ಹೃದಯಾಘಾತಕ್ಕೊಳಗಾದ ವ್ಯಕ್ತಿ ಪ್ರಾಣ ಉಳಿಸಿದ ಪೊಲೀಸರು

ಮೈಸೂರು: ರಸ್ತೆಯಲ್ಲಿ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸುವ ಮೂಲಕ ಕೆ.ಆರ್.ಸಂಚಾರ ಪೊಲೀಸರು ಸಮಯ ಪ್ರಜ್ಞೆ ಮತ್ತು ಮಾನವೀಯತೆ ಮೆರೆದಿದ್ದಾರೆ.

ಶನಿವಾರ ಸಂಜೆ ನಗರದ ಶಾಂತಲಾ ಸಿಗ್ನಲ್‌ನಲ್ಲಿ ಹೋಗುತ್ತಿದ್ದ ಕಾರು ಇದ್ದಕ್ಕಿದ್ದ ಹಾಗೇ ಸೈಡ್‌ಗೆ ಬಂದು ನಿಂತಿದ್ದು, ಸ್ಥಳದಲ್ಲಿ ಇದ್ದ ಪೊಲೀಸ್ ಪೇದೆ ಹತ್ತಿರ ಬಂದು ಕಾರು ಪರಿಶೀಲಿಸಿದ ವೇಳೆ ಡ್ರೈವರ್ ಸೀಟ್‌ನಲ್ಲಿ ಕುಳಿತ್ತಿದ್ದ ವ್ಯಕ್ತಿ ಅಸ್ವಸ್ಥರಾದಂತೆ ಕಂಡಿದ್ದಾರೆ. ಕಾರಿನಲ್ಲಿ ಬೇರೆ ಯಾರೂ ಇಲ್ಲದಿರುವುದನ್ನು ಮನಗಂಡ ಪೇದೆ, ತಕ್ಷಣ ಕೆ.ಆರ್.ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಅಶೋಕ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ತಕ್ಷಣ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದ ಇನ್ಸ್‌ಪೆಕ್ಟರ್ ಕಾರಿನ ಗ್ಲಾಸ್ ಒಡೆದು ವ್ಯಕ್ತಿಯನ್ನು ಪೊಲೀಸರ ಕಾರಿನಲ್ಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರನ್ನು ಎಂ.ಆರ್.ವಿಶ್ವನಾಥ್ ಎಂದು ಗುರುತಿಸಲಾಗಿದೆ.

ಇನ್ಸ್‌ಪೆಕ್ಟರ್ ಅಶೋಕ್, ಪೇದೆಗಳಾದ ಉಮೇಶ್, ರವಿಕುಮಾರ್, ಚಂದ್ರು ಸಮಯಪ್ರಜ್ಞೆ ಅರಿತು ವ್ಯಕ್ತಿ ಜೀವ ಉಳಿಸಿದ್ದಾರೆ.

Leave a Reply

Your email address will not be published. Required fields are marked *