ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‌ಕ್ಲೇವ್ ಜ.17 ರಂದು ಬೆಳಗ್ಗೆ 10.30ಕ್ಕೆ ಚಾಲನೆ

blank

ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (ಐಎಲ್‌ವೈಎಫ್)ಯಿಂದ ನಗರದಲ್ಲಿ ಮೂರು ದಿನ ಆಯೋಜಿಸಿರುವ ‘ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‌ಕ್ಲೇವ್-2025’ಕ್ಕೆ ಜ.17 ರಂದು ವಿಧ್ಯುಕ್ತ ಚಾಲನೆ ದೊರೆಯಲಿದೆ.

blank

ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗದಲ್ಲಿ ಆಯೋಜಿಸಿರುವ ಈ ಸಮಾವೇಶವು ವೀರಶೈವ ಲಿಂಗಾಯತ ಸಮುದಾಯದ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಗೆ ತರುವ ಮತ್ತು ಆರ್ಥಿಕ, ಕೈಗಾರಿಕೆ, ವ್ಯಾಪಾರ ಚಟುವಟಿಕೆಗಳನ್ನು ಉತ್ತಮಗೊಳಿಸುವ ಉದ್ದೇಶ ಹೊಂದಿದೆ.

ಸಮಾವೇಶಕ್ಕಾಗಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಳಿಗೆಗಳ ನಿರ್ಮಾಣ, ವೇದಿಕೆ, ಪ್ರವೇಶದ್ವಾರ ನಿರ್ಮಾಣ ಸೇರಿದಂತೆ ಎಲ್ಲ ಕೆಲಸವೂ ಪೂರ್ಣಗೊಂಡಿದೆ.

ಜ.17 ರಂದು ಬೆಳಗ್ಗೆ 10.30ಕ್ಕೆ ಶ್ರೀ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕಾನ್‌ಕ್ಲೇವ್‌ಗೆ ಚಾಲನೆ ನೀಡಲಿದ್ದಾರೆ. ಸಚಿವ ಎಂ.ಬಿ. ಪಾಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಎಚ್.ಎಂ. ಗಣೇಶ್, ಮೈಕ್ರೋ ಸ್ಮಾಲ್ ಮತ್ತು ಮೀಡಿಯಂ ಎಂಟರ್‌ಪ್ರೈಸಸ್‌ನ ನಿರ್ದೇಶಕ ನಿತೇಶ್ ಪಾಟೀಲ್, ರಾಷ್ಟ್ರೀಯ ಹಸಿರು ಪ್ರಾಧಿಕಾರದ ಅಧ್ಯಕ್ಷ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ, ಫೆಡರೇಷನ್ ಆಫ್ ಇಂಡಸ್ಟ್ರಿಸ್ ಆಫ್ ಇಂಡಿಯಾದ ಅಧ್ಯಕ್ಷ ಬಾಲಚಂದ್ರರಾವ್‌ರಾಣೆ, ಆದರ್ಶ್ ಗ್ರೂಪ್‌ನ ಸಂಸ್ಥಾಪಕ ಬಿ.ಎಂ.ವಿಜಯಶಂಕರ್, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಭಾಗವಹಿಸಲಿದ್ದಾರೆ.

ಉದ್ಘಾಟನಾ ಸಮಾರಂಭದ ನಂತರ ಮಧ್ಯಾಹ್ನ 2.30ಕ್ಕೆ ಆಯೋಜಿಸಿರುವ ವಿಚಾರಗೋಷ್ಠಿಯಲ್ಲಿ ಸಣ್ಣ ಕೈಗಾರಿಕೆ ಮತ್ತು ಕುಟುಂಬ ಉದ್ಯಮ ಕುರಿತು ಜ್ಯೋತಿ ಲ್ಯಾಬೊರೇಟರಿಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಉಲ್ಲಾಸ್ ಕಾಮತ್ ಮಾತನಾಡಲಿದ್ದಾರೆ. ಸಂಜೆ 6.30ಕ್ಕೆ ನಟ ಡಾಲಿ ಧನಂಜಯ ಸಾಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಜೆ 7ಕ್ಕೆ ಗಾಯಕ ವಾಸುಕಿ ವೈಭವ್ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ನೂರಕ್ಕೂ ಹೆಚ್ಚು ವೈದ್ಯರು ಭಾಗಿ

