ಟಿಕೆಟ್​ಗಾಗಿ ನಾನು ಭಿಕ್ಷೆ ಬೇಡುವುದಿಲ್ಲ: ವೀರಪ್ಪ ಮೊಯ್ಲಿ

ದೇವನಹಳ್ಳಿ: ಲೋಕಸಭೆ ಚುನಾವಣೆಯಲ್ಲಿ ಟಿಕೆಟ್​ಗಾಗಿ ನಾನು ಭಿಕ್ಷೆ ಬೇಡುವುದಿಲ್ಲ ಎಂದು ಸಂಸದ ವೀರಪ್ಪ ಮೊಯ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದ ಟಿಕೆಟ್​ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಸಂಸದರಾಗಿ ನಮ್ಮ ಕರ್ತವ್ಯ ಏನು ಮಾಡಬೇಕೋ ಅದನ್ನು ಮಾಡಿದ್ದೇನೆ. ಟಿಕೆಟ್​ ಕೈ ತಪ್ಪುವುದು ಬಿಡುವುದು ಮುಂದಿನ ವಿಚಾರ. ದೇವೇಗೌಡರು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರವನ್ನು ಜೆಡಿಎಸ್​ಗೆ ಕೇಳಿರುವುದು ಊಹಾಪೋಹ ಎಂದು ತಿಳಿಸಿದರು.

ನಾನು ಟಿಕೆಟ್​ಗಾಗಿ ಯಾರನ್ನೂ ಭೇಟಿ ಮಾಡಲ್ಲ. ನಾನು ಯಾರ ಬಳಿಯೂ ಟಿಕೆಟ್​ಗಾಗಿ ಭಿಕ್ಷೆ ಬೇಡುವುದಿಲ್ಲ. ಜೆಡಿಎಸ್​ ಮತ್ತು ಕಾಂಗ್ರೆಸ್​ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುತ್ತೇವೆ. ನನ್ನ ಸೇವೆ ಅಗತ್ಯವಿದ್ದರೆ ನನ್ನನ್ನು ಮುಂದುವರಿಸುತ್ತಾರೆ ಎಂದು ಮೊಯ್ಲಿ ಸ್ಪಷ್ಟಪಡಿಸಿದ್ದಾರೆ.