ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠ ಆವರಣದಲ್ಲಿನ ಕ್ಷೇತ್ರನಾಥ ಶ್ರೀ ವೀರಭದ್ರ ದೇವರ ವಾರ್ಷಿಕ ಗುಗ್ಗಳೋತ್ಸವವು ನ. 15ರಂದು ಜರುಗಲಿದೆ.
ಅಂದು ಪ್ರಾತಃಕಾಲ ದೇವರಿಗೆ ಪಂಚಾಮೃತ ಸಹಿತ ಏಕಾದಶ ಮಹಾರುದ್ರಾಭಿಷೇಕ, ಅಷ್ಟೋತ್ತರ, ನೂರೊಂದು ಬಿಲ್ವಾರ್ಚನೆ, ವಿಶೇಷ ಪೂಜೆ ನೆರವೇರಿಸಲಾಗುವುದು. ಬೆಳಗ್ಗೆ 7 ಗಂಟೆಗೆ ಹೊರಡುವ ಗುಗ್ಗಳೋತ್ಸವಕ್ಕೆ ಪಂಚಗೃಹ ಹಿರೇಮಠದ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡುವರು. ಹಿರಿಯ ಪುರವಂತರುಗಳಾದ ಬಸವಂತಪ್ಪ ಕಂಬಾರ, ದೇವೇಂದ್ರಪ್ಪ ಪತ್ತಾರ, ಮಡಿವಾಳಪ್ಪ ಕುರುವಿನಕೊಪ್ಪ, ಶಿವಾನಂದ ಕುಂಬಾರ, ಸತೀಶ ಮುಗಳಿ, ಶರಣಪ್ಪ ಕಂಬಾರ, ರುದ್ರಪ್ಪ ಕಂಬಾರ, ಅರುಣ ಕಂಬಾರ ಅವರು ಗುಗ್ಗಳೋತ್ಸವದಲ್ಲಿ ಒಡಪುಗಳ ಭಕ್ತಿಸೇವೆ ಸಲ್ಲಿಸುವರು. ಗುಗ್ಗಳೋತ್ಸವವು ಅಮ್ಮಿನಬಾವಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮರಳಿ ಶ್ರೀ ವೀರಭದ್ರಸ್ವಾಮಿ ದೇವಾಲಯಕ್ಕೆ ಆಗಮಿಸಲಿದೆ.
ವಿವಾಹದ ಸಂದರ್ಭದಲ್ಲಿ ಗುಗ್ಗಳಕಾರ್ಯ ನೆರವೇರಿಸಲು ತೊಂದರೆ ಇರುವ ಬಡ ಕುಟುಂಬಗಳಿಗೆ ಸುಲಭವಾಗಿ ಗುಗ್ಗಳದ ಹರಕೆ ತೀರಿಸಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ವೀರಯ್ಯ ಹಿರೇಮಠ ಅಥವಾ ಸೋಮಲಿಂಗಶಾಸ್ತ್ರಿ ಗುಡ್ಡದಮಠ ಅವರನ್ನು ಸಂಪರ್ಕಿಸಿ ನ. 13ರೊಳಗೆ ಹೆಸರು ನೋಂದಾಯಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ವೀರಭದ್ರದೇವರ ಗುಗ್ಗಳೋತ್ಸವ 15ರಂದು
You Might Also Like
Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!
Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…
Health Tips: ನೆಲದ ಮೇಲೆ ಕುಳಿತುಕೊಂಡು ತಿನ್ನಲು ಸಾಧ್ಯವಿಲ್ಲವೇ? ಆದ್ರೆ ಈ ಅದ್ಭುತ ಪ್ರಯೋಜನಗಳೇನು ಗೊತ್ತಾ?
Health Tips: ನಮ್ಮ ಹಿರಿಯರು ಊಟ ಮಾಡುವಾಗ ನೆಲದ ಮೇಲೆ ಕಾಲು ಮಡಚಿ ಕೂರುತ್ತಿದ್ದರು. ಆಧುನಿಕ ಕಾಲದಲ್ಲಿ…
Alcohol In Winter: ಚಳಿಯಲ್ಲಿ ಮದ್ಯ ಸೇವನೆ ಎಷ್ಟು ಅಪಾಯಕಾರಿ ಗೊತ್ತಾ?
Alcohol In Winter: ಚಳಿಗಾಲ ಆರಂಭವಾಗಿದೆ ಮತ್ತು ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಲ್ಲದೆ, ಜ್ವರ…