More

    ಕಾಂಗ್ರೆಸ್​ ಆಡಳಿತದಲ್ಲಿ ನಾಯಕರು ಅಭಿವೃದ್ಧಿ

    ಕೋಲಾರ: ಬಿಜೆಪಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದರೆ ರಾಷ್ಟ್ರ ವಿರೋಧಿಗಳನ್ನು ಬೆಂಬಲಿಸುತ್ತ ಅಭಿವೃದ್ಧಿ ಹೆಸರಿನಲ್ಲಿ ತಾವೂ ಅಭಿವೃದ್ಧಿಯಾಗುವುದು, ಹುಸಿ ಭರವಸೆಗಳನ್ನು ನೀಡುವುದು ಕಾಂಗ್ರೆಸ್ಸಿಗರ ಜಾಯಮಾನ ಎಂದು ಸಂಸದ ಎಸ್.ಮುನಿಸ್ವಾಮಿ ಟೀಕಿಸಿದರು.
    ನಗರದ ಗಾಂಧಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಆರ್​.ವರ್ತೂರು ಪ್ರಕಾಶ್​ ಪರ ಪ್ರಚಾರ ಕೈಗೊಂಡು ಮಾತನಾಡಿದರು. ಕಾಂಗ್ರೆಸ್​ 2013ಕ್ಕೂ ಹಿಂದೆ ಕೊಟ್ಟಿದ್ದ ಭರವಸೆಗಳನ್ನು ಇಲ್ಲಿ ತನಕ ಈಡೇರಿಸಿರಲಿಲ್ಲ. ಭ್ರಷ್ಟಾಚಾರ ಅವರ ಅವಧಿಯಲ್ಲಿ ಮುಗಿಲು ಮುಟ್ಟಿತ್ತು. 2014ರಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಆ ಭರವಸೆಗಳೂ ಸೇರಿ ಅಭಿವೃದ್ಧಿ ವೇಗ ಹೆಚ್ಚಿಸಲಾಯಿತು. ಫಲಾನುಭವಿಗಳ ಬ್ಯಾಂಕ್​ ಅಕೌಂಟ್​ಗೆ ನೇರ ಹಣ ವರ್ಗಾವಣೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಪಾರದರ್ಶಕ ಆಡಳಿತಕ್ಕೆ ಮುನ್ನುಡಿ ಬರೆದರು ಎಂದರು.
    ಉಚಿತವಾಗಿ ವರ್ಷಕ್ಕೆ 3 ಸಿಲಿಂಡರ್​, ಪ್ರತಿ ದಿನ ಅರ್ಧ ಲೀಟರ್​ ಹಾಲು, ಬಡವರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಆರ್ಥಿಕ ಸಹಾಯ ಸೇರಿ ಹಲವು ಭರವಸೆಗಳನ್ನು ಬಿಜೆಪಿ ನೀಡಿದ್ದು, ಎಲ್ಲವನ್ನೂ ಈಡೇರಿಸುತ್ತೇವೆ ಎಂದರು.
    ಅಭ್ಯರ್ಥಿ ಆರ್​.ವರ್ತೂರ್​ ಪ್ರಕಾಶ್​ ಮಾತನಾಡಿ, ಕಾಂಗ್ರೆಸ್​ 60 ವರ್ಷ ದಲಿತರನ್ನು ಬಳಸಿಕೊಂಡು, ಅವರಿಗಾಗಿ ಯಾವ ಕೊಡುಗೆ ಕೊಡಲಿಲ್ಲ. ಚುನಾವಣೆ ಬಂದಾಗ ಮಾತ್ರ ಅಂಬೇಡ್ಕರ್​ ನೆನಪು ಬರುತ್ತದೆ. ಇಂತಹ ಪಕ್ಷಕ್ಕೆ ದಲಿತರು ಮತ ನೀಡಬೇಡಿ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂದರು.
    ನಗರಸಭಾ ಸದಸ್ಯ ಪ್ರವಿಣ್​ಗೌಡ, ಜಿಪಂ ಮಾಜಿ ಸದಸ್ಯೆ ರೂಪಶ್ರೀ ಮಂಜುನಾಥ್​, ಕುಡಾ ಅಧ್ಯಕ್ಷ ವಿಜಯ್​ ಕುಮಾರ್​, ನಗರ ಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಮುಖಂಡರಾದ ಅಪ್ಪಿ, ವೆಂಕಟೇಶ್​, ಮಹೇಶ್​ ಇತರರು ಇದ್ದರು.

    ರಾಜ್ಯದಲ್ಲಿ ಕಾಂಗ್ರೆಸ್​, ಜೆಡಿಎಸ್​ಗಿಲ್ಲ ಭದ್ರನೆಲೆ

    ವೇಮಗಲ್​: ಕ್ಷೇತ್ರದಲ್ಲಿ ಜೆಡಿಎಸ್​ ಮತ್ತು ಕಾಂಗ್ರೆಸ್​ಗೆ ಭದ್ರ ನೆಲೆಯಿಲ್ಲ. ಇವೆರಡೂ ಪಕ್ಷಗಳು ಕಾರ್ಯಕರ್ತರನ್ನು ಚುನಾವಣೆ ಬಂದಾಗ ಬಳಸಿಕೊಂಡು ಬಳಿಕ ತಾತ್ಸಾರ ಮಾಡುತ್ತ ಬಂದಿರುವುದೇ ಇದಕ್ಕೆ ಕಾರಣ ಎಂದು ಬಿಜೆಪಿ ಅಭ್ಯರ್ಥಿ ಆರ್​.ವರ್ತೂರು ಪ್ರಕಾಶ್​ ಆರೋಪಿಸಿದರು.
    ವೇಮಗಲ್​ನಲ್ಲಿ ಜೆಡಿಎಸ್​ ತೊರೆದು ಬಂದ ಹಲವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಜಾತಿ, ಮತ, ಪಕ್ಷ ನೋಡದೆ ಸಹಾಯ ಮಾಡಿದ್ದೇನೆ. ಬಡವರ ಕೆಲಸ ಮಾಡಿಕೊಡದವರನ್ನು ದಂಡಿಸಿದ್ದೇನೆ. ಹೀಗಾಗಿಯೇ ಜೆಡಿಎಸ್​ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ ಎಂದರು.
    ಜೆಡಿಎಸ್​ ಕುಟುಂಬ ರಾಜಕಾರಣದ ಪಕ್ಷ. ಹೀಗಾಗಿ ಜನಬೆಂಬಲ ಆ ಪಕ್ಷಕ್ಕಿಲ್ಲ. ಕೆಲವರು ಆ ಪಕ್ಷದ ಅಭ್ಯರ್ಥಿಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಶೇ.70ರಿಂದ 90 ಬಿಜೆಪಿ ಕಾರ್ಯಕರ್ತರಿದ್ದಾರೆ ಎಂದರು.
    ಜೆಡಿಎಸ್​ ತೊರೆದು ಬಿಜೆಪಿ ಸೇರ್ಪಡೆಗೊಂಡ ಗ್ರಾಪಂ ಸದಸ್ಯರಾದ ನವೀನ್​ ಕುಮಾರ್​ ಮತ್ತು ಕುರುಬರಹಳ್ಳಿ ಕುಮಾರ್​ ಮಾತನಾಡಿ, ಜೆಡಿಎಸ್​ನಲ್ಲಿ ಉಸಿರು ಕಟ್ಟಿದ ವಾತಾವರಣವಿದ್ದು, ಯುವಕರನ್ನು ಬೆಳೆಸುವುದಿಲ್ಲ. ಅಭಿವೃದ್ಧಿ, ಬಡವರ ಕಷ್ಟ ಆ ಪಕ್ಷದ ನಾಯಕರಿಗೆ ತಿಳಿಯದು. ಹೀಗಾಗಿ ಬಿಜೆಪಿ ಸೇರ್ಪಡೆಗೊಂಡಿದ್ದೇವೆ ಎಂದರು. ಮುಖಂಡರಾದ ಸ್ಟುಡಿಯೋ ಶಿವಶಂಕರ್​, ಮಂಜುನಾಥ್​, ನಿವೃತ್ತ ಶಿಕ್ಷಕ ಗೋಪಾಲಪ್ಪ, ಮುನಿರಾಜು ಮತ್ತಿತರರು ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಪೊಲೀಸ್​ ಚಲಪತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts