ವೀರಶೈವಾಗಮ

ವೀರಶೈವಾಗಮ

ಧೂಪಸಂಪಾದನಂ ವಕ್ಷ್ಯೇ ಶೃಣುಷ್ಟಾವಹಿತಃ ಪುನಃ | ಕರ್ಪರಾಗರುತಕ್ಕೋಲಜಾತೀಫಲಲವಂಗಕಮ್ ||ಜಟಾಮಾಂಸೀ ಚ ಸಿಂಹೀ ಚ ಮುಸ್ತಾ ಚಂದನಮೇವ ಚ | ಘೃತಮಿಶ್ರಮಿದಂ ಪೋ›ಕ್ತಂ ದಶಾಂಗಂ ಸುಮನೋಹರಮ್ ||

ಇಲ್ಲಿ ಶಿವನು ರುದ್ರನಿಗೆ ಪೂಜೆಗಾಗಿ ಧೂಪವನ್ನು ಸಿದ್ಧಪಡಿಸುವ ಕ್ರಮವನ್ನು ಹೇಳುವುದಾಗಿ ಧೂಪದ ಬೇರೆ ಬೇರೆ ಪ್ರಕಾರ ಮತ್ತು ಅವುಗಳ ಸ್ವರೂಪವನ್ನು ಪ್ರತಿಪಾದಿಸಲು ಪ್ರಾರಂಭಿಸುತ್ತಾನೆ. ವಿಭಿನ್ನ ಸುಗಂಧ ದ್ರವ್ಯಗಳನ್ನು ಕೆಂಡಕ್ಕೆ ಹಾಕಿದಾಗ ಅದರಿಂದ ಹೊರಬರುವ ಸುಗಂಧಯುಕ್ತವಾದ ಮತ್ತು ಆಹ್ಲಾದಕರವಾದ ಹೊಗೆಯನ್ನು ಧೂಪವೆಂದು ಕರೆಯಲಾಗುತ್ತದೆ. ವಿಭಿನ್ನ ಪ್ರಕಾರದ ಸುಗಂಧ ಪದಾರ್ಥಗಳಿಂದ ವಿಭಿನ್ನ ಪ್ರಮಾಣದಲ್ಲಿ ಕೂಡಿದ ಒಂದೊಂದು ಪದಾರ್ಥಕ್ಕೆ ವಿಭಿನ್ನವಾದ ಒಂದೊಂದು ಹೆಸರನ್ನು ನೀಡಲಾಗುತ್ತದೆ. ಅದಕ್ಕೆ ಅನುಗುಣವಾಗಿ ಕರ್ಪರ, ಅಗರು, ತಕ್ಕೋಲ, ಜಾತೀಫಲ (ಜಾಜಿಫಲ), ಲವಂಗ, ಜಟಾಮಾಂಸೀ, ಸಿಂಹೀ (ಬದನೆ), ಮುಸ್ತಾ (ಕೊನ್ನಾರಿಯ ಭೇದ), ಚಂದನ ಮತ್ತು ತುಪ್ಪ – ಇವುಗಳ ಮಿಶ್ರಣದಿಂದ ತಯಾರಿಸಿದ ಸುಗಂಧಭರಿತ ಧೂಪವನ್ನು ’ದಶಾಂಗ ಧೂಪ’ ಎಂದು ಕರೆಯಲಾಗುತ್ರದೆ.

| ಮುಕುಟಾಗಮ (4. 29-30)/ ವ್ಯಾಖ್ಯಾನ: ಶ್ರೀಶೈಲ ಜಗದ್ಗುರು

ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು.

Share This Article

ರಾತ್ರಿ 9 ಗಂಟೆ ಮೇಲೆ ಊಟ ಮಾಡೋದ್ರಿಂದ ಅನಾನುಕೂಲಗಳೇ ಅಧಿಕ: ಊಟಕ್ಕೆ ಸರಿಯಾದ ಸಮಯ ಯಾವುದು? | Eating

Eating: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಡವಾಗಿ ಭೋಜನ ಮಾಡುತ್ತಿದ್ದಾರೆ, ಆದರೆ ವೈದ್ಯಕೀಯ ತಜ್ಞರು ಇದು…

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…