ವೀರಶೈವ ಲಿಂಗಾಯತ ಮಠಗಳ ಕಾರ್ಯ ಅನನ್ಯ

Veerashaiva, Lingayat, Ujjain Sri, Kotya, Shilamantapa, Thikota,

ತಿಕೋಟಾ: ಯುಗ ಯುಗಳಿಂದ ಮಠಗಳು ಸಮಾಜದ ಅಂಕು ಡೊಂಕು ತಿದ್ದುವ ಹಾಗೂ ಸಮಾಜದಲ್ಲಿ ಶಾಂತಿ ಸ್ಥಾಪಿಸುವ ಕಾರ್ಯವನ್ನು ಮಾಡುತ್ತಿರುವ ವೀರಶೈವ ಲಿಂಗಾಯತ ಮಠಗಳ ಕಾರ್ಯ ಅನನ್ಯವಾಗಿದೆ ಎಂದು ಉಜ್ಜಯಿನಿ ಪೀಠದ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು.

ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಬಾಳಯ್ಯ ಶಿವಾಚಾರ್ಯರ ಸಂಸ್ಥಾನ ಹಿರೇಮಠದ ಶಿಲಾಮಂಟಪ ಹಾಗೂ ಡಾ.ಮಹಾಂತ ಶಿವಾಚಾರ್ಯ ಹಿರೇಮಠ ಅವರ ಗದ್ದುಗೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸೋಮವಾರ ಅವರು ಆಶೀರ್ವಚನ ನೀಡಿದರು.

ಸಮಾಜಕ್ಕೆ ಮಾರ್ಗದರ್ಶನ ಮಾಡಲು ಮಠಗಳು ಅವಶ್ಯ. ಪ್ರಸಾದ, ಅಕ್ಷರ, ಅಶ್ರಯ, ಅಧ್ಯಾತ್ಮ, ಅರಿವು ಈ ಪಂಚ ಕಾರ್ಯ ಮಾಡುತ್ತಿರುವ ಮಠಗಳ ಕೊಡುಗೆ ಸದಾ ಸ್ಮರಣೀಯವಾಗಿದೆ. ಪ್ರತಿಯೊಂದು ವೀರಶೈವ ಲಿಂಗಾಯತ ಮಠಗಳು ಬಡವರು,ದೀನದಲಿತರು, ಅನಾಥರಿಗೆ ಶಿಕ್ಷಣ, ಅಧ್ಯಾತ್ಮದ ಅರಿವು ನೀಡಿ ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಕಾಶಿಪೀಠದ ಜಗದ್ಗುರು ಜ್ಞಾನ ಸಿಂಹಾಸನಾಧೀಶ್ವರ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ಪೀಠಾಧೀಶ್ವರ ಹಾಗೂ ಶಾಖಾ ಮಠಗಳ ಉದ್ದೇಶ ಧರ್ಮವನ್ನು ಉಳಿಸಿ ಬೆಳೆಸುವುದಾಗಿದೆ. ಸನಾತನ ಧರ್ಮದ ಅನೇಕ ಮಠಗಳು ತಮ್ಮ ತಮ್ಮ ಕಾರ್ಯಗಳನ್ನು ಮಾಡುತ್ತಿವೆ. ಭಕ್ತರು ಮಠದ ಆಗುಹೋಗುಗಳನ್ನು ನೋಡಿಕೊಳ್ಳಬೇಕು ಎಂದರು.

ಶ್ರೀಶೈಲ ಪೀಠದ ಜಗದ್ಗುರು ಪಂಡಿತಾರಾಧ್ಯ ಡಾ.ಚನ್ನಸಿದ್ದರಾಮ ಶಿವಾಚಾರ್ಯರು ಮಾತನಾಡಿ, ದೇಶದಲ್ಲಿ ಚಿಕ್ಕ ಚಿಕ್ಕ ಗ್ರಾಮಗಳಲ್ಲಿ ಕೂಡ ಮಠಗಳು, ದೇವಸ್ಥಾನಗಳು ಭಕ್ತರ ಸಂಕಷ್ಟಕ್ಕೆ ಸ್ಪಂದಿಸುತ್ತಿವೆ. ಕೋಟ್ಯಾಳ ಹಿರೇಮಠದ ಭವ್ಯ ಮಂಟಪ ನಿರ್ಮಾಣ ನೋಡುಗರಿಗೆ ಕಣ್ಮಣಿಯಾಗಿ ಉಳಿದಿದೆ ಎಂದರು.

