22.8 C
Bengaluru
Saturday, January 18, 2020

ಐತಿಹಾಸಿಕ ವೀರಭದ್ರ ಕ್ಷೇತ್ರದಲ್ಲಿ ಜಾತ್ರೋತ್ಸವ

Latest News

PHOTOS| ಉಡುಪಿಯಲ್ಲಿ ವೈಭವದ ಅದಮಾರು ಪರ್ಯಾಯ ಮೆರವಣಿಗೆ

ಉಡುಪಿ: ಪರ್ಯಾಯ ಶ್ರೀ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿಯವರ ಪ್ರಥಮ ಪರ್ಯಾಯದ ಮೆರವಣಿಗೆಗೆ ಕಲಾತಂಡಗಳು ಹೆಚ್ಚಿನ ಮೆರಗು ನೀಡಿತು. ಶನಿವಾರ ಮುಂಜಾನೆ 2.30ಕ್ಕೆ...

ಬೈಕ್​ ಅಪಘಾತದಲ್ಲಿ ಮೃತ ಪಟ್ಟ ಮಗನ ಅಂಗಾಂಗವನ್ನು ಹಾಸನದ ಹಿಮ್ಸ್​ಗೆ ದಾನ ಮಾಡಿದ ಪಾಲಕರು

ಹಾಸನ: ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗ ದಾನ ಮಾಡಿ ಪಾಲಕರು ಮಾನವೀಯತೆ ಮೆರೆದಿದ್ದಾರೆ. ಹಾಸನ ತಾಲೂಕಿನ ಮರ್ಕೂಲಿ ಗ್ರಾಮದ ರಂಗಸ್ವಾಮಿ ಮತ್ತು ಶಿವಮ್ಮ ದಂಪತಿಯ ಪುತ್ರ ಸಚಿನ್...

PHOTOS| ಅದಮಾರು ಪರ್ಯಾಯ ವೈಭವದ ಶೋಭಯಾತ್ರೆ | ಬೀದಿ, ಬೀದಿಗಳಲ್ಲಿ ಪರ್ಯಾಯ ಸಂಭ್ರಮ

ಉಡುಪಿ: ಕೃಷ್ಣನಗರಿ ಉಡುಪಿ ನಾಡಹಬ್ಬ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಅವರ ಪರ್ಯಾಯೋತ್ಸವದಲ್ಲಿ ಸಂಭ್ರಮದಿಂದ ಮಿಂದೆದ್ದಿತು. ಸಹಸ್ರಾರು ಮಂದಿ ಭಕ್ತರು...

‘ವಿಜಯವಾಣಿ’ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್: ಟ್ರಾಫಿಕ್ ಜಾಮ್​ ಸಂಚಾರ ನೀತಿಯ ಸಮಸ್ಯೆ!

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಡ್ರಗ್ಸ್ ನಿಯಂತ್ರಿಸದಿದ್ದರೆ ಶಿಕ್ಷಣ ಸಂಸ್ಥೆ ವಿರುದ್ಧ ಕ್ರಮ; ‘ವಿಜಯವಾಣಿ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬಡ್ಡಿ ಆಸೆಗೆ ವಂಚಕ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗದಂತೆ ಜನರಿಗೆ ಎಚ್ಚರಿಕೆ, ಹೆಣ್ಣಿನ ರಕ್ಷಣೆಗೆ ‘ವೀರವನಿತೆ’ ಪಡೆ, ಸರಗಳ್ಳತನ, ಮನೆಗಳ್ಳತನ, ದರೋಡೆಯಂಥ ಅಪರಾಧ ಕೃತ್ಯ...

ಪೌರಾಣಿಕ ಹಾಗೂ ಐತಿಹಾಸಿಕ ಮಹತ್ವವುಳ್ಳ ಉತ್ತರ ಕರ್ನಾಟಕದ ಪ್ರಮುಖ ತಾಣ ಶ್ರೀ ಗೊಡಚಿ ವೀರಭದ್ರೇಶ್ವರ ಕ್ಷೇತ್ರ. ಇದು 12ನೇ ಶತಮಾನಕ್ಕಿಂತಲೂ ಪೂರ್ವದ್ದು ಎಂಬ ಐತಿಹ್ಯವಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿರುವ ಗೊಡಚಿಕ್ಷೇತ್ರ ನಾಡಿನ ತುಂಬೆಲ್ಲ ಭಕ್ತಸಮೂಹವನ್ನು ಹೊಂದಿದೆ. ಹಿಂದೆ ಈ ಸ್ಥಳವು ಅಪಾರ ಗಿಡಗಂಟಿಗಳಿಂದ ಕೂಡಿತ್ತು. ಕೊಡಚಿಕಂಟೆಗಳಿಂದ ತುಂಬಿಕೊಂಡ ಕ್ಷೇತ್ರವು ನಂತರದಲ್ಲಿ ಕೊಡಚಿ ಕ್ಷೇತ್ರವಾಯಿತು. ಕೊಡಚಿಯೇ ಇಂದು ರೂಢಿಯಲ್ಲಿ ಗೊಡಚಿಯಾಗಿ ಮಾರ್ಪಟ್ಟಿತು. ಕೊಡಚಿಕಂಟಿಯಲ್ಲಿ ನೆಲೆಸಿದ್ದ ವೀರಭದ್ರದೇವರನ್ನು ಕೊಡಚಪ್ಪ ಎಂದು ಕರೆಯುತ್ತಿದ್ದ ಜನ ಇಂದು ಗೊಡಚಪ್ಪನೆಂದು ಕರೆಯುತ್ತಿದ್ದಾರೆ.

ವಿಜಯನಗರ ಹಾಗೂ ಚಾಲುಕ್ಯರ ವಾಸ್ತುಶಿಲ್ಪ ಮಾದರಿಯ ಈ ದೇವಸ್ಥಾನದ ಹೆಬ್ಬಾಗಿಲು ಚಾಲುಕ್ಯರ ವಾಸ್ತುಶಿಲ್ಪವನ್ನು ಹಾಗೂ ಗರ್ಭಗುಡಿಯು ವಿಜಯನಗರ ಕಲೆಯ ಶೈಲಿಯನ್ನು ನೆನಪಿಸುತ್ತದೆ. ಗರ್ಭಗುಡಿಯಲ್ಲಿ ನಾಲ್ಕು ಅಡಿ ಎತ್ತರದ ಬಹು ಆಕರ್ಷಕ ವೀರಭದ್ರದೇವರ ಮೂರ್ತಿಯಿದೆ. ವೀರಭದ್ರದೇವರ ಗುಡಿಯ ಹಿಂದೆ ಕುಳಿತ ಭಂಗಿಯ ಮುದಿ ವೀರಭದ್ರನ ಮೂರ್ತಿ ಇದೆ. ಮೂರ್ತಿಯ ತಲೆಯ ಮೇಲೆ ಕಿರೀಟ, ಎದೆಯ ಮೇಲೆ ರುದ್ರಾಕ್ಷಿಮಾಲೆ ಮತ್ತು ಗುಂಡ ಕರಡಿಗೆ, ಸೊಂಟದಲ್ಲಿ ಹೆಡೆಯುಳ್ಳ ಸರ್ಪ, ಮುಂಬದಿಯ ಬಲಗೈಯಲ್ಲಿ ನೆಟ್ಟಗಿದ್ದ ಖಡ್ಗ ಹಾಗೂ ಎಡಗೈಯಲ್ಲಿ ಢಾಲುಗಳಿವೆ. ಮಡಚಿದ ಎಡಗಾಲು ಚಾಚಿದ ಬಲಗಾಲು ಇದ್ದರೆ, ಎರಡು ಕಾಲುಗಳಿಗೆ ತೋಡೆ ಮತ್ತು ಆವಿಗೆ ಇವೆ.

