10 ಆಟಗಾರರ ನಡುವೆಯೂ ಬ್ರಿಟನ್‌ಗೆ ಸೋಲುಣಿಸಿದ ಭಾರತ: ಹೀರೋ ಆದ ಶ್ರೀಜೇಶ್

ಪ್ಯಾರಿಸ್: ಭಾರತ ಪುರುಷರ ಹಾಕಿ ತಂಡ ಸತತ ಎರಡನೇ ಒಲಿಂಪಿಕ್ಸ್‌ನಲ್ಲಿ ಸೆಮಿೈನಲ್‌ಗೇರಿದ ಸಾಧನೆ ಮಾಡಿದೆ. 41 ವರ್ಷಗಳ ಬಳಿಕ ಟೋಕಿಯೊ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಬ್ರಿಟನ್ ಎದುರು ಶೂಟೌಟ್‌ನಲ್ಲಿ 4-2 ಅಂತರದ ರೋಚಕ ಗೆಲುವು ದಾಖಲಿಸಿದೆ. ನಿಗದಿತ ಸಮಯದಲ್ಲಿ ಪಂದ್ಯ1-1 ರಿಂದ ಸಮಬಲಗೊಂಡಿತ್ತು. ಈ ಲಿತಾಂಶದೊಂದಿಗೆ ಹರ್ಮಾನ್‌ಪ್ರೀತ್ ಪಡೆ ಪದಕ ಖಾತ್ರಿಪಡಿಸಲು ಕೇವಲ 1 ಗೆಲುವಿನ ದೂರದಲ್ಲಿದ್ದು, 44 ವರ್ಷಗಳ ಬಳಿಕ ಒಲಿಂಪಿಕ್ಸ್ ಫೈನಲ್‌ಗೇರುವ ನಿರೀಕ್ಷೆ ಮೂಡಿಸಿದೆ. ಉಪಾಂತ್ಯದಲ್ಲಿ ಸೋತರೆ ಕಂಚಿನ ಪದಕದ ಪ್ಲೇಆ್ ಪಂದ್ಯ ಆಡುವ ಅವಕಾಶ ಹೊಂದಿದೆ.

ಅಮಿತ್‌ಗೆ ರೆಡ್ ಕಾರ್ಡ್: ಭಾರತದ ಪ್ರಮುಖ ಡಿೆಂಡರ್ ಅಮಿತ್ ರೋಹಿದಾಸ್‌ಗೆ ರೆಡ್ ಕಾರ್ಡ್ ನೀಡಲಾಯಿತು. ಇದರಿಂದಾಗಿ ಪಂದ್ಯದಲ್ಲಿ 40 ನಿಮಿಷಕ್ಕೂ ಅಧಿಕ ಸಮಯ ಭಾರತ 10 ಆಟಗಾರರೊಂದಿಗೆ ಆಟ ಮುಂದುವರಿಸಬೇಕಾಯಿತು. ಪಂದ್ಯದ 17ನೇ ನಿಮಿಷದಲ್ಲಿ ಚೆಂಡನ್ನು ಮಿಡ್‌ಫೀಲ್ಡ್‌ನಲ್ಲಿ ಡ್ರಿಬ್ಲಿಂಗ್ ಮಾಡುತ್ತ ಸಾಗಿದ ಅಮಿತ್ ಅವರ ಸ್ಟಿಕ್ ಬ್ರಿಟನ್‌ನ ವಿಲ್ ಕಾಲ್ಸನ್ ಮುಖಕ್ಕೆ ತಾಗಿತು. ಇದು ಉದ್ದೇಶಪೂರ್ವಕ ಆಟ ಎಂದು ರೆಫ್ರಿ ಅಮಿತ್‌ಗೆ ರೆಡ್ ಕಾರ್ಡ್ ತೋರಿಸಿದರು. ಆನ್‌ಫೀಲ್ಡ್ ರೆಫ್ರಿ ತೀರ್ಪಿಗೆ ಮೇಲ್ಮನವಿ ಸಲ್ಲಿಸಿದರೂ ಭಾರತಕ್ಕೆ ಹಿನ್ನಡೆ ಎದುರಾಯಿತು. ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ನಿಯಮ 9.2 ರ ಪ್ರಕಾರ, ಫೀಲ್ಡ್‌ನಲ್ಲಿರುವ ಆಟಗಾರರು ತಮ್ಮ ಸ್ಟಿಕ್‌ಅನ್ನು ಅಪಾಯಕಾರಿ ರೀತಿಯಲ್ಲಿ ಬಳಸಬಾರದು. ಜತೆಗೆ ಆಟಗಾರರು ತಮ್ಮ ಸ್ಟಿಕ್ಸ್‌ಅನ್ನು ಇತರ ಆಟಗಾರರ ತಲೆಯ ಮೇಲೆ ಎತ್ತಬಾರದು.

ಶ್ರೀಜೇಶ್ ಹೀರೋ: ವೃತ್ತಿ ಜೀವನದ ಕೊನೆಯ ಕೂಟ ಆಡುತ್ತಿರುವ ಕೇರಳದ ಗೋಲು ಕೀಪರ್ ಪಿಆರ್ ಶ್ರೀಜೇಶ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಬ್ರಿಟನ್ ಆಟಗಾರರ ಗೋಲು ಗಳಿಸುವ 11 ಪ್ರಯತ್ನಗಳ ಜತೆಗೆ 4 ಪೆನಾಲ್ಟಿ ಕಾರ್ನರ್ ತಡೆದ ಶ್ರೀಜೇಶ್ ತಡೆಗೋಡೆಯಾದರು. 36 ವರ್ಷದ ಶ್ರೀಜೇಶ್ ಶೂಟೌಟ್‌ನಲ್ಲೂ ಬ್ರಿಟನ್‌ನ 3 ಹಾಗೂ 4ನೇ ಅವಕಾಶದಲ್ಲಿ ಗೋಲು ಗಳಿಸಲು ತಡೆಯೊಡ್ಡಿದರು. ಜಯ ಪಕ್ಕಾ ಆಗುತ್ತಿದ್ದಂತೆ ಭಾರತದ ಕೋಚ್ ಕ್ರೇಗ್ ಪುಲ್ಟನ್ ಸೇರಿ ಎಲ್ಲ ಆಟಗಾರರು ಶ್ರೀಜೇಶ್ ಅವರನ್ನು ತಬ್ಬಿ ಸಂಭ್ರಮಿಸಿದರು. ‘ನಾನು ಮೈದಾನಕ್ಕೆ ಕಾಲಿಟ್ಟಾಗ ನನಗೆ ಎರಡು ಆಯ್ಕೆಗಳಿದ್ದವು. ಇದು ನನ್ನ ಕೊನೆಯ ಪಂದ್ಯವಾಗಬಹುದು ಅಥವಾ ಇನ್ನೂ ಎರಡು ಪಂದ್ಯ ಆಡುವ ಅವಕಾಶ ಸಿಗಬಹುದು ಎಂದು ಭಾವಿಸಿದ್ದೆ. ಈಗ ನನಗೆ ಇನ್ನೂ ಎರಡು ಪಂದ್ಯ ಆಡುವ ಅವಕಾಶ ದೊರೆತಿದೆ’ ಎಂದು ಶ್ರೀಜೇಶ್ ಗೆಲುವಿನ ಸಂಭ್ರಮ ವ್ಯಕ್ತಪಡಿಸಿದರು.

Share This Article

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…