ಜ.18ರಂದು ಬೆ.10.30ರಿಂದ ಹೆಲ್ತ್ ಸಮಿಟ್-ವೈದ್ಯಕೀಯ ನಾಯಕತ್ವ ಕುರಿತು ವಿಚಾರಗೋಷ್ಠಿಯಲ್ಲಿ ನೂರಕ್ಕೂ ಹೆಚ್ಚು ವೈದ್ಯರು ಭಾಗವಹಿಸಲಿದ್ದಾರೆ. ಎಂಎಸ್ ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಅಧ್ಯಕ್ಷ ಡಾ.ನಾಗೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಜೆಎಸ್‌ಎಸ್ ವಿವಿ ಕುಲಪತಿ ಡಾ.ಬಸವನಗೌಡಪ್ಪ, ಉದ್ಯಮಿ ಡಾ.ವಿವೇಕ್ ಜವಳಿ, ಬೀದರ್ ಜಿ.ಪಂ. ಸಿಇಒ ಡಾ.ಗಿರೀಶ್ ದಿಲೀಪ್ ಬದೋಲೆ, ಕೆಪಿಎಸ್‌ಸಿ ಸದಸ್ಯ ಡಾ.ಎಚ್.ಎಸ್.ನರೇಂದ್ರ ಭಾಗವಹಿಸಲಿದ್ದಾರೆ. ಮಹಿಳಾ ಉದ್ಯಮಶೀಲತೆ ವಿಷಯದಲ್ಲಿ ಉದ್ಯಮಿ ವೈಖಾಲಿ ಹನುಮಂತ್, ವರ್ಷಾ ಶ್ರೀಕಂಠಸ್ವಾಮಿ, ತೀರ್ಥಸ್ವಾಮಿ ಭಾಗವಹಿಸಲಿದ್ದಾರೆ.

ಜ.19ರಂದು ಬೆಳಗ್ಗೆ 11ರಿಂದ ಎಫ್‌ಎಂಸಿಸಿ ಮತ್ತು ಎಸ್‌ಕೆಯುಗಳಲ್ಲಿ ಆಕರ್ಷಕ ವಿನ್ಯಾಸ ಮತ್ತು ವಿನೂತನ ಪ್ಯಾಕೇಜ್‌ಗಳ ಪ್ರಾಮುಖ್ಯತೆ ಕುರಿತು ಉದ್ಯಮಿಗಳಾದ ಅನಿತ್ ಸಿದ್ದೇಶ್ವರ, ಎಂ.ಎಸ್.ಮೋಹನ್, ಸುನೀಲ್ ನಗಾತನ್, ಕಲ್ಯಾಣ್ ಮುಖರ್ಜಿ ಮಾತನಾಡಲಿದ್ದಾರೆ. ಬಳಿಕ ಕಬ್ಬು ಉದ್ಯಮದಲ್ಲಿ ವಿನೂತನ ಅವಕಾಶಗಳು ಕುರಿತು ವಿಜಯ್ ಎಂ.ನಿರಾಣಿ, ಮುಂದಿನ ಪೀಳಿಗೆಯ ನಾಯಕರ ಸಬಲೀಕರಣ ಕುರಿತು ಡಿ.ಎಸ್.ಮಲ್ಲಿಕಾರ್ಜುನ, ಬಿ.ಶಿವಶಂಕರ್, ಡಾ.ಎಂ.ಎನ್.ಭೀಮೇಶ್ ಭಾಷಣ ಮಾಡಲಿದ್ದಾರೆ. ಸಂಜೆ 4.30ಕ್ಕೆ ಆಯೋಜಿಸಿರುವ ಸಮಾರೋಪದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಈಶ್ವರ ಖಂಡ್ರೆ, ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ವಿಜಯಾನಂದ ಕಾಶಪ್ಪನವರ್, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಉದ್ಯಮಿ ಜಯಂತ್ ಹುಂಬರವಾಡಿ, ಎಂಎಲ್‌ಸಿ ಕೆ.ಎಸ್.ನವೀನ್ ಭಾಗವಹಿಸಲಿದ್ದಾರೆ.

