ತೀವ್ರ ಕುಸಿತ ಕಂಡ ವಾಹನ ಮಾರಾಟ

ನವದೆಹಲಿ: ಭಾರತದ ಆಟೋಮೊಬೈಲ್ ಕ್ಷೇತ್ರ ಭಾರೀ ಕುಂಠಿತ ಕಂಡಿದ್ದು, ಕಳೆದ 9 ತಿಂಗಳಿನಿಂದ ಪ್ರಯಾಣಿಕರ ವಾಹನಗಳ ಮಾರಾಟದಲ್ಲಿ ಗಣನೀಯ ಇಳಿಕೆಯಾಗಿದೆ. ಕಳೆದ ವರ್ಷ ಜುಲೈನಲ್ಲಿ 2,90,931 ವಾಹನ ಮಾರಾಟವಾಗಿದ್ದು, ಪ್ರಸಕ್ತ ವರ್ಷ ಜುಲೈವರೆಗೆ 2,00,790 ವಾಹನಗಳು ಬಿಕರಿಯಾಗಿವೆ. ಅಂದರೆ, ಶೇಕಡಾ 30.98ರಷ್ಟು ಮಾರಾಟ ಇಳಿಕೆಯಾಗಿದೆ.

ಕಾರುಗಳ ಮಾರಾಟ ಕೂಡ ಶೇಕಡಾ 35.95ರಷ್ಟು ತಗ್ಗಿದ್ದು, ಕಳೆದ ವರ್ಷದಲ್ಲಿ1,91.979 ಕಾರ್ ಮಾರಾಟವಾಗಿದ್ದರೆ, ಜುಲೈವರೆಗೆ 1,22,956ಕ್ಕೆ ಕುಸಿದಿದೆ ಎಂದು ಭಾರತೀಯ ಆಟೋಮೊಬೈಲ್ ತಯಾರಕರ ಸೊಸೈಟಿ (ಎಸ್​ಐಎಎಂ) ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.

ಬೈಕ್ ಮಾರಾಟದ ಪ್ರಮಾಣವು ಕಳೆದ ತಿಂಗಳು 18.88ರಷ್ಟು ಇಳಿಕೆಯಾಗಿದ್ದು, 9,33,996ಗೆ ಬಂದು ತಲುಪಿದೆ. ಕಳೆದ ವರ್ಷ ಜುಲೈನಲ್ಲಿ ಇದರ ಪ್ರಮಾಣ 11,51,324ರಷ್ಟಿತ್ತು. ದ್ವಿಚಕ್ರ ವಾಹನ (ಮೊಪೇಡ್) ಮಾರಾಟ ಶೇಕಡಾ 16.82ರಷ್ಟು ಕುಂಠಿತ ಕಂಡಿದೆ. ಕಳೆದ ವರ್ಷ 18,17,406 ಇದ್ದ ವಾಹನ ಮಾರಾಟ, ಜುಲೈವರೆಗೆ 15,11,692ಕ್ಕೆ ತಲುಪಿದೆ. ಅಲ್ಲದೇ ವಾಣಿಜ್ಯ ವಾಹನಗಳ ಮಾರಾಟ 56,866ಕ್ಕೆ (ಶೇ. 25.71) ಇಳಿಕೆಯಾಗಿದೆ. ಕಳೆದ ವರ್ಷಕ್ಕೆ ಇದು 76,545ರಷ್ಟಿತ್ತು. ಜತೆಗೆ ಎಲ್ಲಾ ವಿಭಾಗದ ವಾಹನಗಳ ಮಾರಾಟದಲ್ಲಿ ಒಟ್ಟಾರೆ ಶೇ. 18.71 ಕುಸಿತವಾಗಿದ್ದು 18,25,148ಕ್ಕೆ ಇಳಿದಿದೆ. 2018ರಲ್ಲಿ ಇದು 22,45,23ರಷ್ಟಿತ್ತು ಎಂದು ಎಸ್​ಐಎಎಂ ತಿಳಿಸಿದೆ.

Leave a Reply

Your email address will not be published. Required fields are marked *