ವಿಡಿಎಸ್ ಕ್ಲಾಸಿಕ್ ಸಿ ಬಿ ಎಸ್ ಇ ಶಾಲೆಯ ವಾರ್ಷಿಕೋತ್ಸವ.

blank
ಗದಗ: ನಗರದ ಶತಮಾನ ಪೂರೈಸಿದ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ವಿದ್ಯಾದಾನ ಸಮಿತಿ ಕ್ಲಾಸಿಕ್ ಆಂಗ್ಲ ಮಾಧ್ಯಮ ಸಿ ಬಿ ಎಸ್ ಇ ಶಾಲೆಯಲ್ಲಿ ಇತ್ತೀಚೆಗೆ 11ನೇ ಶಾಲಾ ವಾರ್ಷಿಕೋತ್ಸವವನ್ನು “ಜೈ ಜವಾನ್ ಜೈ ಕಿಸಾನ್” ಎಂಬ ಶೀರ್ಷಿಕೆ ಅಡಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ,  ಜಿಲ್ಲಾ ಪ್ರಗತಿಪರ ರೈತರಾದ ಶ್ರೀ ಆರ್. ಬಿ. ಕುಲಕರ್ಣಿ, ಗದಗ ನಗರದ ಹೆಸರಾಂತ ವೈದ್ಯರಾದ  ಡಾ.  ರಾಜೇಶ್ ಜನ್ನಾ, ಉನ್ನತಿ ಟ್ಯುಟೋರಿಯಲ್ ಸಂಸ್ಥಾಪಕರಾದ ಶ್ರೀಮತಿ ರಶ್ಮಿ ಜನ್ನಾ, ನಿರ್ದೇಶಕರಾದ ಡಾ. ಪವನ್. ಎಸ್. ಹುಯಿಲಗೋಳ, ಶೈಕ್ಷಣಿಕ ಮಾರ್ಗದರ್ಶಕರಾದ ಶ್ರೀ ಪ್ರತೀಕ. ಎಸ್. ಹುಯಿಲಗೋಳ, ಆಡಳಿತ ಅಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ ಹಾಗೂ ಸಿ ಆರ್ ಪಿ ಶ್ರೀ ರವಿ. ಎಂ. ಹೆಬ್ಬಳ್ಳಿ ರವರು ಜ್ಯೋತಿ ಬೆಳಗಿಸುವುದರ ಮೂಲಕ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗದಗ ಜಿಲ್ಲಾ ಪ್ರಗತಿಪರ ರೈತರಾದ ಶ್ರೀ ಆರ್. ಬಿ. ಕುಲಕರ್ಣಿ ಅವರು ನಾನಾ ಕ್ಷೇತ್ರಗಳಿಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡಿದ ಸಂಸ್ಥೆ ವಿದ್ಯಾದಾನ ಸಮಿತಿ. ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳು ತಮ್ಮ ಅಭ್ಯಾಸದ ಜೊತೆಗೆ ಕೃಷಿಯ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು, ಜೊತೆಗೆ ತಮ್ಮ ಪಿತ್ರಾರ್ಜಿತ ಕೃಷಿ ಭೂಮಿ ಇದ್ದಲ್ಲಿ ತಮ್ಮ ಪಾಲಕರು ರೈತರಾಗಿದ್ದರೆ ಪಾಲಕರಿಗೆ ಕೃಷಿಯ ಕೆಲಸದಲ್ಲಿ ಕೈಜೋಡಿಸಬೇಕು ಹಾಗೂ ಕೃಷಿಯ ಮಹತ್ವ ತಿಳಿದುಕೊಳ್ಳಬೇಕು. ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂಬಂತೆ ಇಡೀ ಜಗತ್ತು ನಿಂತಿರುವುದು ರೈತನ ಮೇಲೆ ಹಾಗಾಗಿ ರೈತರಿಗೆ ತಮ್ಮದೇ ಆದ ಮಹತ್ವವಿದೆ. ಇತ್ತೀಚಿನ ದಿನಗಳಲ್ಲಿ ನಗರೀಕರಣ ದಿಂದ ಕೃಷಿಯು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಾ ಇದೆ ಅಷ್ಟೇ ಅಲ್ಲದೆ ಪಾಲಕರು ತಮ್ಮ ಮಕ್ಕಳನ್ನು ಕೃಷಿಯಲ್ಲಿ ತೊಡಗಿಸದೇ ಸರಕಾರಿ ನೌಕರಿ ಸೇರಿಸುವ ಹಂಬಲದಿಂದ ಹೆಚ್ಚಿನ ವಿದ್ಯೆಯನ್ನು ಕೊಡಿಸುತ್ತಾರೆ, ಆದರೆ ಕೆಲವು ವಿದ್ಯಾರ್ಥಿಗಳು ಒಳ್ಳೆಯ ಅಭ್ಯಾಸ ಮಾಡಿ ನೌಕರಿ ಸೇರಿದರೆ, ಇನ್ನೂ ಕೆಲವು ವಿದ್ಯಾರ್ಥಿಗಳು ನೌಕರಿಗೆ ಸೇರದೆ ಕೃಷಿಯ ಕೆಲಸ ಮಾಡದೇ ಕೆಲಸವಿಲ್ಲದೆ ಖಾಲಿ ಕೂಡುವ  ಸಂದರ್ಭವಿದೆ, ಆದರೆ ಪಾಲಕರು ಇದನ್ನರಿತು ತಮ್ಮ ಮಕ್ಕಳು ಚಿಕ್ಕವರಿದ್ದಾಗಲೇ ಅವರನ್ನು ಕೃಷಿಯಲ್ಲಿ ತೊಡಗಿಸಿಕೊಂಡು ವಿದ್ಯಾಭ್ಯಾಸ ಕೊಡಿಸಿದ್ದೆ ಆದರೆ ನಮ್ಮ ಭಾರತದಲ್ಲಿ ನಿರುದ್ಯೋಗ ಎಂಬ ಭೂತವನ್ನು ತೊಡಗಿಸಲು ಸಾಧ್ಯ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು ಎಂಬಂತೆ ನಾವೆಲ್ಲರೂ ಕೃಷಿಯನ್ನು ಪ್ರೀತಿಸಿ, ರೈತರನ್ನು ಗೌರವಿಸಿ ಜೀವನ ಮಾಡಬೇಕು. ಸರ್ಕಾರವು ಪಠ್ಯಪುಸ್ತಕದಲ್ಲಿ ಕೃಷಿಯ ಹಾಗೂ ರೈತರ ಕುರಿತು ಹೆಚ್ಚಿನ ಪಠ್ಯಾಂಶಗಳನ್ನು ಅಳವಡಿಸಿ ವಿದ್ಯಾರ್ಥಿ ಜೀವನದಲ್ಲಿ ಮಕ್ಕಳಿಗೆ ಕೃಷಿಯ ಬಗ್ಗೆ ತರಬೇತಿ ನೀಡುವ ಪ್ರಯತ್ನ ಮಾಡಬೇಕು ಎಂದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಶ್ರೀನಿವಾಸ ಹುಯಿಲಗೋಳ ರವರು ಮಕ್ಕಳು ಚಿಕ್ಕಂದಿನಿಂದಲೆ ವೇದಿಕೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಬುದ್ಧಿಶಕ್ತಿ, ಧೈರ್ಯ ಹೆಚ್ಚುವುದರ ಜೊತೆಗೆ ಭಯ ಹೋಗಲಾಡಿಸಬಹುದು. ವರ್ಷದ ಶಾಲಾ ವಾರ್ಷಿಕೋತ್ಸವದ ಮನರಂಜನೆಗಳಲ್ಲಿ ಭಾಗವಹಿಸುವುದರಿಂದ ಮಗುವಿಗೆ ಸಾಮಾಜಿಕರಣ ಹಾಗೂ ಸಾಂಸ್ಕೃತಿಕ ಶಿಸ್ತನ್ನು ಬೆಳೆಸಿಕೊಳ್ಳಲಿಕ್ಕೆ ಸಹಾಯಕವಾಗುತ್ತದೆ, ಇದಕ್ಕೆ ಪಾಲಕರ ಸಹಮತವು ಇರಬೇಕಿದೆ  ಎಂದು ತಮ್ಮ ಅಧ್ಯಕ್ಷೀಯ ನುಡಿಗಳನ್ನು ಹೇಳಿದರು.
ಶಾಲೆಯ ಆಡಳಿತ ಅಧಿಕಾರಿಗಳಾದ ಡಾ. ಗಂಗೂಬಾಯಿ ಪವಾರ ರವರು ಶತಮಾನದ ವಿದ್ಯಾದಾನ ಸಮಿತಿಯು ಬೆಳೆದ ಬಂದ ಹಿನ್ನೆಲೆ ಹಾಗೂ ಕ್ಲಾಸಿಕ್ ಶಾಲೆಯ ಶೈಕ್ಷಣಿಕ ಸಾಧನೆ ಕುರಿತು ತಮ್ಮ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು.
ಉನ್ನತಿ ಟ್ಯುಟೋರಿಯಲ್ ಸಂಸ್ಥಾಪಕರಾದ ಶ್ರೀಮತಿ ರಶ್ಮಿ ಜನ್ನಾ ರವರು ಸಂಸ್ಕೃತದ ಕೆಲವು ಶ್ಲೋಕಗಳನ್ನು ಹೇಳುವುದರ ಜೊತೆಗೆ ಅವುಗಳ ಅರ್ಥ ಸಹಿತ ಮಕ್ಕಳಿಗೆ ತಿಳಿಸಿ, ವಿದ್ಯಾರ್ಥಿಗಳು ಶಾಲಾ ಜೀವನದಲ್ಲಿ ಶ್ಲೋಕಗಳನ್ನು ಅಭ್ಯಾಸ ಮಾಡಿ ಭಾರತದ  ಸಂಪ್ರದಾಯ ಪದ್ಧತಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶಿಸ್ತಿನ ಸಿಪಾಯಿಗಳಾಗಿ ಜೀವನ ನಡೆಸಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಾಲೆಯ ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ ರವರು ಶಾಲಾ ವಾರ್ಷಿಕ ವರದಿಯನ್ನು ವಾಚಿಸಿದರು. ಶಾಲೆಯ ಉಪ ಪ್ರಾಚಾರ್ಯರಾದ ಶ್ರೀ ಅಕ್ಷಯ್. ಜಿ. ಹಾಗೂ ಶ್ರೀಮತಿ ಎ. ಎಚ್. ಬಾಗಲಕೋಟೆ ರವರು ಅತಿಥಿಗಳ ಪರಿಚಯವನ್ನು ಪರಿಚಯಿಸಿದರು. ಇದೇ ವೇಳೆ ಮುಖ್ಯ ಅತಿಥಿಗಳಾದ ಶ್ರೀ ಆರ್. ಬಿ. ಕುಲಕರ್ಣಿ, ಡಾ. ರಾಜೇಶ್ ಜನ್ನಾ ಹಾಗೂ ಶ್ರೀಮತಿ ರಶ್ಮಿ ಜನ್ನಾ, ಶಾಲೆಗೆ ದೇಣಿಗೆ ನೀಡಿದ ಶ್ರೀ ಸತ್ಯಪ್ಪ ಬೇಲೇರಿ ಕುಟುಂಬವನ್ನು ಮತ್ತು ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕೃತರಾದ ಶಾಲಾ ಪ್ರಾಚಾರ್ಯರಾದ ಶ್ರೀ ಎಂ. ಆರ್. ಡೊಳ್ಳಿನ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ತರಗತಿವಾರು ಆದರ್ಶ ವಿದ್ಯಾರ್ಥಿಗಳನ್ನು ಹಾಗೂ ಶಾಲಾ ವತಿಯಿಂದ ಉತ್ತಮ ವಿದ್ಯಾರ್ಥಿನಿ ಕು. ಅರ್ಪಿತಾ ನಿಕ್ಕಂ ರವರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು. ಆಟೋಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಕು. ದಿವ್ಯಾಶ್ರಿ ಪೂಜಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಶಾಲಾ ಶಿಕ್ಷಕಿಯರಾದ ಶ್ರೀಮತಿ ಅರ್ಚನಾ ಗಿರಿತಿಮ್ಮಣ್ಣವರ್ ನಿರೂಪಿಸಿದರು, ಕು. ಗಾಯತ್ರಿ ಅಸುಂಡಿ ಸ್ವಾಗತಿಸಿದರು, ಶ್ರೀಮತಿ ಪ್ರಭಾವತಿ ಹಿರೇಮಠ ವಂದಿಸಿದರು. ನಂತರ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಡಾ. ರಾಜೇಶ್ ಜನ್ನಾ, ಸಂಸ್ಥೆಯ ನಿರ್ದೇಶಕರಾದ ಡಾ. ಪವನ. ಎಸ್. ಹುಯಿಲಗೋಳ, ಶ್ರೀ ಪ್ರತೀಕ. ಎಸ್. ಹುಯಿಲಗೋಳ, ಸಿ ಆರ್ ಪಿ ಶ್ರೀ ರವಿ. ಎಂ. ಹೆಬ್ಬಳ್ಳಿ, ಜೆ. ಎನ್. ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಿ. ಎಲ್. ಚವಾಣ್, ಶ್ರೀ ಪಿ. ಎಚ್. ಕಡಿವಾಲ, ಮುಖ್ಯೋಪಾಧ್ಯಾಯರಾದ ಶ್ರೀ ಆರ್. ಆರ್. ಜಾಲಿಹಾಳ, ಶ್ರೀ ಎಂ. ವಿ. ಹವಾಲ್ದಾರ, ಶ್ರೀ ಎಂ. ಆರ್. ಡೊಳ್ಳಿನ, ಶ್ರೀ ಅಕ್ಷಯ್. ಜಿ, ಹಾಗೂ ಕು. ಅರ್ಪಿತಾ ನಿಕ್ಕಂ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಅಂಗ ಸಂಸ್ಥೆಯ ಮುಖ್ಯಸ್ಥರು, ಉಪನ್ಯಾಸಕರು, ಸಮಸ್ತ ಶಿಕ್ಷಕ/ಶಿಕ್ಷಕಿಯರು, ಸಿಬ್ಬಂದಿ ವರ್ಗದವರು, ಪಾಲಕರು, ಸುದ್ದಿ ವರದಿಗಾರರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
TAGGED:
Share This Article

