ವೀರಭದ್ರೇಶ್ವರಸ್ವಾಮಿ ರಥೋತ್ಸವ

ಕಿಕ್ಕೇರಿ: ಹೋಬಳಿಯ ದೊಡ್ಡತರಹಳ್ಳಿ ಗ್ರಾಮದಲ್ಲಿ ವೀರಭದ್ರೇಶ್ವರಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ವೀರಭದ್ರೇಶ್ವರಸ್ವಾಮಿ ಹಾಗೂ ಗ್ರಾಮದೇವತೆ ಲಕ್ಷ್ಮೀದೇವಿ ಉತ್ಸವ ಮೂರ್ತಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ನಿವಾಸಿಗಳು ಮನೆ ಮುಂದೆ ರಂಗೋಲಿ ಬಿಡಿಸಿ, ತಳಿ ತೋರಣ ಕಟ್ಟಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದರು. ನಂತರ ದೇವರ ಮೆರವಣಿಗೆ ರಥಬೀದಿಗೆ ಸಾಗಿತು. ವೀರಭದ್ರೇಶ್ವರಸ್ವಾಮಿ ಅಡ್ಡೆದೇವರನ್ನು ರಥಕ್ಕೆ ಪ್ರತಿಷ್ಠಾಪಿಸಲಾಯಿತು.

ರಥದ ಕಳಶ, ಚಕ್ರಗಳಿಗೆ ಪೂಜೆ ಸಲ್ಲಿಸಲಾಯಿತು. ಅರ್ಚಕರು ದೇವರಿಗೆ ಅಗ್ರ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ವಿವಿಧ ವರ್ಣಗಳ ಬಾವುಟ, ಪರಿಮಳ, ಪುಷ್ಪಗಳ ಹಾರದಿಂದ ರಥವನ್ನು ಅಲಂಕರಿಸಲಾಗಿತ್ತು. ಭಕ್ತರು ವೀರಭದ್ರೇಶ್ವರ ಉಘೇ ಉಘೇ ಎಂದು ಹಣ್ಣು ಧವನ ಎಸೆದು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು. ರಂಗಕುಣಿತ, ಕೊಂಡೋತ್ಸವ ಮತ್ತಿತರ ಕಾರ್ಯಕ್ರಮಗಳು ನೆರವೇರಿದವು.

Leave a Reply

Your email address will not be published. Required fields are marked *