ಮಡಿಕೇರಿ (ಕೊಡಗು) ಮುದ್ದಿನಕಟ್ಟಿಮಠದ ಸಿದ್ಧಲಿಂಗ ಸ್ವಾಮಿಗಳು, ತಡವಲಗಾ ಹಿರೇಮಠ ರಾಚೋಟೇಶ್ವರ ಶಿವಾಚಾರ್ಯರು, ಕೋಟ್ಯಾಳ ಹಿರೇಮಠದ ಮಹೇಶ ಹಿರೇಮಠ ನೇತೃತ್ವ ವಹಿಸಿದ್ದರು.

ತಿಕೋಟಾ ಹಿರೇಮಠದ ಶಿವಬಸವ ಶಿವಾಚಾರ್ಯರು, ಅಪಜಲಪುರ ಹಿರೇಮಠದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಹುಲ್ಯಾಳ ಹಿರೇಮಠದ ಡಾ.ರೇಣುಕ ಸದಾಶಿವ ಶಿವಚಾರ್ಯರು, ಹತ್ತಳಿ ಹಿರೇಮಠದ ಗುರುಪಾದೇಶ್ವರ ಶಿವಾಚಾರ್ಯರು, ಯಂಕಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು, ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರು, ಆಲಮೇಲದ ಗುರು ಸಂಸ್ಥಾನ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಮಾಂಜರಿ ಕಾಡದೇವರಮಠ ಗುರುಶಾಂತಲಿಂಗ ಶಿವಾಚಾರ್ಯರು, ಅಕ್ಕಿ ಆಲೂರ ಮುತ್ತಿನಕಂತಿಮಠ ಚಂದ್ರಶೇಖರ ಶಿವಾಚಾರ್ಯರು, ಗುಡಾಪುರ ಹಿರೇಮಠದ ಗುರುಪಾದೇಶ್ವರ ಶಿವಾಚಾರ್ಯರು, ಕಲಕೇರಿ ಗದುಗೆಮಠ ಗುರು ಮಡಿವಾಳೇಶ್ವರ ಶಿವಾಚಾರ್ಯರು, ತುರವಿ ಹಿರೇಮಠ ಅಭಿನವ ಮುರುಘೇಂದ್ರ ದೇವರು, ದಾಶ್ಯಾಳ ಹಿರೇಮಠದ ಶಂಕ್ರಯ್ಯ ಶಾಸ್ತ್ರಿಗಳು, ಕೋಟ್ಯಾಳದ ಶಿವಾನಂದ ಹಿರೇಮಠ, ವಿಶ್ವನಾಥ ಹಿರೇಮಠ, ಗೋಶಯ್ಯ ಹಿರೇಮಠ, ಕಾಶಿನಾಥ ಪಾಟೀಲ, ಭೀಮನಗೌಡ ಪಾಟೀಲ, ಕೃಷ್ಣಾಜಿ ಕುಲಕರ್ಣಿ, ವಿಶ್ವನಾಥ ಅಳ್ಳೊಳಿ, ಅಶೋಕ ಗದ್ಯಾಳ, ಪರಗೂಂಡ ಪಾಟೀಲ, ಸರದಾರ ಜಂಬಗಿ, ಶಿವಾನಂದ ಇಂಗಳಿ, ಅಪ್ಪಾಸಾಬ ಕಾಖಂಡಕಿ ಇತರರಿದ್ದರು.

Share This Article

ಕೂಡಲೇ ಇವುಗಳನ್ನು ತಿನ್ನುವುದನ್ನು ನಿಲ್ಲಿಸದಿದ್ರೆ ನಿಮ್ಮ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗೋದು ಗ್ಯಾರಂಟಿ! Sperm Count

Sperm Count : ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದು…

ಕ್ಯಾರೆಟ್​ ಬರ್ಫಿಗೆ ಫಿದಾ ಆಗದವರೇ ಇಲ್ಲ; ಮನೆಯಲ್ಲೇ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ | Recipe

ಕ್ಯಾರೆಟ್​​ ಹಲ್ವಾ ಎಲ್ಲರಿಗೂ ಇಷ್ಟ, ಅದಕ್ಕಾಗಿಯೇ ಕ್ಯಾರೆಟ್ ಹಲ್ವಾವನ್ನು ಎಲ್ಲಾ ಋತುವಿನಲ್ಲೂ ಹಲವಾರು ಬಾರಿ ತಯಾರಿಸಿ…

ಆರೋಗ್ಯಕರ ಹೃದಯಕ್ಕೆ ಮೊಟ್ಟೆ ಎಷ್ಟು ಸಹಕಾರಿ ಗೊತ್ತಾ?; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ವಿಟಮಿನ್ ಬಿ, ಫೋಲೇಟ್, ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು (ಎ, ಡಿ,…