ಬಸವನಬಾಗೇವಾಡಿ: ಗ್ರಾಹಕರ ಅನುಕೂಲಕ್ಕಾಗಿ ಬ್ಯಾಂಕ್ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಗ್ರಾಹಕರು ಅವುಗಳ ಪ್ರಯೋಜನ ಪಡೆಯಬೇಕು ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ತಿಳಿಸಿದರು.
ತಾಲೂಕಿನ ಮನಗೂಳಿ ಪಟ್ಟಣದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶಾಖೆಯಲ್ಲಿ 500 ದಿನಗಳ ಶೇ.8ರ ಬಡ್ಡಿದರದಲ್ಲಿ ವಿಶೇಷ ಠೇವಣಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಯೋಜನೆ ಮೊದಲು ಹಿರಿಯ ನಾಗರಿಕರಿಗೆ ಮಾತ್ರ ಸಿಮೀತವಾಗಿತ್ತು. ಆದರೆ ಇಂದಿನಿಂದ ಜಿಲ್ಲೆಯ ಎಲ್ಲಾ ನಾಗರಿಕರು ಅನ್ವಯಿಸುತ್ತದೆ. ಗ್ರಾಹಕರು ಇದರ ಲಾಭ ಪಡೆದುಕೊಳ್ಳಿ ಎಂದರು.
ವಿಶೇಷ ಠೇವಣಿ ಅಡಿಯಲ್ಲಿ ಹೊಸದಾಗಿ ಠೇವಣಿ ಮಾಡಲಾದ ಗ್ರಾಹಕರಿಗೆ ಮನಗೂಳಿ ಶಾಖೆಯಲ್ಲಿ ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಅವರಿಂದ ಎ್.ಡಿ ಕಾರ್ಡ್ ವಿತರಿಸಲಾಯಿತು ಮನಗೂಳಿ ಶಾಖಾ ವ್ಯವಸ್ಥಾಪಕ ಎಂ.ವಿ. ಕೊಳಕೂರ ಸಿಬ್ಬಂದಿ ಇತರರಿದ್ದರು.