ಕವಿತಾಳ: ಪಟ್ಟಣದ ವೀರಶೈವ ಲಿಂಗಾಯತ ಸಮಾಜಕ್ಕೆ ಹೆಚ್ಚುವರಿ ರುದ್ರಭೂಮಿ ನೀಡಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಮಂಜುನಾಥ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಹೆಚ್ಚಿನ ಜನಸಂಖ್ಯೆ ಹೊಂದಿದ ಸಮಾಜಕ್ಕೆ 10 ಗುಂಟೆ ರುದ್ರಭೂಮಿ ಇದೆ. ವೀರಶೈವ ಸಮಾಜ 6 ಸಾವಿರ ಜನ ಸಂಖ್ಯೆಗಿಂತ ಹೆಚ್ಚು ಇದೆ. ಸಮಾಜದವರು ನಿಧನರಾದಲ್ಲಿ ಅಂತ್ಯಕ್ರಿಯೆಮಾಡಲು ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಚಿವ ಎನ್‌ಎಸ್. ಬೋಸರಾಜು ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.