ಕ್ರಾಂತಿಕಾರಿ ಭವಿಷ್ಯದ ಬಗ್ಗೆ ಭಾಷಣ

ಜ.18ರಂದು ಸಂಜೆ 4 ಗಂಟೆಗೆ ‘ತಮ್ಮ ದೃಷ್ಟಿಯಲ್ಲಿ ಕ್ರಾಂತಿಕಾರಿ ಭವಿಷ್ಯ’ ಕುರಿತು ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ ಅವರು ಮಾತನಾಡಲಿದ್ದಾರೆ.

150ಕ್ಕೂ ಹೆಚ್ಚು ಮಳಿಗೆ

150ಕ್ಕೂ ಹೆಚ್ಚು ಮಳಿಗೆಗಳಲ್ಲಿ ಸಾರಿಗೆ, ಸಣ್ಣ, ಗುಡಿ ಕೈಗಾರಿಕೆ, ರಿಯಲ್ ಎಸ್ಟೆಲ್, ಕಟ್ಟಡ, ಬಂಡವಾಳ ಹೂಡಿಕೆ, ಆಹಾರ ಮಳಿಗೆ ಮೊದಲಾದ ಮಾಹಿತಿ ದೊರೆಯಲಿದೆ.
ರಾಜ್ಯ ಅಲ್ಲದೇ ವಿವಿಧ ರಾಜ್ಯಗಳಿಂದ ಆಗಮಿಸುವ ತಜ್ಞರು, ನುರಿತ ಉದ್ಯಮಿಗಳು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಮೂರು ದಿನಗಳ ಈ ಕಾನ್‌ಕ್ಲೇವ್‌ನಲ್ಲಿ 30 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆ ಇದೆ. ಈ ಸಮಾವೇಶವು ಮುಖ್ಯವಾಗಿ ಮಹಿಳಾ ಉದ್ಯಮಶೀಲತೆ, ಸಣ್ಣ ಹಾಗೂ ಗುಡಿ (ಮೈಕ್ರೋ ಎಂಟರ್‌ಪ್ರೈಸಸ್) ಕೈಗಾರಿಕೆ ಮತ್ತು ಮೈಸೂರಿನ ಸಾಂಸ್ಕೃತಿಯ ನೆಲೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ.

ರಾಜ್ಯ ಸರ್ಕಾರ ಕಲ್ಪಿಸಿರುವ ಕ್ಲಸ್ಟರ್ ಆಧಾರಿತ ವಿಧಾನವನ್ನು ಕೈಗಾರಿಕೋದ್ಯಮಿಗಳು, ಉದ್ಯಮಿಗಳು ಹಾಗೂ ಕೃಷಿ ಸಮುದಾಯಗಳ ಪೈಕಿ ಪ್ರಚಲಿತಗೊಳಿಸುವುದು, ಸ್ಟಾರ್ಟಪ್ ಬಲಪಡಿಸುವಿಕೆ, ಜಿಲ್ಲಾ ಮಟ್ಟದಲ್ಲಿ ಮಹಿಳಾ ಉದ್ಯಮಶೀಲತೆ ಹಾಗೂ ಯುವ ಉದ್ಯಮಶೀಲತೆ ಹೆಚ್ಚಿಸುವ ನಿಟ್ಟಿನಲ್ಲಿ ಮಾರ್ಗದರ್ಶನ, ವಿವಿಧ ಉತ್ಪನ್ನಗಳು ಹಾಗೂ ಸೇವೆಗಳನ್ನು ಮಳಿಗೆಗಳಲ್ಲಿ ಪ್ರದರ್ಶಿಸುವ ಮೂಲಕ ಹಾಗೂ ವಿವಿಧ ಕಾರ್ಯಕ್ರಮಗಳ ಮೂಲಕ ಮೈಸೂರಿನ ಸಾಮರ್ಥ್ಯವನ್ನು ಪ್ರದರ್ಶಿಸುವುದು, ಅನುಭವಿ ಉದ್ಯಮಿಗಳು, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಉದ್ಯಮಿಗಳು, ಅಧಿಕಾರಿಗಳು ಮತ್ತಿತತರನ್ನು ಒಳಗೊಂಡ ಉಪಯುಕ್ತ ಚರ್ಚೆಗಳು, ವೀರಶೈವ ಲಿಂಗಾಯತ ಸಮುದಾಯದ ಶಕ್ತಿ ಹಾಗೂ ಮೈಸೂರಿನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುವುದು, ಜಗತ್ತಿನಾದ್ಯಂತ ಇರುವ ಇತರ ವೀರಶೈವ ಲಿಂಗಾಯತ ಸಂಘಗಳ ಮೂಲಕ ಜಾಗತಿಕ ಪ್ರೇಕ್ಷಕರನ್ನು ತಲುಪುವ ಉದ್ದೇಶ ಹೊಂದಲಾಗಿದೆ.

