ಗೋಕರ್ಣ ರಾಮ ತೀರ್ಥ ಪ್ರದೇಶಕ್ಕೆ ಪ್ರವೇಶ ನಿಷೇಧ

blank

ಗೋಕರ್ಣ:ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಸುರಿದ ಭಾರೀ ಮಳೆಗೆ ಸಮುದ್ರಕ್ಕೆ ಅತ್ಯಂತ ಸಮೀಪದಲ್ಲಿರುವ ಪುರಾತನ ರಾಮತೀರ್ಥದ ಬಲಭಾಗದ ಎತ್ತರದ ಗುಡ್ಡದ ಬಹು ಉದ್ದನೆಯ ಭಾಗ ಕುಸಿದು ಮಂದಿರದ ಒಂದು ಪಾರ್ಶ್ವವನ್ನು ಮುಚ್ಚಿ ಹಾಕಿತ್ತು.ಕುಸಿತದ ವೇಳೆ ಹಲವು ಬೃಹತ್ ಬಂಡೆಗಳು ಉರುಳಿ ಬಂದು ಮಂದಿರ ಸಮೀಪದಲ್ಲಿ ಅಪಾಯಕ್ಕೆ ಕಾರಣವಾಗಿದ್ದು ಅವು ಇವತ್ತಿಗೂ ಘಟನೆಗೆ ಸಾಕ್ಷಿಯಾಗಿ ಅಲ್ಲೇ ಬಿದ್ದಿವೆ.ಈ ಸಂಬಂಧ ಜಿಲ್ಲಾಡಳಿತ ಜಿಯೋಲೋಜಿಕಲ್ ಸರ್ವೆ ಆಫ್ ಇಂಡಿಯಾ(ಜಿಎಸ್‌ಐ) ಅಧಿಕಾರಿಗಳಿಂದ ಕಳೆದ ಮೇ ತಿಂಗಳಿನಲ್ಲಿ ಈ ಪ್ರದೇಶದ ಸಮೀಕ್ಷೆ ನಡೆಸಿ ವರದಿಯನ್ನು ಪಡೆದಿತ್ತು.ಆ ವರದಿಯ ಪ್ರಕಾರ ಭಾರೀ ಮಳೆಯ ಸಮಯದಲ್ಲಿ ಈ ಭಾಗ ಮತ್ತೆ ಕುಸಿತದ ಅಪಾಯಕ್ಕೆ ಒಳಗಾಗುವ ಸಾಧ್ಯತೆಯ ಬಗ್ಗೆ ಎಚ್ಚರಿಸಲಾಗಿತ್ತು.ಈ ಹಿನ್ನೆಲೆಯಲ್ಲಿ ರಾಮತೀರ್ಥ ಮಂದಿರದ ನಿರ್ವಹಣಾ ಸಮಿತಿಗೆ ಕುಮಟಾ ತಹಸೀಲ್ದಾರ ಮತ್ತು ಸ್ಥಳೀಯವಾಗಿ ಕಂದಾಯ ಇಲಾಖೆಯಿಂದ ನೋಟೀಸ್ ನೀಡಿ ಅನುಸರಿಸ ಬೇಕಾದ ಅಗತ್ಯ ಕ್ರಮಗಳ ಬಗ್ಗೆ ಸೂಚಿಸಲಾಯಿತು.ಇದರ ಜೊತೆಗೆ ಕಂದಾಯ ನಿರೀಕ್ಷಕ ಸಂತೋಷ ಶೇಟ್ ಮತು ಗ್ರಾಮಾಧಿಕಾರಿ ಮಂಜಪ್ಪ ಅವರು ಸ್ಥಳಕ್ಕೆ ಭೇಟಿಯಿತ್ತು ಅಪಾಯ ವಲಯದ ರಸ್ತೆಗೆ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಿದ್ದಾರೆ.ಈ ಸ್ಥಳ ಗುಡ್ಡ ಕುಸಿತದ ಅಪಾಯಕಾರಿ ಸ್ಥಳವಾಗಿದ್ದು ಇಲ್ಲಿಗೆ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂಬ ಫಲಕವನ್ನು ಹಾಕಲಾಯಿತು.ಪ್ರವಾಸಿಗರು ಈ ಸ್ಥಳವನ್ನು ಟ್ರೇಕಿಂಗ್‌ಗೆ ಬಳಸುವ ಜೊತೆಗೆ ಇಲ್ಲಿಗೆ ಬರುವ ಯಾತ್ರಾರ್ಥಿಗಳು ರಾಮತೀರ್ಥ ದರ್ಶನ ಪಡೆಯುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ವತಿಯಿಂದ ತಿಳಿಸಲಾಗಿದೆ.

Share This Article

ಸ್ನಾನದ ನಂತರವೂ ನಿಮ್ಮ ದೇಹವು ಕೆಟ್ಟ ವಾಸನೆಯನ್ನು ಬೀರುತ್ತದೆಯೇ? ಹೀಗೆ ಮಾಡಿ ನೋಡಿ…. life style

life style: ಕೆಲವರಿಗೆ ದೇಹದಿಂದ ವಾಸನೆ ಬರುವುದನ್ನು ನೀವು ಗಮನಿಸಿರಬಹುದು. ಅದು ಚಳಿಯಾಗಿರಬಹುದು, ಮಳೆಯಾಗಿರಬಹುದು, ಸಣ್ಣ…

ವಕ್ರ ದಂತ ಸಮಸ್ಯೆಗೆ ಸೂಕ್ತ ಪರಿಹಾರ ಅಲೈನರ್

ಹಲ್ಲು ಅಡ್ಡಾದಿಡ್ಡಿ ಇದ್ದರೆ ಅಂಥವರು ಮುಜುಗರದಿಂದ ಮನಬಿಚ್ಚಿ ನಗದಿರುವುದೇ ಹೆಚ್ಚು. ಆದರೆ ಈಗ ಅಷ್ಟಕ್ಕೆಲ್ಲ ಚಿಂತೆ…