ರೋಷನ್​ ಬೇಗ್​ ಮೇಲೆ ಏಕಾಏಕಿ ಕ್ರಮ ಕೈಗೊಳ್ಳುವುದು ಬೇಡ ಎಂಬ ಸಲಹೆ ನೀಡಿದ ವೇಣುಗೋಪಾಲ್​

ಬೆಂಗಳೂರು: ರೋಷನ್​ ಬೇಗ್​ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದಿಂದ ನೋಟಿಸ್​ ನೀಡಲಾಗಿದ್ದು, ರೋಷನ್​ ಬೇಗ್​ ಮೇಲೆ ಏಕಾಏಕಿ ಕ್ರಮ ಕೈಗೊಳ್ಳುವುದು ಬೇಡ ಎಂದು ಕಾಂಗ್ರೆಸ್​ನ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್​ ಸಲಹೆ ನೀಡಿದ್ದಾರೆ.

ವೇಣುಗೋಪಾಲ್​ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಪಕ್ಷದ ಪ್ರಮುಖರು ಭಾಗವಹಿಸಿದ್ದು, ಈ ವೇಳೆ ಹೈಕಮಾಂಡ್​ ಮಟ್ಟದಲ್ಲಿ ರೋಷನ್​ ಬೇಗ್​ ಅವರಿಗೆ ಉತ್ತಮ ಸಂಪರ್ಕವಿದ್ದು, ನೀಡಲಾಗಿರುವ ನೋಟಿಸ್​ಗೆ ಏನು ಉತ್ತರಿಸುತ್ತಾರೆ ಎಂದು ಕಾದು ನೋಡೋಣ ಎಂಬ ಸಲಹೆಯನ್ನು ವೇಣುಗೋಪಾಲ್​ ನೀಡಿದ್ದಾರೆ.

ರೋಷನ್​ಬೇಗ್​ ಎಐಸಿಸಿ ಸದಸ್ಯ ಮತ್ತು ಅಲ್ಪಸಂಖ್ಯಾತರ ಮುಖಂಡರಾಗಿದ್ದು, ರೋಷನ್ ಬೇಗ್​ ವಿರುದ್ಧ ಕ್ರಮ ಕೈಗೊಳ್ಳಲು ಹೈಕಮಾಂಡ್​ಗೆ ಬಿಡಲು ತೀರ್ಮಾನ ಮಾಡಲಾಗಿದೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)