 

ಸಮಾವೇಶವು ಮೈಸೂರಿನ ಆರ್ಥಿಕ ಬೆಳವಣಿಕೆ, ಬ್ರಾೃಂಡ್ ಮೈಸೂರು ಮಾಡಲು ಸಹಕಾರಿಯಾಗಲಿದೆ. ಸಮುದಾಯದ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಗೆ ತರುವ ಮತ್ತು ಆರ್ಥಿಕ, ಕೈಗಾರಿಕೆ, ವ್ಯಾಪಾರ ಚಟುವಟಿಕೆಗಳನ್ನು ಉತ್ತಮಗೊಳಿಸುವ ಉದ್ದೇಶವನ್ನು ಹೊಂದಿದೆ. ದೇಶದ ವಿವಿಧ ಭಾಗಗಳಿಂದ ಬರುವ ಉದ್ಯಮಿಗಳು, ವೃತ್ತಿಪರರನ್ನು ಭೇಟಿ ಮಾಡಲು ಸಹಾಯವಾಗಲಿದೆ. ಅನೇಕ ಉದ್ಯಮಿಗಳು ಮತ್ತು ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅತ್ಯುತ್ತಮ ವೇದಿಕೆಯೂ ಇದಾಗಲಿದೆ.
ಬಿ.ಎಸ್.ಪ್ರಶಾಂತ್
ಅಧ್ಯಕ್ಷ, ಐಲೈಫ್ ಗ್ಲೋಬಲ್ ಬಿಜಿನೆಸ್ ಕಾನ್‌ಕ್ಲೇವ್-2025

 

Share This Article
blank

ಮನೆಯಲ್ಲಿರುವ ಹಲ್ಲಿಗಳನ್ನು ಓಡಿಸಲು ಇಲ್ಲಿದೆ ಸುಲಭ ಮಾರ್ಗ.. ಒಮ್ಮೆ ಟ್ರೈ ಮಾಡಿ | Lizards

Lizards: ಹಲ್ಲಿಗಳು ಹೆಚ್ಚಾಗಿ ಮನೆಯ ಗೋಡೆಗಳ ಮೇಲೆ ಮತ್ತು ಅಡುಗೆಮನೆಯಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹಲ್ಲಿಗಳ ಬಗ್ಗೆ…

ಹನಿ-ಹನಿ ಮೂತ್ರ ಬರುತ್ತಿದ್ರೆ ಈ ಅಂಗಕ್ಕೆ ಹಾನಿಯಾಗಿದೆ ಎಂದರ್ಥ!; ಅನಿಯಂತ್ರಿತ ಮೂತ್ರದ ಸಮಸ್ಯೆಗೆ ಕಾರಣ ಏನು? | Urinary

Urinary : ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಮೂತ್ರ ಸಂಬಂಧಿತ ಸಮಸ್ಯೆಗಳು ಭಾಧಿಸುತ್ತವೆ. ಅನೇಕ ಜನರಿಗೆ ಮೂತ್ರ…

blank