blank

CHAAVA Review; ಸಿಂಹದ ಮರಿಯಾಗಿ ವಿಕ್ಕಿ ಕೌಶಲ್​ ಗರ್ಜನೆ

blank

ಚಿತ್ರ: ಛಾವಾ
ನಿರ್ದೇಶನ: ಲಕ್ಷ್ಮಣ ರಾಮಚಂದ್ರ ಉತೇಕರ್​
ನಿರ್ಮಾಣ: ಮ್ಯಾಡಾಕ್​ ಫಿಲಂಸ್​
ತಾರಾಗಣ: ವಿಕ್ಕಿ ಕೌಶಲ್​, ರಶ್ಮಿಕಾ ಮಂದಣ್ಣ, ಅಕ್ಷಯ್​ ಖನ್ನಾ, ಬಾಲಾಜಿ ಮನೋಹರ್​, ಅಶುತೋಷ್​ ರಾಣಾ, ಡಯಾನಾ ಪೆಂಟಿ, ದಿವ್ಯಾ ದತ್ತಾ ಮತ್ತಿತರರು.

| ಹರ್ಷವರ್ಧನ್​ ಬ್ಯಾಡನೂರು

ಛತ್ರಪತಿ ಶಿವಾಜಿ ಮಾಹಾರಾಜರ ನಿಧನದ ಬಳಿಕ ಮರಾಠರು ಅನಾಥರಾಗಿದ್ದಾರೆ. ಇನ್ನು ಹಿಂದುಸ್ತಾನದಲ್ಲಿ ಮೊಲರಿಗೆ ಯಾರಿಂದಲೂ ತೊಂದರೆಯಿಲ್ಲ ಎಂದು ಔರಂಗಜೇಬನು ಸಂಭ್ರಮಿಸುತ್ತಿರುವ ಹೊತ್ತಲ್ಲೇ 24 ವರ್ಷದ ಯುವಕನೊಬ್ಬ ಮೊಲರ ಆಳ್ವಿಕೆಯಿದ್ದ ಬುರ್ಹಾನ್​ಪುರವನ್ನು ವಶಪಡಿಸಿಕೊಳ್ಳುತ್ತಾನೆ. ಆಗ ಅವರಿಗೆ “ಡೆಕ್ಕನ್​ನಿಂದ ಎದ್ದುಬಂದ ಬಿರುಗಾಳಿಯ ಹೆಸರು ಸಂಭಾಜಿ ಭೋಸ್ಲೆ (ವಿಕ್ಕಿ ಕೌಶಲ್​)’ ಎಂದು ತಿಳಿಯುತ್ತದೆ. ತಂದೆ ಛತ್ರಪತಿ ಶಿವಾಜಿ ಮಹಾರಾಜರ “ಹಿಂದವೀ ಸ್ವರಾಜ್ಯ’ದ ಕನಸನ್ನು ನನಸು ಮಾಡಲು ಹೊರಟ ಮಗ ಸಂಭಾಜಿ ಕಥೆಯಿದು. ಪದೇಪದೆ ಮೊಲರ ಮೇಲೆ ದಾಳಿ ಮಾಡುತ್ತಾ ಸಂಭಾಜಿ, ಔರಂಗಜೇಬನ ನಿದ್ರೆಗೆಡಿಸುತ್ತಾನೆ. 8 ಲಕ್ಷ ಸೈನಿಕರು, 50 ಸಾವಿರ ಅಶ್ವದಳ, 30 ಸಾವಿರ ಆನೆಗಳೊಂದಿಗೆ ಕೇವಲ 25 ಸಾವಿರ ಸೈನಿಕರಿದ್ದ ಸಂಭಾಜಿ ಮೇಲೆ ಔರಂಗಜೇಬನು ಯುದ್ಧ ಸಾರುತ್ತಾನೆ. ಸುಮಾರು ಒಂಬತ್ತು ವರ್ಷಗಳ ಕಾಲ ಆತನಿಗಾಗಿ ಹುಡುಕಾಟ ನಡೆಸುತ್ತಾನೆ.

CHAAVA Review; ಸಿಂಹದ ಮರಿಯಾಗಿ ವಿಕ್ಕಿ ಕೌಶಲ್​ ಗರ್ಜನೆ

 

