ಅಭಿಷೇಕಕ್ಕೆ ನೀರಿಲ್ಲ ಎಂದಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಿಬಿಎಂಪಿ ಮೇಯರ್‌ಗೆ ಪತ್ರ ಬರೆದಿದ್ದೇಕೆ?

ಬೆಂಗಳೂರು: ನೀರಿನ ಸಮಸ್ಯೆಗೆ ಸ್ಪಂದಿಸಿ ಕುಡಿಯುವ ನೀರನ್ನು ಪೂರೈಸಿದ್ದಕ್ಕೆ ಅಭಿನಂದನೆಗಳು. ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿದ್ದೀರಿ. ಇದಕ್ಕೆ ನಾನು ಆಭಾರಿಯಾಗಿದ್ದೀನಿ. ಸಮಾಜ ಸೇವೆ ಮಾಡಿದ ನಿಮಗೆ ಮಂಜುನಾಥ ಸ್ವಾಮಿ ಒಳ್ಳೆಯದನ್ನು ಮಾಡಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಬೆಂಗಳೂರು ಮೇಯರ್​ಗೆ ತಿಳಿಸಿದ್ದಾರೆ.

ನಿನ್ನೆ 75 ಸಾವಿರ ಲೀಟರ್ ನೀರನ್ನು ಬಿಬಿಎಂಪಿ ನೌಕರರ ಸಂಘ ಧರ್ಮಸ್ಥಳಕ್ಕೆ ಕಳುಹಿಸಿತ್ತು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ, ಆಯುಕ್ತ ಮಂಜುನಾಥ್‌ ಪ್ರಸಾದ್‌ಗೆ ಡಾ. ವೀರೇಂದ್ರ ಹೆಗ್ಗಡೆ ಅವರು ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾರೆ.

ಮಳೆಯಾಗದೆ ನೇತ್ರಾವತಿ ನದಿಯ ಉಪನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ನದಿಯಲ್ಲಿ ನೀರು ಗಣನೀಯವಾಗಿ ಕಡಿಮೆಯಾಗಿದೆ. ಮುಂದಿನ 15 ದಿನಗಳಲ್ಲಿ ಮಳೆ ಬರದಿದ್ದರೆ ಮಂಜುನಾಥ ಸ್ವಾಮಿಯ ಅಭಿಷೇಕಕ್ಕೂ ನೀರಿರುವುದಿಲ್ಲ. ಧರ್ಮಸ್ಥಳದಲ್ಲಿ ನೀರಿನ ಅಭಾವ ಎದುರಾಗಿರುವುದರಿಂದ ಭಕ್ತರು ಮತ್ತು ಪ್ರವಾಸಿಗರು ತಮ್ಮ ಪ್ರವಾಸವನ್ನು ಕೆಲವು ದಿನ ಮುಂದೂಡಿ ಸಹಕರಿಸಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಕಳವಳ ವ್ಯಕ್ತಪಡಿಸಿದ್ದರು. (ದಿಗ್ವಿಜಯ ನ್ಯೂಸ್)

4 Replies to “ಅಭಿಷೇಕಕ್ಕೆ ನೀರಿಲ್ಲ ಎಂದಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಬಿಬಿಎಂಪಿ ಮೇಯರ್‌ಗೆ ಪತ್ರ ಬರೆದಿದ್ದೇಕೆ?”

 1. ಈ ರಾಜಕಾರಣಿಗಳು ಶ್ರೀ ಮಂಜುನಾಥ ಸ್ವಾಮಿಯ ಮೇಲೆ ಆಣೆ ಪ್ರಮಾಣ ಮಾಡಿ ನೇತ್ರಾವತಿ ಬತ್ತಿ ಹೋಗುವ ಸ್ಥಿತಿಗೆ ತಂದಿಟ್ಟರು ಪ್ರತಿಯೊಬ್ಬ ರಾಜಕಾರಣಿಗೂ ಸ್ವ ಹಿತಾಸಕ್ತಿ ಹೆಚ್ಚಾಯಿತೇ ಹೊರತು ರಾಜ್ಯದ ಅಭಿವೃದ್ಧಿ ಬಗ್ಗೆ ತಲೆಕೆಡಿಸಿಕೊಳ್ಳುವ ರಾಜಕಾರಣಿಗಳು ಬೆರಳೆಣಿಕೆಯಷ್ಟು ಇಲ್ಲ ಅರಣ್ಯದಲ್ಲಿ ಎಷ್ಟು ಅಕ್ರಮ ಚಟುವಟಿಕೆ ನಡೆಯಲು ರಾಜಕಾರಣಿಗಳ ಆಶೀರ್ವಾದವೇ ಕಾರಣ ಆದ್ದರಿಂದ ಅರಣ್ಯ ನಾಶವಾಗುತ್ತಾ ಸರಿಯಾದ ವೇಳೆಗೆ ಮರೆಯಾಗುತ್ತಿಲ್ಲ ಆಗುತ್ತಿಲ್ಲ

  1. ಎಲ್ಲಾ ಕಡೆ ನೀರಿಗೆ ತೊಂದರೆ. ಸಮುದ್ರದ ನೀರನ್ನು ಶುದ್ಧ ಮಾಡಿ ಉಪಯೋಗಿಸುವ ದಿನ ದೂರವಿಲ್ಲ.

   1. The politicians and their brother bureaucrats would not leave even sea water. They find funds in that also. Citizens Beware.

 2. Utter nonsense from BBMP.
  Sri Keshtra have enough fund to buy water.
  What he means is to save water , save nature . What happens today is because of damaged made to nature .
  Sending water by wasting petrol is nonsense.
  Worst case they would procured water from near by place .

Leave a Reply

Your email address will not be published. Required fields are marked *