadala (@VidadalaRajini) March 23, 2025
ಸದ್ಯ ಈ ಪ್ರಕರಣ ಮುನ್ನೆಲೆಗೆ ಬಂದ ಬೆನ್ನಲ್ಲೇ ವಿದಾದಲ ರಜಿನಿ ಗರಂ ಆಗಿದ್ದು, ತನ್ನ ವಿರುದ್ಧ ಪಿತೂರಿ, ಸಂಬಂಧವಿಲ್ಲದ ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರ ನಡೆದಿದೆ ಎಂಬ ಆರೋಪ, ಅಸಮಾಧಾನವನ್ನು ಟ್ವೀಟ್ ಮೂಲಕ ಎಸಗಿದ್ದಾರೆ,(ಏಜೆನ್ಸೀಸ್).