ಗೆರಿಲ್ಲಾ ತಂತ್ರಗಳ ಮೂಲಕ ಕಾಡು, ಹೊಲ, ಮಳೆ, ಬಿಸಿಲೆನ್ನದೆ ಮೊಲರ ಸೈನ್ಯದ ಮೇಲೆ ದಾಳಿಯಿಡುವ ಸಂಭಾಜಿ, ಕನಸ್ಸಿನಲ್ಲೂ ಔರಂಗಜೇಬನನ್ನು ಕಾಡುತ್ತಾನೆ. ಮರಾಠರ ಜತೆಗಿದ್ದ ಕಾಣೋಜಿ ಮತ್ತು ಗಾನೋಜಿ ಮೊಲರ ಜತೆ ಕೈಜೋಡಿಸಿ, ಸಂಭಾಜಿ ಬೆನ್ನಿಗೆ ಚೂರಿ ಹಾಕುತ್ತಾರೆ. ಸಂಭಾಜಿ ಮೊಲ್​ ಸೇನೆಗೆ ಸಿಕ್ಕೀಬಿಳುತ್ತಾರೆ. ಔರಂಗಜೇಬನು ಇಸ್ಲಾಂಗೆ ಮತಾಂತರವಾದರೆ, ಜೀವದಾನ ನೀಡುವುದಾಗಿ ಸಂಭಾಜಿಗೆ ಹೇಳುತ್ತಾನೆ. ಅದಕ್ಕೆ ಒಪ್ಪದಿದ್ದಾಗ ಅವರನ್ನು ಕಟ್ಟಿಹಾಕಿ, ಕೈಕಾಲುಗಳ ಉಗುರು ಕೀಳಲಾಗುತ್ತದೆ. ನಾಲಗೆ ಕತ್ತರಿಸಿ, ಯುದ್ಧದ ಸಂದರ್ಭದಲ್ಲಿ ಆಗಿದ್ದ ಗಾಯಗಳಿಗೆ ಉಪು$್ಪ ಸವರಲಾಗುತ್ತದೆ. ಕಾದ ಸಲಾಕೆಗಳಿಂದ ಕಣ್ಣುಗಳನ್ನು ಸುಡಲಾಗುತ್ತದೆ. ಆದರೆ, ಹಿಂದವೀ ಸ್ವರಾಜ್ಯದ ಕನಸು ಕಂಡ “ಛಾವಾ’ (ಸಿಂಹದ ಮರಿ) ಯಾವುದಕ್ಕೂ ಮಣಿಯುವುದಿಲ್ಲ…

CHAAVA Review; ಸಿಂಹದ ಮರಿಯಾಗಿ ವಿಕ್ಕಿ ಕೌಶಲ್​ ಗರ್ಜನೆ

ವಿಕ್ಕಿ ಕೌಶಲ್​ ಈಗಾಗಲೇ ವಿಭಿನ್ನ ಪಾತ್ರಗಳ ಮೂಲಕ ಉತ್ತಮ ನಟ ಎಂಬುದನ್ನು ನಿರೂಪಿಸಿದ್ದಾರೆ. “ಛಾವಾ’ದಲ್ಲಿ ಬಹುಶ@ ಸಂಭಾಜಿ ಹೀಗೇ ಇದ್ದರೇನೋ? ಎಂಬಷ್ಟು ಅದ್ಭುತವಾಗಿ ಅವರ ಅಭಿನಯ ಮೂಡಿಬಂದಿದೆ. ಒನ್​ ಮ್ಯಾನ್​ ಆರ್ಮಿಯಂತೆ ಚಿತ್ರವನ್ನು ಹೆಗಲ ಮೇಲೆ ಹೊತ್ತೊಯ್ದಿದ್ದಾರೆ ವಿಕ್ಕಿ. ಸಂಭಾಜಿ ಪತ್ನಿ ಯೆಸುಬಾಯಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಡಬ್ಬಿಂಗ್​ ಮತ್ತು ನಟನೆಯಿಲ್ಲ ಕೊರತೆ ಕಾಣಿಸುತ್ತದೆ. ಔರಂಗಜೇಬನಾಗಿ ಅಕ್ಷಯ್​ ಖನ್ನಾ ಮೌನದಲ್ಲೇ ಕ್ರೌರ್ಯ ವ್ಯಕ್ತಪಡಿಸುತ್ತಾರೆ. ಕನ್ನಡಿಗ ಬಾಲಾಜಿ ಮನೋಹರ್​ ಮ್ಹಲೋಜಿ ಬಾಬಾಆಗಿ ಗಮನ ಸೆಳೆಯುತ್ತಾರೆ. ನಿರ್ದೇಶಕ ಲಕ್ಷ್ಮಣ ಉತೇಕರ್​ ಇಲ್ಲಿ ಹೆಚ್ಚು ಆ್ಯಕ್ಷನ್​ ಸನ್ನಿವೇಶಗಳಿಗೆ ಮಹತ್ವ ನೀಡಿದಂತಿದೆ. ಎ.ಆರ್​.ರೆಹಮಾನ್​ ಹಿನ್ನೆಲೆ ಸಂಗೀತದಲ್ಲಿ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಅವಕಾಶವಿತ್ತು. ಆದರೆ, ಅವರು ಆ ಅವಕಾಶವನ್ನು ಉಪಯೋಗಿಸಿಕೊಂಡಿಲ್ಲ. ಈ ಸಿನಿಮಾ ನೋಡಿದ ಬಳಿಕ ಮೊಲರು, ಬ್ರಿಟಿಷರ ಬಗ್ಗೆ ಶಾಲೆ, ಕಾಲೇಜು ಪಠ್ಯಗಳಲ್ಲಿ ಓದಿರುವ ನಾವು ಸಂಭಾಜಿಯಂತಹ ವೀರರ ಬಗ್ಗೆ ಯಾಕೆ ಪಠ್ಯಗಳಲ್ಲಿ ಓದಿಲ್ಲ ಎಂಬ ಪ್ರಶ್ನೆ ಮೂಡುವುದು ಸಹಜ!

 

Share This Article

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ…

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…