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಪ್ಪು ನೀರು ಕುಡಿಯುವುದರಿಂದ ಏನು ಪ್ರಯೋಜನ; ಇಲ್ಲಿದೆ ನಿಮಗಾಗಿ ಹೆಲ್ತಿ ಮಾಹಿತಿ | Health Tips

ಬೆಳಗ್ಗೆ ಎದ್ದ ನಂತರ ನೀರು ಕುಡಿಯುವ ಅಭ್ಯಾಸವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ…

ಮಲಬದ್ಧತೆ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ಯಾ?; ಈ ತರಕಾರಿಗಳಿಂದ ತೊಂದರೆ ನಿವಾರಣೆ ಗ್ಯಾರಂಟಿ | Health Tips

ಮಲಬದ್ಧತೆ ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಯಾಗಿದೆ. ನಿಮ್ಮ ಕರುಳುಗಳು ಸರಿಯಾಗಿ…

ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಲು ಉತ್ತಮ ಮದ್ದು ತೆಂಗಿನ ಎಣ್ಣೆ; ಈ ಬಗ್ಗೆ ತಜ್ಞರು ಹೇಳೋದೇನು | Health Tips

ಗರ್ಭಾವಸ್ಥೆಯಲ್ಲಿ ಹಿಗ್ಗಿಸಲಾದ ಗುರುತುಗಳು ಇರುವುದು ಸಹಜ. ಕೆಲವೊಮ್ಮೆ ಈ ಗುರುತುಗಳು ತಾವಾಗಿಯೇ ಮಾಯವಾಗುತ್ತವೆ ಮತ್ತು ಕೆಲವೊಮ್ಮೆ…