More

    ಬಿ.ಜಿ.ಪುರದಿಂದ ಚಿಕ್ಕಲ್ಲೂರಿಗೆ ಪೂಜಾ ಸಾಮಗ್ರಿ ಮೆರವಣಿಗೆ

    ಬೆಳಕವಾಡಿ: ಸಮೀಪದ ಬೊಪ್ಪೇಗೌಡನಪುರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧಿ ಧರೆಗೆ ದೊಡ್ಡವರ ಮಂಟೇಸ್ವಾಮಿ ಮಠದ ಪೀಠಾಧ್ಯಕ್ಷರು ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ನಡೆಸಲು ಶುಕ್ರವಾರ ಶ್ರೀಮಠದಿಂದ ಪೂಜಾ ಸಾಮಗ್ರಿಗಳನ್ನು ಮೆರವಣಿಗೆ ಮೂಲಕ ಕೊಂಡೊಯ್ದರು.

    ಪುರಾಣ ಕಥೆಯ ಪ್ರಕಾರ ಧರೆಗೆ ದೊಡ್ಡವರಾದ ಮಂಟೇಸ್ವಾಮಿ ತಮ್ಮ ಶಿಷ್ಯ ಸಿದ್ದಪ್ಪಾಜಿಯನ್ನು ಚಿಕ್ಕಲ್ಲೂರಿನಲ್ಲಿ ನೆಲಸಿ ಮೂಡಲ ಸೀಮೆಯಲ್ಲಿ ನಡೆಯುತ್ತಿದ್ದ ರಣಮೋಡಿಗಾರರನ್ನು ಹತ್ತಿಕ್ಕಿ ಅಲ್ಲಿನ ಜನರನ್ನು ರಕ್ಷಿಸಲು ಸೂಚಿಸಿದ್ದ ಹಿನ್ನೆಲೆಯಾಗಿದೆ.

    ಪ್ರತಿವರ್ಷ ಮಂಟೇಸ್ವಾಮಿ ಕಂಡಾಯಗಳನ್ನು ಬೊಪ್ಪೇಗೌಡನಪುರದ ಶ್ರೀಮಠದ ಪೀಠಾಧಿಪತಿ ಜ್ಞಾನಾನಂದ ಚನ್ನರಾಜೇಅರಸು ಕೊಂಡೊಯ್ದು ಚಿಕ್ಕಲ್ಲೂರಿನಲ್ಲಿ ಚಂದ್ರಮಂಡಲೋತ್ಸವಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಐದು ದಿನಗಳ ಕಾಲ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವರು. ಈ ಹಿನ್ನೆಲೆಯಲ್ಲಿ ಬೊಪ್ಪೇಗೌಡನಪುರದಿಂದ ದೇವರ ಪೆಟ್ಟಿಗೆಯನ್ನು ವಿವಿಧ ಪೂಜಾವಿಧಿ ವಿಧಾನದೊಡನೆ ಚಾಮರ, ಛತ್ರಿಗಳನ್ನು ಅರಸರ ಕಾಲದ ಅಂಗರಕ್ಷಕರ ಉಡುಗೆಗಳನ್ನು ಧರಿಸಿದ ಮಠದ ಸಿಬ್ಬಂದಿ ತೆರಳಿದರು.

    ತಮಟೆ, ನಗಾರಿಗಳನ್ನು ನುಡಿಸುವ ತಂಡದ ಜತೆಗೆ ಗ್ರಾಮವೂ ಸೇರಿದಂತೆ ಬೆಳಕವಾಡಿ, ಜವನಗನಹಳ್ಳಿ, ಸತ್ತೇಗಾಲ, ಪಾಳ್ಯ ಗ್ರಾಮಗಳ ಮೂಲಕ ಮೆರವಣಿಗೆಯಲ್ಲಿ ಚಿಕ್ಕಲ್ಲೂರು ಗ್ರಾಮಕ್ಕೆ ಮೆರವಣಿಗೆಯಲ್ಲಿ ಸಾಗಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts