ಕಿರುವಾರ ಎಸ್. ಸುದರ್ಶನ್ ಕೋಲಾರ
ವಾಹನಗಳಿಗೆ ಎಲ್ಇಡಿ ಲೈಟ್ ಅಳವಡಿಸುವುದನ್ನು ರಾಜ್ಯ ಸರ್ಕಾರ ಈಗಾಗಲೇ ನಿಷೇಧಿಸಿದ್ದು, ನಿಯಮ ಉಲ್ಲಂಘಿಸುವ ಸವಾರರಿಗೆ ದಂಡಾಸ್ತ್ರ ಪ್ರಯೋಗಿಸಲು ಪೊಲೀಸರು ಮುಂದಾಗಿದ್ದಾರೆ.
ಹೆಚ್ಚು ಬೆಳಕು ನೀಡುವ ಎಲ್ಇಡಿ ಲೈಟ್ಸ್ಗಳನ್ನು ವಾಹನಗಳಿಗೆ ಅಳವಡಿಸುವುದರಿಂದ ಎದುರುಗಡೆ ಬರುವ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಅನೇಕ ಅಪಘಾತಗಳಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಕಣ್ಣಿಗೆ ಕುಕ್ಕುವ ಎಲ್ಇಡಿ ಲೈಟ್ಸ್ ಅಳವಡಿಸುವುದನ್ನು ನಿಷೇಧಿಸಿದ್ದು, ಈಗಾಗಲೇ ಅಳವಡಿಸಿರುವವರು ತೆರವುಗೊಳಿಸಲು ಕಾಲಾವಕಾಶ ನೀಡಿತ್ತು. ಆದರೂ ಸಹ ಸಾಕಷ್ಟು ಮಂದಿ ಈಗಲೂ ಎಲ್ಇಡಿ ಲೈಟ್ಗಳನ್ನು ಅಳವಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸುವವರನ್ನು ಹಿಡಿದು ದಂಡ ವಿಧಿಸಲು ಪೊಲೀಸ್ ಇಲಾಖೆ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ಲಾರಿ, ಟ್ರಕ್, ಕಾರು, ಟೆಂಪೋ, ಟಾಟಾಏಸ್, ಆಟೋ ಸೇರಿ ಬೈಕ್ಗಳಿಗೆ ಅನೇಕ ಮಂದಿ ಎಲ್ಇಡಿ ಲೈಟ್ಗಳನ್ನು ಅಳವಡಿಸಿಕೊಂಡಿದ್ದು, ಪ್ರಖರ ಬೆಳಕು ಇನ್ನಿತರ ವಾಹನಗಳ ಚಾಲಕರ ಕಣ್ಣಿಗೆ ಕುಕ್ಕುವ ಜತೆಗೆ ಅಪಘಾತಕ್ಕೆ ಕಾರಣವಾಗಿರುವುದರಿಂದ ಕೇಂದ್ರ ಮೋಟಾರು ವಾಹನಗಳ ನಿಯಮದಡಿ ಅನುಮತಿ ನೀಡಿರುವ ದೀಪಗಳನ್ನು (ಹೆಡ್ಲೈಟ್) ಮಾತ್ರ ವಾಹನಗಳಿಗೆ ಅಳವಡಿಸಬೇಕು. ಎಲ್ಇಡಿ ರ್ನಿಬಂಧಿಸಿರುವ ಬಗ್ಗೆ ಪೊಲೀಸ್ ಇಲಾಖೆ ಈಗಾಗಲೇ ವ್ಯಾಪಕ ಪ್ರಚಾರ ನಡೆಸಿದ್ದು, ಜು.1ರಿಂದ ದಂಡ ಹೇರಿಕೆ ಪ್ರಕ್ರಿಯೆ ಆರಂಭವಾಗಿದೆ. ಆ ಪೈಕಿ ಜಿಲ್ಲೆಯಲ್ಲಿ ಕೆಜಿಎ್ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 105 ಹಾಗೂ ಕೋಲಾರ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಜು.7ರವರೆಗೆ 46 ಪ್ರಕರಣ ದಾಖಲಾಗಿದ್ದರೆ, ಕಳೆದ 4 ದಿನಗಳಲ್ಲಿ ಕೋಲಾರದಲ್ಲೇ ಒಟ್ಟು 500 ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ತಿಳಿಸಿದ್ದಾರೆ.
- ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ
ಪೊಲೀಸರು ಈಗಾಗಲೇ ವಾಹನಗಳ ತಪಾಸಣೆ ಕೈಗೊಂಡಿದ್ದು, ಎಲ್ಇಡಿ ಲೈಟ್ಗಳನ್ನು ಅಳವಡಿಸಿದ್ದರೆ ತೆರವುಗೊಳಿಸುತ್ತಿದ್ದಾರೆ. ನಿಯಮ ಉಲ್ಲಂಘಿಸಿ ಅಳವಡಿಸಿಕೊಂಡಿರುವುದು ಕಂಡು ಬಂದರೆ ದಂಡ ವಿಧಿಸುವ ಜತೆಗೆ ಐವಿಎಂ ಕಾಯ್ದೆ ಕಲಂ 177ರಡಿ ಪ್ರಕರಣ ದಾಖಲಿಸುತ್ತಿದ್ದಾರೆ.
- ಎಲ್ಇಡಿ ಅಪಘಾತಗಳಿಗೆ ಕಾರಣ..?
ಎಲ್ಇಡಿ ಲೈಟ್ಗಳ ಪ್ರಖರತೆ ಜಾಸ್ತಿ, ಅವು ದೀರ್ಘ ಬಾಳಿಕೆ ಜತೆಗೆ ಅಲ್ಪ ವಿದ್ಯುತ್ಶಕ್ತಿಯಿಂದಲೇ ತೀವ್ರ ಪ್ರಖರತೆಯ ಬೆಳಕನ್ನು ನೀಡುತ್ತವೆ. ಆದರೆ, ಕಣ್ಣು ಕುಕ್ಕುವ ಬೆಳಕೇ ಇತರ ವಾಹನ ಸವಾರರಿಗೆ ತೊಂದರೆಯಾಗುತ್ತದೆ. ಎದುರುಗಡೆಯಿಂದ ಬರುವ ವಾಹನಗಳ ಸವಾರರ ಕಣ್ಣು ಕುಕ್ಕುವುದರಿಂದ ಅಪಘಾತಗಳು ಸಂಭವಿಸಲು ಕಾರಣವಾಗುತ್ತದೆ. ಅಪಘಾತಗಳು ಮತ್ತು ಅದರಿಂದಾಗುವ ಸಾವು-&ನೋವುಗಳನ್ನು ತಪ್ಪಿಸಲು, ಕೇಂದ್ರ ಮೋಟಾರು ವಾಹನಗಳ ನಿಯಮಗಳಡಿ ಅನುಮತಿಸಲಾದ ಲೈಟ್ಗಳನ್ನು ಮಾತ್ರ ವಾಹನಗಳಲ್ಲಿ ಅಳವಡಿಸಲು ಪೊಲೀಸ್ ಇಲಾಖೆ ಅನುಮತಿ ನೀಡಿದೆ. - 31ಕ್ಕೆ ವರದಿ ನೀಡಲು ಸೂಚನೆ
ವಾಹನ ತಪಾಸಣೆ ನಡೆಸಿ ಎಲ್ಇಡಿ ಲೈಟ್ಗಳನ್ನು ಅಳವಡಿಸಿರುವ ವಾಹನ ಮಾಲೀಕರ ವಿರುದ್ಧ ಐಎಂವಿ ಕಾಯಿದೆಯ ಕಲಂ 177ಡಿ ಪ್ರಕರಣ ದಾಖಲಿಸಿ ಜು.31ರೊಳಗೆ ವರದಿ ನೀಡಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದಾರೆ.