ತಪ್ಪದೇ ಎಲ್ಲರೂ ‘ಮಹರ್ಷಿ’ ಚಿತ್ರವನ್ನು ನೋಡಿ ಎಂದು ಉಪರಾಷ್ಟ್ರಪತಿ ಹೇಳಿದ್ದೇಕೆ?

ಮುಂಬೈ: ಟಾಲಿವುಡ್​ ಸೂಪರ್​ಸ್ಟಾರ್​ ಮಹೇಶ್​ ಬಾಬು ಅವರ 25ನೇ ಚಿತ್ರ ‘ಮಹರ್ಷಿ’ ಬಿಡುಗಡೆಗೊಂಡು ಭರ್ಜರಿಯಾಗಿ ಮುನ್ನುಗುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ಇದರ ಜತೆಗೆ ಚಿತ್ರದ ಬಗ್ಗೆ ಎಲ್ಲೆಡೆ ಪ್ರಶಂಸೆಯ ಮಾತುಗಳು ಕೇಳಿಬರುತ್ತಿದ್ದು, ಇದೀಗ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರು ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿರುವ ವೆಂಕಯ್ಯನಾಯ್ಡು ಅವರು ಗ್ರಾಮೀಣ ವಿಷಯಾಧಾರಿತ ಮೇಲೆ ಮೂಡಿಬಂದಿರುವ ಮಹರ್ಷಿ ಚಿತ್ರದಲ್ಲಿ ಕೃಷಿ ಕ್ಷೇತ್ರದ ಸಂರಕ್ಷಣಾ ಕ್ರಮಗಳ ಬಗ್ಗೆ ಹಾಗೂ ವೃದ್ಧರಿಗೆ ಸಹಾಯ ಮಾಡುವ ಗುಣವನ್ನು ಹೆಚ್ಚು ತೋರಿಸಲಾಗಿದೆ. ಇದು ಗಮನಾರ್ಹವಾಗಿದ್ದು, ಎಲ್ಲರೂ ತಪ್ಪದೇ ಚಿತ್ರವನ್ನು ವೀಕ್ಷಣೆ ಮಾಡಬೇಕು. ಗ್ರಾಮೀಣ ಭಾಗದ ಜನಸಂಖ್ಯೆ ಮತ್ತು ಕೃಷಿ ಮಹತ್ವದ ಬಗ್ಗೆ ಚಿತ್ರದಲ್ಲಿ ಬಿಂಬಿಸಲಾಗಿದೆ ಎಂದು ಹೇಳಿದ್ದಾರೆ.

ವೆಂಕಯ್ಯನಾಯ್ಡು ಅವರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಮಹೇಶ್​ ಬಾಬು ಅವರು ಸರ್​… ನಮ್ಮ ತಂಡಕ್ಕೂ ಹಾಗೂ ವೈಯಕ್ತಿಕವಾಗಿ ನನಗೂ ಸಿಕ್ಕಂತಹ ದೊಡ್ಡ ಗೌರವ ಇದಾಗಿದೆ. ಇದಕ್ಕಿಂತ ಉತ್ತಮವಾದದ್ದನ್ನು ಪಡೆಯಲು ಸಾಧಯವಿಲ್ಲ. ಧನ್ಯವಾದಗಳು ಸರ್,​ ಮಹರ್ಷಿಯಂತಹ ಮತ್ತಷ್ಟು ಸಿನಿಮಾವನ್ನು ಮಾಡಲು ನಿಮ್ಮ ಮಾತುಗಳು ಸ್ಫೂರ್ತಿ ನೀಡಿವೆ. ನಮ್ಮ ಚಿತ್ರತಂಡದ ಪರವಾಗಿ ನಾನು ಗೌರವ ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಮಹೇಶ್​ ಬಾಬು ಎನ್​ಆರ್​ಐ ಬಿಸಿನೆಸ್​ ಮ್ಯಾನ್​ ಆಗಿ ವಿದೇಶದಿಂದ ತಮ್ಮ ತವರಿಗೆ ಮರಳಿ ತುಳಿತಕ್ಕೊಳಗಾದ ರೈತರ ಪರವಾಗಿ ನಿಲ್ಲುವ ಸೂರ್ತಿದಾಯಕ ವಿಷಯಾಂಶ ಚಿತ್ರಕತೆಯಲ್ಲಿದೆ. ಈಗಾಗಲೇ ನೂರು ಕೋಟಿಯನ್ನು ತನ್ನಾ ಗಲ್ಲಾಪೆಟ್ಟಿಗೆಗೆ ಹಾಕಿಕೊಂಡು ಚಿತ್ರ ಮುನ್ನುಗುತ್ತಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *