15 ದಿನಗಳಲ್ಲಿ ಮಳೆ ಬರದಿದ್ದರೆ ಮಂಜುನಾಥ ಸ್ವಾಮಿ ಅಭಿಷೇಕಕ್ಕೂ ನೀರಿಲ್ಲ: ವೀರೇಂದ್ರ ಹೆಗ್ಗಡೆ

ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನೇತ್ರಾವತಿ ನದಿಯಲ್ಲಿ ನೀರಿಲ್ಲ. ಮುಂದಿನ 15 ದಿನಗಳಲ್ಲಿ ಮಳೆ ಬರದಿದ್ದರೆ ಮಂಜುನಾಥ ಸ್ವಾಮಿಯ ಅಭಿಷೇಕಕ್ಕೂ ನೀರಿಲ್ಲ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಕಳವಳ ವ್ಯಕ್ತಪಡಿಸಿದ್ದಾರೆ.

ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಿಂಡಿ ಅಣೆಕಟ್ಟೆಯಲ್ಲಿ ಸ್ವಲ್ಪ ನೀರಿದೆ. ತೀರ್ಥದ ಗುಂಡಿಯಲ್ಲಿ ಅಲ್ಪ ಪ್ರಮಾಣದ ನೀರಿದೆ. ತೀರ್ಥದ ಗುಂಡಿಯಲ್ಲಿ ನಾಲ್ಕು ಅಡಿ ಕಡಿಮೆ ಆಗಿದೆ. ಪ್ರಸ್ತುತ ಸ್ವಾಮಿಯ ಅಭಿಷೇಕಕ್ಕೆ ನೀರಿನ ತೊಂದರೆ ಇಲ್ಲ. ಆದರೆ, ಮುಂದಿನ 15 ದಿನಗಳಲ್ಲಿ ಮಳೆ ಬರದಿದ್ದರೆ ಮಂಜುನಾಥ ಸ್ವಾಮಿಯ ಅಭಿಷೇಕಕ್ಕೂ ನೀರಿಲ್ಲದಂತಾಗಬಹುದು. ಈ ಹಿಂದೆಯೂ ಹೀಗೆ ಆಗಿತ್ತು. ಆದರೆ, ಇಷ್ಟು ತೀವ್ರ ಪ್ರಮಾಣದಲ್ಲಿ ಬರ ಕಾಡಿರಲಿಲ್ಲ ಎಂದು ಧರ್ಮಾಧಿಕಾರಿಗಳು ತಿಳಿಸಿದ್ದಾರೆ.

ನೇತ್ರಾವತಿ ನದಿಯ ಉಪನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಕಾರಣ ನದಿಯಲ್ಲಿ ನೀರು ಗಣನೀಯವಾಗಿ ಕಡಿಮೆಯಾಗಿದೆ. ಕಾಡು ಉಳಿಸದೇ ಇರುವ ಕಾರಣ ಈ ಸಮಸ್ಯೆ ಎದುರಾಗಿದೆ. ಸರ್ಕಾರ ಮತ್ತು ಜಲತಜ್ಞರು ಈ ಬಗ್ಗೆ ಯೋಜನೆ ರೂಪಿಸಬೇಕು. ಮುಂದಿನ 15-20 ವರ್ಷಗಳ ಭವಿಷ್ಯದ ಬಗ್ಗೆ ಯೋಚಿಸಬೇಕು. ಪಶ್ಚಿಮ ಘಟ್ಟದಲ್ಲಿ ಅರಣ್ಯನಾಶದಿಂದ ನೀರಿನ ಸಮಸ್ಯೆ ತೀವ್ರವಾಗುತ್ತಿದೆ ಎಂದು ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.

ಧರ್ಮಸ್ಥಳದಲ್ಲಿ ನೀರಿನ ಅಭಾವ ಎದುರಾಗಿರುವುದರಿಂದ ಭಕ್ತಾದಿಗಳು ತಮ್ಮ ಪ್ರವಾಸವನ್ನು ಕೆಲವು ದಿನ ಮುಂದೂಡಿ ಸಹಕರಿಸುವಂತೆ ವೀರೇಂದ್ರ ಹೆಗ್ಗಡೆಯವರು ನಿನ್ನೆ ಮನವಿ ಮಾಡಿದ್ದರು.

ಸದ್ಯ ಧರ್ಮಸ್ಥಳಕ್ಕೆ ಭಕ್ತರು ಹಾಗೂ ಪ್ರವಾಸಿಗರು ಬರಬೇಡಿ ಎಂದು ಧರ್ಮಾಧಿಕಾರಿ ಮನವಿ ಮಾಡಿದ್ದೇಕೆ?

2 Replies to “15 ದಿನಗಳಲ್ಲಿ ಮಳೆ ಬರದಿದ್ದರೆ ಮಂಜುನಾಥ ಸ್ವಾಮಿ ಅಭಿಷೇಕಕ್ಕೂ ನೀರಿಲ್ಲ: ವೀರೇಂದ್ರ ಹೆಗ್ಗಡೆ”

 1. I request everyone, whoever reading this news article, to plant trees as much as possible.
  Small steps leads to a bigger goal achievement.

  Just throw some seeds whenever you’re travelling.
  Example, If you eat a mango, just keep that seed with you and put it near by or wherever possible.

  I hope, everyone understands the need of it, if we and everybody together contribute then we all can save our nature, in return nature saves us.
  Without nature we human beings are nothing.
  So please… I request all once again for the same…
  Thank you..

  1. Unless people understand the importance of trees with respect to water, this cant be changed. There are only 2 options for humans to survive..
   1. Stop cutting trees to make your convenience. If trees are there then you will be alive.
   2. Grow plants where you can.

Leave a Reply

Your email address will not be published. Required fields are marked *