ವೀರಭದ್ರನ ಗುಡಿಯ ಬೆನ್ನಗೋಡೆಯಲ್ಲಿ ಮತ್ತು ಮುದಿ ವೀರಭದ್ರನ ಎದುರಿಗೆ ಸಣ್ಣ ಮಂಟಪದಲ್ಲಿ ಚಿಕ್ಕ ಮೂರ್ತಿ ಇದೆ. ಅದರ ತಲೆಯ ಮೇಲೆ ಕಿರೀಟ ಇದೆ. ಎರಡೂ ಕೈಗಳು ಮೇಲೆತ್ತಿವೆ. ಇನ್ನೆರಡು ಕೈಗಳು ಅಕ್ಕಪಕ್ಕದ ಸಣ್ಣಮೂರ್ತಿಗಳ ತಲೆಯ ಮೇಲಿವೆ. ಈ ಮೂರ್ತಿಯನ್ನು ‘ಅನಕ್ಯಾ’ ಎಂದು ಕರೆಯುತ್ತಾರೆ. ಗುಗ್ಗಳ ಪೂಜೆಯ ಮುನ್ನ ಈ ಅನಕ್ಯಾನ ಪೂಜೆ ಮಾಡುವ ಪದ್ಧತಿ ಈಗಲೂ ಇದೆ. ಕಿಲ್ಲಾ ತೋರಗಲ್ಲದ ಶಿಂಧೆ ಮಹಾರಾಜರ ಮನೆತನದ ಪೂರ್ವಜರು ಈ ದೇವಸ್ಥಾನವನ್ನು ಶಿಂಧೆ ಕಟ್ಟಿಸಿದ್ದರು. 1937ರಲ್ಲಿ ದೇವಸ್ಥಾನದ ದ್ವಾರಬಾಗಿಲವನ್ನು ನರೋಜಿರಾವ ಶಿಂಧೆ ಮಹಾರಾಜರು ಕಟ್ಟಿಸಿದರು.

ವೀರಭದ್ರ ದೇವರ ಗುಡಿಯ ಎಡಗಡೆ ಭದ್ರಕಾಳಿಯ ಗುಡಿ ಇದೆ. ಇವೆರಡರ ಮಧ್ಯಭಾಗದ ಎದುರಿಗೆ ದೀಪಮಾಲಿ ಕಂಬ ಇದೆ. ಇದರಲ್ಲಿ 110 ಸಣ್ಣ ಪಣತಿಗಳ ಮತ್ತು ಕಂಬದ ಮೇಲೆ ದೊಡ್ಡ ಪಣತಿಗಳನ್ನು ಇಡಬಹುದು. ಮೂರು ಅಂತಸ್ತಿನ ಎತ್ತರದ ಈ ಕಂಬದ ಮೇಲೆ ತೆಂಗಿನಕಾಯಿ ಒಡೆಯುತ್ತಾರೆ. ಗ್ರಾಮದ ಹೂಗಾರರೇ ಎರಡನೇ ಅಂತಸ್ತಿನವರೆಗೆ ಮೇಲೇರಿ ಮೂರನೇ ಅಂತಸ್ತನ್ನು ಅಲ್ಲಾಡಿಸಿ ಕಾಯಿಯನ್ನು ಕೆಡವುತ್ತಾರೆ. ಆಗ ಮೇಲಿನಿಂದ ದೊಡ್ಡ ಹಾಗೂ ಸಣ್ಣ ಪಣತಿಗಳನ್ನು ಹಚ್ಚಿ ದೀಪಾವಳಿ ಪಾಡ್ಯ ದಿನದಂದು ಕಾರ್ತಿಕೋತ್ಸವವನ್ನು ಆಚರಿಸಿ ನಂತರ ಹೊಸ್ತಿಲ ಹುಣ್ಣಿಮೆಯಾದ ಮೂರು ದಿವಸಕ್ಕೆ ಇಳಿಸುತ್ತಾರೆ. ದೇವಸ್ಥಾನದ ಸುತ್ತಲೂ ವಸತಿಗೃಹಗಳು, ಕಲ್ಯಾಣಮಂಟಪಗಳು, ವ್ಯಾಪಾರಿ ಮಳಿಗೆಗಳು ಭಕ್ತರಿಗೆ ಅನುಕೂಲಕರವಾಗಿದ್ದು ದೇವಸ್ಥಾನದಲ್ಲಿ ನಿರಂತರ ಅನ್ನದಾಸೋಹ ವ್ಯವಸ್ಥೆ ಇದೆ.

ಪ್ರತಿವರ್ಷವೂ ಹೊಸ್ತಿಲು ಹುಣ್ಣಿಮೆಯಂದು ಮಹಾರಥೋತ್ಸವವು ಜರುಗುತ್ತದೆ. ಛಟ್ಟಿ ಅಮಾವಾಸ್ಯೆ ಆದ ಐದನೇ ದಿವಸ ವೀರಭದ್ರ ದೇವರ ಪಲ್ಲಕ್ಕಿಯು ಕಿಲ್ಲಾ ತೊರಗಲ್​ನ ಭೂತನಾಥ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ, ಮರುದಿನ ಪೂಜೆ ಪ್ರಸಾದ ಆದನಂತರ ಗೊಡಚಿಗೆ ಬರುತ್ತದೆ. ಹೀಗೆ ಜಾತ್ರಾ ಮಹೋತ್ಸವವು ಪ್ರಾರಂಭಗೊಳ್ಳುತ್ತದೆ. ನಂತರ ನಾಲ್ಕು ದಿನಗಳವರೆಗೆ ಊರಿನ ಭಕ್ತರೆಲ್ಲರೂ ಪಲ್ಲಕ್ಕಿ ಉತ್ಸವವನ್ನು ಆಚರಿಸುತ್ತಾರೆ. ನಂತರ ಐದು ದಿನಗಳವರೆಗೆ ಹುಚ್ಚಯ್ಯನೋತ್ಸವವನ್ನು ಆಚರಿಸುತ್ತಾರೆ. ಹೊಸ್ತಿಲ ಹುಣ್ಣಿಮೆಯಂದು (ಈ ಬಾರಿ ಡಿಸೆಂಬರ್ 12) ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಮಹಾರಥೋತ್ಸವವು ಜರುಗುತ್ತದೆ. ಜಾತ್ರೆಯ ಐದನೆಯ ದಿನವಾದ ಡಿಸೆಂಬರ್ 16ರಂದು ಸಂಜೆ ರಥದ ಕಳಸ ಇಳಿಸಿದ ನಂತರ ಲಕ್ಷ ದೀಪೋತ್ಸವ ಜರುಗಲಿದೆ. ಅಂದು ಸಾವಿರಾರು ಭಕ್ತರು ಆಗಮಿಸಿ ಹರಕೆಯ ದೀಪ ಹಚ್ಚುತ್ತಾರೆ. ವರ್ಷಕ್ಕೊಮ್ಮೆ ಜರುಗುವ ಈ ಜಾತ್ರೆಯಲ್ಲಿ ಬಳುವಳಿಕಾಯಿ ಹಾಗೂ ಬಾರೆಹಣ್ಣಿನ ಮಾರಾಟ ಜೋರಾಗಿ ನಡೆಯುತ್ತದೆ. ಆದ್ದರಿಂದ ಈ ಜಾತ್ರೆಯನ್ನು ಬಳವಳಿಕಾಯಿ ಜಾತ್ರೆ ಎಂದೇ ಕರೆಯುತ್ತಾರೆ. ಹದಿನೈದು ದಿನಗಳವರೆಗೆ ಪ್ರಖ್ಯಾತ ನಾಟಕ ಕಂಪನಿಗಳ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಅಲ್ಲದೆ ಅರಣ್ಯ, ಕೃಷಿ, ಆರೋಗ್ಯ ಇಲಾಖೆಗಳ ವಸ್ತುಪ್ರದರ್ಶನಗಳೂ ಜರುಗುತ್ತವೆ.

ತಲುಪುವ ಮಾರ್ಗ: ಬೆಳಗಾವಿಯಿಂದ 87 ಕಿ.ಮೀ. ಹಾಗೂ ರಾಮದುರ್ಗದಿಂದ 15 ಕಿ.ಮೀ. ಅಂತರದಲ್ಲಿ ಗೊಡಚಿ ಶ್ರೀ ವೀರಭದ್ರೇಶ್ವರ ಕ್ಷೇತ್ರ ಇರುತ್ತದೆ. ಎಲ್ಲ ಜಿಲ್ಲಾ ಕೇಂದ್ರಸ್ಥಳಗಳಿಂದ ಗೊಡಚಿಗೆ ಉತ್ತಮ ಬಸ್ ಸೌಲಭ್ಯವಿದೆ.

| ಸುರೇಶ್​ ಗುದಗನವರ, ರಾಮದುರ್ಗ

ವಿಡಿಯೋ ನ್ಯೂಸ್

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...

VIDEO| ಮಗಳ ಸಾವನ್ನು ಮುಂದಿಟ್ಟಕೊಂಡು ರಾಜಕೀಯ ಮಾಡುತ್ತಿದ್ದಾರೆ; ನಿರ್ಭಯಾ ಪ್ರಕರಣದ...

ನವದೆಹಲಿ: ನಿರ್ಭಯಾ ಪ್ರಕರಣ ಅಪರಾಧಿಗಳ ಗಲ್ಲು ಮುಂದೂಡುತ್ತಿರುವುದಕ್ಕೆ ಸಂತ್ರಸ್ಥೆ ತಾಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, ಈವರಗೆ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ. 2012ರಲ್ಲಿ ಪ್ರಕರಣ ನಡೆದಾಗ, ಅದನ್ನು ಖಂಡಿಸಿ...

VIDEO: ಪಕ್ಕೆಲುಬು ಆಯ್ತು…ಈಗ ಪುಳಿಯೊಗರೆ; ಮತ್ತೊಂದು ಸರ್ಕಾರಿ ಶಾಲೆಯಿಂದ ಹೊರಬಿತ್ತು...

ಸಕಲೇಶಪುರ: ಪಕ್ಕೆಲುಬು ಹೇಳಲು ಬಾರದ ವಿದ್ಯಾರ್ಥಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಶಿಕ್ಷಕನೋರ್ವ ವಿವಾದ ಸೃಷ್ಟಿಸಿದ್ದ. ಬಾಲಕ ಪಕ್ಕೆಲುಬು ಹೇಳಲಾಗದೆ ಕಷ್ಟಪಡುತ್ತಿದ್ದರೆ ಅದನ್ನು ವಿಡಿಯೋ ಮಾಡಿದ್ದ ಕುರುವತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ...

ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನಸೆಳೆದಿದ್ದ ಟೀಂ ಇಂಡಿಯಾ ಸೂಪರ್​ ಫ್ಯಾನ್​...

ನವದೆಹಲಿ: ಕಳೆದ ವಿಶ್ವಕಪ್​ನಲ್ಲಿ ಇಡೀ ಜಗತ್ತಿನ ಗಮನ ಸೆಳೆದಿದ್ದ ಟೀಂ ಇಂಡಿಯಾದ ಸೂಪರ್​ ಫ್ಯಾನ್​ ಚಾರುಲತಾ ಪಟೇಲ್​ (87) ನಿಧನರಾಗಿದ್ದಾರೆ. 2019ರಲ್ಲಿ ವಿಶ್ವಕಪ್​ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಚಾರುಲತಾ ಪಟೇಲ್​ ಕ್ಯಾಮರಾಕಣ್ಣಿಗೆ...

VIDEO| ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರೋ ಆಸ್ಟ್ರೇಲಿಯಾ ಮೇಲೆ ವರುಣನ ಕೃಪೆ:...

ಸಿಡ್ನಿ: ಭೀಕರ ಕಾಡ್ಗಿಚ್ಚಿಗೆ ತುತ್ತಾಗಿರುವ ಕಾಂಗರೂ ನಾಡು ಆಸ್ಟ್ರೇಲಿಯಾ ಮೇಲೆ ಇದೀಗ ವರುಣ ದೇವ ಕೃಪೆ ತೋರಿದ್ದಾನೆ. ಇದರ ನಡುವೆ 18 ತಿಂಗಳ ಮಗುವೊಂದು ಮೊದಲ ಬಾರಿಗೆ ಮಳೆ ಸುರಿಯುವುದನ್ನು...