More

  ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ವೇದವರ್ಧನ ತೀರ್ಥ ಶ್ರೀಪಾದರು ಭೇಟಿ

  ಪಡುಬಿದ್ರಿ: ದಕ್ಷಿಣ ಭಾರತದಲ್ಲೇ ಅದ್ವಿತೀಯವೆಂಬಂತೆ ಹೊಸ ಮಾರಿಗುಡಿಯ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಮಾರಿಗುಡಿಯ ಜೀರ್ಣೋದ್ಧಾರ ಮೂಲಕ ಎಲ್ಲರಿಗೂ ತಾಯಿಯ ಸೇವೆ ಮಾಡುವ ಅವಕಾಶ ಮತ್ತು ಭಾಗ್ಯ ಒದಗಿಬಂದಿದೆ ಎಂದು ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.

  ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ, ಮಾರಿಯಮ್ಮ ದೇವಿ ದರ್ಶನ ಮಾಡಿ, ಆರತಿ ಬೆಳಗಿ ಬಳಿಕ ಭರದಿಂದ ಸಾಗುತ್ತಿರುವ ಸಮಗ್ರ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿ ಆಶೀರ್ವಚನ ನೀಡಿದರು.

  ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಜೀರ್ಣೋದ್ಧಾರ ಕಾಮಗಾರಿ ಮತ್ತು ಕಾಮಗಾರಿ ನಡೆದು ಬಂದ ಹಾದಿ ಬಗ್ಗೆ ಸ್ವಾಮೀಜಿಗೆ ವಿವರಿಸಿದರು. ಮಾರಿಗುಡಿ ದೇವಸ್ಥಾನ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ ಶೀರೂರು ಶ್ರೀಗಳನ್ನು ಗೌರವಿಸಿದರು.

  ಶೀರೂರು ಮಠದ ದಿವಾನ ಉದಯ್ ಕುಮಾರ್ ಸರಳತ್ತಾಯ, ಪಾರುಪತ್ಯಗಾರ ಶ್ರೀಶ ಭಟ್ ಕಡೆಕಾರು, ಮಾರಿಗುಡಿ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಅನಿಲ್ ಬಲ್ಲಾಳ್ ಕಾಪು ಬೀಡು, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ್ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ.ಶೆಟ್ಟಿ ಬಾಲಾಜಿ, ಡಾ.ಸೀತಾರಾಮ್ ಭಟ್ ದಂಡತೀರ್ಥ, ಗೌರವ ಸಲಹೆಗಾರ ನಿರ್ಮಲ್ ಕುಮಾರ್ ಹೆಗ್ಡೆ, ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿ ಪ್ರಧಾನ ಸಂಚಾಲಕ ಶ್ರೀಕರ ಶೆಟ್ಟಿ ಕಲ್ಯ, ಕಚೆೇರಿ ನಿರ್ವಹಣಾ ಸಮಿತಿ ಪ್ರಧಾನ ಸಂಚಾಲಕ ಮಧುಕರ್ ಎಸ್., ಪ್ರಚಾರ ಸಮಿತಿ ಸಂಚಾಲಕ ಜಯರಾಮ್ ಆಚಾರ್ಯ, ಶ್ರೀಧರ್ ಕಾಂಚನ್, ಗ್ರಾಮ ಸಮಿತಿ ಮಹಿಳಾ ಮುಖ್ಯ ಸಂಚಾಲಕರಾದ ಗೀತಾಂಜಲಿ ಎಂ. ಸುವರ್ಣ, ಶಿಲ್ಪಾ ಜಿ. ಸುವರ್ಣ, ಶೈಲಪುತ್ರಿ ತಂಡದ ಸಂಚಾಲಕರಾದ ರವಿ ಭಟ್ ಮಂದಾರ, ಲಕ್ಷ್ಮೀಶ ತಂತ್ರಿ, ರಾಧಾರಮಣ ಶಾಸ್ತ್ರಿ, ದೇಗುಲದ ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

  ಜಗದಗಲದಲ್ಲಿ ಹರಡಿರುವ ಕಾಪು ಮಾರಿಯಮ್ಮ ದೇವಿ ಎಲ್ಲ ಭಕ್ತರ ಸಹಕಾರದೊಂದಿಗೆ ಕ್ಷೇತ್ರದ ಸಮಗ್ರ ಜೀರ್ಣೋದ್ಧಾರ ಕಾರ್ಯ ಯೋಜನೆ, ಯೋಚನೆಯಂತೆ ಸುಂದರವಾಗಿ ಮೂಡಿ ಬಂದು, ಅಮ್ಮನಿಗೆ ಶೀಘ್ರದಲ್ಲೇ ಆಲಯ ಸಮರ್ಪಣೆಯಾಗಲಿ. ಅಮ್ಮನ ಸೇವೆಯಲ್ಲಿ ನಿರತರಾಗಿರುವ ಸಮಸ್ತ ಭಕ್ತರಿಗೂ ಉಡುಪಿ ಶ್ರೀ ಕೃಷ್ಣ ಮುಖ್ಯಪ್ರಾಣರ ಪೂರ್ಣಾನುಗ್ರಹ ಪ್ರಾಪ್ತವಾಗಲಿ.
  -ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶೀರೂರು ಮಠ

  See also  ‘ಕರ್ನಾಟಕ ಮಾದರಿ’ ತಿಳಿಯಲು ಆರ್ಥಿಕ ಪ್ರಗತಿ ಕಾರ್ಡ್ ಜನರ ಮುಂದಿಡಿ: ಆರ್.ಅಶೋಕ್ ಆಗ್ರಹ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts